ತಂಬಾಕು ಮುಕ್ತ ಸಮಾಜಕ್ಕೆ ಕಾನೂನಿಗಿಂತ ಸ್ವಯಂ ನಿರ್ಬಂಧ ಹೆಚ್ಚು ಪರಿಣಾಮಕಾರಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜ
ಚಾಮರಾಜನಗರ

ತಂಬಾಕು ಮುಕ್ತ ಸಮಾಜಕ್ಕೆ ಕಾನೂನಿಗಿಂತ ಸ್ವಯಂ ನಿರ್ಬಂಧ ಹೆಚ್ಚು ಪರಿಣಾಮಕಾರಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಬಸವರಾಜ

June 1, 2018

ಚಾಮರಾಜನಗರ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸುವ ಕಾನೂನು ನಮ್ಮ ದೇಶದಲ್ಲಿ 2003ರಿಂದ ಜಾರಿಯಲ್ಲಿದೆ. ಆದರೆ, ಧೂಮ ಪಾನ ಮುಕ್ತ ಸಮಾಜದ ಸೃಷ್ಟಿಗೆ ಕಾನೂನು ಗಳಿಗಿಂತ ಸ್ವಯಂ ನಿರ್ಬಂಧವೇ ಹೆಚ್ಚು ಪರಿಣಾಮಕಾರಿ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಜಿ. ಬಸವರಾಜ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿ ಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸಂವಿಧಾನವು ತನ್ನ ಪ್ರತಿ ಪ್ರಜೆಗೂ ಗೌರವಯುತವಾಗಿ ಜೀವಿಸುವ ಮೂಲಭೂತ ಹಕ್ಕನ್ನು ನೀಡಿದೆ. ಯಾವುದೇ ನಾಗರಿಕರು ಜೀವಿಸುವ ಪರಿಸರ ಹಾನಿ ಯಾಗದಂತೆ, ಮಲಿನಗೊಳ್ಳದಂತೆ ಕಾಯ್ದು ಕೊಳ್ಳಬೇಕು. ಆದರೆ ಧೂಮಪಾನ ಮಾಡುವ ಜನರಿಂದ ಇತರರು ಜೀವಿಸುವ ಮೂಲ ಭೂತ ಹಕ್ಕಿಗೆ, ಅವರ ಪರಿಸರಕ್ಕೆ ತೊಂದರೆ ಯಾಗುತ್ತದೆ. ಅಂತಹ ಸಂದರ್ಭದಲ್ಲಿ ಧೂಮ ಪಾನ ಮಾಡಿದವರ ವಿರುದ್ಧ ದೂರನ್ನು ಕೊಡಬಹುದು. ಅದು ಶಿಕ್ಷಾರ್ಹ ಅಪರಾಧ ವಾಗಿದೆ ಎಂದು ಅವರು ತಿಳಿಸಿದರು.

ಅಷ್ಟೇ ಅಲ್ಲದೆ, ಪರಿಸರದ ಸಮಗ್ರ ರಕ್ಷಣೆ ಸರ್ಕಾರದ ಹಾಗೂ ಸಾರ್ವಜನಿಕರ ಕರ್ತವ್ಯ ಎಂದ ಅವರು, ಸಮಾಜದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹಾಗೂ ನೆರೆಹೊರೆಯಲ್ಲಿ ಯಾರೇ ಧೂಮಪಾನ ಮಾಡುತ್ತಿದ್ದಲ್ಲಿ ಅವರಿಗೆ ಇದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಎಂದು ಮನವಿ ಮಾಡಿ ದರಲ್ಲದೆ, ಹಾಗಾದಲ್ಲಿ ಮಾತ್ರ ಈ ದಿನಾ ಚರಣೆ ಅರ್ಥಪೂರ್ಣವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ. ರಮೇಶ್, ಯುವಜನತೆ ಇಂದು ತೆರೆಯ ಮೇಲಿನ ನಟನಟಿಯರ ಶೈಲಿಗಳನ್ನು ಕಣ್ಣು ಮುಚ್ಚಿ ಅನುಸರಿಸುತ್ತಾರೆ. ಸಿಗರೇಟು ಸೇದು ವುದು, ಮದ್ಯವ್ಯಸನಗಳಿಗೆ ತುತ್ತಾಗುವುದು ಇದರ ಭಾಗವಾಗಿದೆ ಎಂದರು.
ಯುವಜನರು ತಮ್ಮ ಜೀವನವನ್ನು ಆದರ್ಶಪ್ರಾಯವಾಗಿ ರೂಪಿಸಿಕೊಳ್ಳಬೇಕು. ಹಿರಿಯರ ಹಿತನುಡಿಗಳನ್ನು ಪಾಲಿಸಿ ಮತ್ತೊ ಬ್ಬರನ್ನು ಅನುಸರಿಸದೇ ತಮ್ಮದೇ ಸ್ವಂತಿಕೆ ಹಾಗೂ ಸೌಜನ್ಯಶೀಲತೆಗೆ ಅವಕಾಶ ಕೊಡಬೇಕು. ಯಾವುದೇ ಕೆಟ್ಟ ವ್ಯಸನಗಳಿಗೆ ದಾಸರಾಗಬಾರದು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಹರೀಶ್‍ಕುಮಾರ್ ಮಾತನಾಡಿ, ಮನುಷ್ಯನಿಗೆ ತನ್ನ ಆರೋಗ್ಯ ಹಾಗೂ ದೇಹದ ಮೇಲೆ ಪ್ರೀತಿ ಇರಬೇಕು. ತಮ್ಮ ಮನಸ್ಸನ್ನು ಧೂಮಪಾನದಂತಹ, ತಂಬಾಕು ಸೇವನೆಯಂತಹ ವ್ಯಸನಗ ಳಿಂದ ದೂರ ಮಾಡಲು ಪ್ರೇರೇಪಿಸಬೇ ಕೆಂದು ಯುವಪೀಳಿಗೆಗೆ ಕಿವಿಮಾತು ಹೇಳಿದರು. ಶಿಕ್ಷಣ ಮಾತ್ರ ಮನುಷ್ಯನನ್ನು ಅತ್ಯುತ್ತಮ ಮಾಡುವುದಿಲ್ಲ. ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲೂ ಒಳ್ಳೆಯ ಸಾಧನೆ ಹಾಗೂ ಜ್ಞಾನ ಸಂಗ್ರÀಹಿಸಲು ಯುವಜನತೆ ಶ್ರಮ ಪಡಬೇಕು ಎಂದರು.
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ತಂಬಾಕು ನಿಯಂತ್ರಣ ಘಟಕದ ನೋಡಲ್ ಅಧಿಕಾರಿ ಡಾ. ನಾಗರಾಜ್ ಮಾತನಾಡಿ, ಧೂಮಪಾನ ಹಾಗೂ ತಂಬಾಕು ಸೇವನೆ ಯಿಂದ ಹಲವಾರು ರೋಗಗಳು ಬರುತ್ತವೆ. ಹೃದಯ, ಉಸಿರಾಟ, ರಕ್ತಚಲನೆಯ ತೊಂದರೆ ಗಳೂ ಸೇರಿದಂತೆ ಕ್ಯಾನ್ಸರ್‍ನಂತಹ ಮಾರಕ ರೋಗಗಳು ಉಂಟಾಗುತ್ತವೆ ಎಂದರು.
ಬಾಯಿಯಿಂದ ಶುರುವಾಗಿ ಅನ್ನನಾಳ, ಶ್ವಾಸಕೋಶ, ಲಿವರ್, ಪ್ಯಾಂಕ್ರಿಯಾಸ್‍ಗಳ ಕ್ಯಾನ್ಸರ್‍ಗಳು ಈ ದುಶ್ಚಟದಿಂದ ಬರುತ್ತವೆ ಎಂದ ಅವರು, ಧೂಮಪಾನದಿಂದ ಪುರುಷ ರಲ್ಲಿ ನಪುಂಸಕತೆ ಸೇರಿದಂತೆ ಮಹಿಳೆಯ ರಲ್ಲಿ ಗರ್ಭಪಾತದಂತಹ ದುಷ್ಪರಿಣಾಮ ಗಳು ಕಂಡುಬರುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಚ್. ಪ್ರಸಾದ್, ತಂಬಾಕು ಬೆಳೆಯ ಮೇಲೆ ಈಗ ಸರ್ಕಾರ ನಿರ್ಬಂಧ ಹೇರಿ ಪರ್ಯಾಯ ಬೆಳೆಯನ್ನು ಬೆಳೆಯುವ ಪರಿಸರ ಸೃಷ್ಟಿ ಮಾಡುತ್ತಿದೆ. ತಂಬಾಕು ಬೆಳೆ ಲಾಭದಾಯಕ ಬೆಳೆಯಾಗಿರುವುದರಿಂದ ಅದಕ್ಕೆ ಪರ್ಯಾಯ ವಾಣ ಜ್ಯ ಬೆಳೆ ಅಳವಡಿಸಲು ಪ್ರೇರೇಪಿಸ ಲಾಗುತ್ತಿದೆ ಎಂದರು.

ತಂಬಾಕು ಬೆಳೆ ಉತ್ಪನ್ನದಿಂದ ಹಿಡಿದು ವಿವಿಧ ಇಲಾಖೆಗಳು ತಂಬಾಕು ಮುಕ್ತ ಸಮಾಜದ ನಿರ್ಮಾಣಕ್ಕೆ ಆರೋಗ್ಯ ಇಲಾಖೆ ಯೊಂದಿಗೆ ಕೈಜೋಡಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಆರ್‍ಸಿಎಚ್ ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅನಿಲ್‍ಕುಮಾರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಜು, ಜಿಲ್ಲಾ ವಾರ್ತಾಧಿಕಾರಿ ಪಲ್ಲವಿ ಹೊನ್ನಾಪುರ ಉಪಸ್ಥಿತರಿದ್ದರು. ಕಾರ್ಯ ಕ್ರಮಕ್ಕೂ ಮುನ್ನ ಜಿಲ್ಲಾ ನ್ಯಾಯಾಲಯದ ಆವರಣದಿಂದ ಜಿಲ್ಲಾಡಳಿತದ ಭವನದವ ರೆಗೆ ವಿವಿಧ ನರ್ಸಿಂಗ್ ವಿದ್ಯಾಲಯದ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ತಂಬಾಕು ವಿರೋಧಿ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಜಾಥಾ ನಡೆಸಿದರು.

Translate »