ತಂಬಾಕು ಉತ್ಪನ್ನಗಳ ವಿರುದ್ಧ ವಿದ್ಯಾರ್ಥಿ ಜಾಗೃತಿ ಅಭಿಯಾನ
ಮೈಸೂರು

ತಂಬಾಕು ಉತ್ಪನ್ನಗಳ ವಿರುದ್ಧ ವಿದ್ಯಾರ್ಥಿ ಜಾಗೃತಿ ಅಭಿಯಾನ

June 1, 2018

ಮೈಸೂರು: ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪÀದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮೈಸೂರಿನ ರೆಡ್ ಎಫ್‍ಎಂ 93.5 ವತಿಯಿಂದ ತಂಬಾಕು ಉತ್ಪನ್ನಗಳ ವಿರುದ್ಧ ಜಾಗೃತಿ ಅಭಿಯಾನ ನಡೆಸಲಾಯಿತು.

ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಅವರು ತಂಬಾಕು ಬೇಡ ಎಂದು ಸಹಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆರಂಭದಲ್ಲಿ ಕುತೂಹಲದಿಂದ ತಂಬಾಕು ಉತ್ಪನ್ನಗಳನ್ನು ಬಳಸಲು ಪ್ರಾರಂಭಿಸುವ ವಿದ್ಯಾರ್ಥಿಗಳು, ತದ£ಂತರ ಆ ಕೆಟ್ಟ ಚಟದಿಂದ ಹೊರ ಬರಲಾಗದೆ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಜೀವನವನ್ನು ಕಗ್ಗತ್ತಲೆಯ ಕೂಪಕ್ಕೆ ಒಡ್ಡುತ್ತಾರೆ. ಅದಕ್ಕೆ ಬಲಿಯಾಗುವ ಮುನ್ನ ಯೋಚಿಸಿ ಅದರಿಂದ ಪಾರಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರೆಡ್ ಎಫ್‍ಎಂ ಆರ್‍ಜೆ ರಶ್ಮಿ, ಪ್ರಾಂಶುಪಾಲರಾದ ರಚನ್ ಅಪ್ಪಣಮಯ್ಯ, ಕಾಲೇಜಿನ ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಉಪನ್ಯಾಸಕರಾದ ಕೆ.ಎನ್.ಶ್ರೀನಿವಾಸಯ್ಯ, ಪಿ.ಎಸ್.ನಿತಿನ್, ಎಂ.ಆರ್.ನಟರಾಜ ಉಪಸ್ಥಿತರಿದ್ದರು.

Translate »