ಮೈಸೂರು: ಸಾರ್ವಜನಿಕ ರಸ್ತೆ ಯಲ್ಲಿ ನಿರ್ಮಿಸಲಾಗಿದೆ ಎಂಬ ದೂರಿನನ್ವಯ ಮನೆ ತೆರವುಗೊಳಿಸಲು ಮುಂದಾದ ಪಾಲಿಕೆ ಅಧಿಕಾರಿಗಳು, ಮಾಲೀಕ ಹಾಗೂ ಅವರ ಸಂಬಂಧಿಕರ ತೀವ್ರ ವಿರೋ ಧದ ಹಿನ್ನೆಲೆಯಲ್ಲಿ ಬರಿಗೈಲಿ ಹಿಂದಿರುಗಿದ ಪ್ರಸಂಗ ಮೈಸೂರಿನ ಕುರುಬಾರಹಳ್ಳಿಯಲ್ಲಿ ಇಂದು ಬೆಳಿಗ್ಗೆ ಜರುಗಿದೆ.
ಕುರುಬಾರಹಳ್ಳಿ 3ನೇ ಕ್ರಾಸ್‍ನಲ್ಲಿರುವ 77/1ನೇ ಸಂಖ್ಯೆಯ ಮನೆಗೆ ಹೊಂದಿಕೊಂಡಂತೆ ಸಾರ್ವಜನಿಕ ರಸ್ತೆಯಲ್ಲಿ ಮನೆ ನಿರ್ಮಿಸಲಾಗಿದ್ದು, ಓಡಾಡಲು ತೊಂದರೆಯಾಗಿರುವುದರಿಂದ ಕಟ್ಟಡ ತೆರವುಗೊಳಿಸು ವಂತೆ ಕುರುಬಾರಹಳ್ಳಿ ಜೆ.ಪ್ರಕಾಶ್ ಎಂಬುವರು ನೀಡಿದ ದೂರಿನನ್ವಯ ಪಾಲಿಕೆ ಆಯುಕ್ತರ ಸೂಚನೆಯಂತೆ ತಾವು ಪೊಲೀಸ್ ಭದ್ರತೆ ಪಡೆದು ಸ್ಥಳಕ್ಕೆ ತೆರಳಿದಾಗ ಮನೆ ಮಾಲೀಕರೆನ್ನಲಾದ ಪುಟ್ಟರಾಜು ಹಾಗೂ ಇತ ರರು ತೀವ್ರ ವಿರೋಧ ವ್ಯಕ್ತಪಡಿಸಿದರು ಎಂದು ಮೈಸೂರು ಮಹಾನಗರ ಪಾಲಿಕೆ ವಲಯ-9ರ ವಲಯಾಧಿಕಾರಿ ಮುರಳೀಧರ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
ಕೆಲ ದಾಖಲೆ ಪತ್ರಗಳ ಮೂಲ ಪತ್ರಗಳನ್ನು ತೋರಿ ಸಿದ ಅವರು, ತಮಗೆ ಖಾತೆಯಾಗಿ ಕಂದಾಯ ಪಾವತಿ ಸುತ್ತಾ ಬಂದಿದ್ದೇವೆ. ಈ ಹಿಂದೆ ರಸ್ತೆ ಇದ್ದದ್ದು ನಿಜ. ತದನಂತರ ರಸ್ತೆಯನ್ನು ಪಕ್ಕಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವಾದಿಸಿದರು. ಕಟ್ಟಡ ತೆರವಿಗೆ ಅಡ್ಡಿಪಡಿಸಿದಾಗ ಗದ್ದಲ ಉಂಟಾದ್ದರಿಂದ ನಾವು ವಾಪಸ್ಸಾಗಬೇಕಾಯಿತು ಎಂದು ತಿಳಿಸಿದರು.
ಈ ಹಿಂದೆ ಸಿಐಟಿಬಿಯಿಂದ ಹಂಚಿಕೆಯಾದ ಈ ನಿವೇಶನದ ಮೂಲ ನಕ್ಷೆ, ಟೈಟಲ್ ಡೀಡ್, ಚಕ್ಕುಬಂದಿ ದಾಖಲಾತಿಗಳನ್ನು ಪಡೆದು ಪರಿಶೀಲಿಸಿ, ಅದು ಸಾರ್ವಜನಿಕ ರಸ್ತೆ ಎಂಬುದು ದೃಢಪಟ್ಟಲ್ಲಿ ಮತ್ತೆ ಬಂದು ನೆಲಸಮಗೊಳಿಸುತ್ತೇವೆ ಎಂದು ತಿಳಿಸಿ, ನಾವು ಹಿಂದಿರುಗಿದ್ದೇವೆ ಎಂದು ಮುರಳೀಧರ ತಿಳಿಸಿದರು.
ಖಾತೆ ಇದೆ, ಕಂದಾಯ ಪಾವತಿಸುತ್ತಿದ್ದೇವೆ: ಈ ನಡುವೆ ಕುರುಬಾರಹಳ್ಳಿಯ ಲೇಟ್ ಜೆ.ನಂಜಯ್ಯ ಅವರ ಮಗ ಎಂ.ಎನ್.ಸತೀಶ್ ಪತ್ರಿಕಾ ಹೇಳಿಕೆ ನೀಡಿ, ಸದರಿ ಮನೆ ತಮ್ಮ ಸ್ವಂತದ್ದಾಗಿದ್ದು, ಸಂಬಂಧಪಟ್ಟ ಖಾತೆ ಇದೆ, ಕಂದಾಯ ವನ್ನು ಸಹ ನಾವೇ ಪಾವತಿಸುತ್ತಾ ಬಂದಿದ್ದೇವೆ. ಮನೆಯ ಹಿಂಭಾಗ ಹಸುವಿನ ಕೊಟ್ಟಿಗೆ ಇದ್ದು, ಮಳೆಯಿಂದ ಕುಸಿದಿದ್ದರಿಂದ ರಿಪೇರಿ ಮಾಡಿಸಿಕೊಳ್ಳುತ್ತಿದ್ದೇವಷ್ಟೆ. ನಮ್ಮ ಬೆಳವಣ ಗೆ ಸಹಿಸದ ಕೆಲವರು ಸುಳ್ಳು ದಾಖಲೆ ನೀಡಿ, ಇದು ರಸ್ತೆ ಎಂದು ಬಿಂಬಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಆ ಸಂಬಂಧ ಮೂಲ ನಕ್ಷೆ ಹಾಗೂ ಇತರ ದಾಖಲೆ ಕೋರಿದ ನಮಗೆ ದಾಖಲೆ ಲಭ್ಯವಿಲ್ಲ ಎಂದು ಮುಡಾದವರು ಹಿಂಬರಹ ಸಹ ನೀಡಿದ್ದಾರೆ ಎಂದು ಸತೀಶ್ ತಿಳಿಸಿದ್ದಾರೆ.