ಮಡಿಕೇರಿ: ಸಾಮಾಜಿಕ ನ್ಯಾಯವು ಪ್ರಸ್ತುತ ಕಾಲಘಟ್ಟದಲ್ಲಿ ಸಮಾನತೆಯಾ ಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ವಿ.ವಿ.ಮಲ್ಲಾಪುರ ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಬುಧ ವಾರ ನಡೆದ ‘ಅಂತರಾಷ್ಟ್ರೀಯ ಸಾಮಾ ಜಿಕ ನ್ಯಾಯ ದಿನಾಚರಣೆ ಮತ್ತು ಮಾನವ ಹಕ್ಕುಗಳು’ ಕುರಿತು ಕಾನೂನು ಅರಿವು ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು. ವಿದ್ಯಾರ್ಥಿಗಳಿಗೆ ಕಾನೂನಿನ ಬಗ್ಗೆ ಅರಿವು ಇದ್ದಾಗ, ತಪ್ಪು ಮಾಡು ವುದು ಕಡಿಮೆಯಾಗುತ್ತದೆ. ಆದ್ದರಿಂದ ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ಜ್ಞಾನ ಹೊಂದಿರಬೇಕು ಎಂದರು.
ವಕೀಲ ಎಂ.ಎ.ನಿರಂಜನ ಮಾತನಾಡಿ, ದೇಶದ ಭವಿಷ್ಯಕ್ಕೆ ಸಾಮಾಜಿಕ ನ್ಯಾಯದ ಭದ್ರತೆಯ ಹರಿಕಾರರಾಗಿ ಡಾ.ಬಿ.ಆರ್.ಅಂಬೇ ಡ್ಕರ್ ಅವರ ಕೊಡುಗೆ ಅಪಾರ. ಸಾಮಾ ಜಿಕ ಜಾಲತಾಣಗಳ ದುರ್ಬಳಕೆಯಿಂದ ವಿದ್ಯಾರ್ಥಿಗಳು ದೂರವಿರಬೇಕು. ಜಾಲ ತಾಣ ಗಳ ಅತಿಯಾದ ಬಳಕೆಯಿಂದ ದೇಶದ ಅಭಿವೃಧ್ಧಿ ಮತ್ತು ಭಾಷೆ ನಾಶವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ದೃಢಗೊಳ್ಳುವವರೆಗೂ ಪ್ರೀತಿ-ಪ್ರೇಮದೆಡೆಗೆ ಹೋಗಬಾರದು. ಬಾಲ್ಯವಿವಾಹ ನಿಷೇಧ ಕಾನೂನು ಇಂದು ರಕ್ಷಣೆ ನೀಡುತ್ತಿದೆ ಎಂದರು.
ಮಾನವ ಹಕ್ಕು ಉಲ್ಲಂಘನೆ ಕಾಯ್ದೆ ಯಡಿ ಆರೋಪಿಗಳಿಗೂ ಸಂವಿಧಾನಿಕ ರಕ್ಷಣೆಯನ್ನು ನೀಡಿದೆ. ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವುದು ಮುಖ್ಯ ಎಂದು ಆಶಯ ವ್ಯಕ್ತಪಡಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಮಾತ ನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ ನ್ಯಾಯ ಪ್ರಮುಖವಾಗಿದೆ. ಭಾರತೀಯ ಪ್ರಜೆಗಳ ಮೂಲಭೂತ ಕರ್ತವ್ಯ ಗಳು ಕಾನೂನು ಚೌಕಟ್ಟಿನೊಳಗಿದ್ದು ವಿಧೇಯರಾಗಿರಬೇಕು. ಜನರಿಗೆ ಕಾನೂ ನಿನ ಮಹತ್ವವನ್ನು ತಿಳಿಸುವ ಕಾರ್ಯಕ್ರಮ ಗಳು ಇನ್ನಷ್ಟು ನಡೆಯಬೇಕಿದೆ. ವಿದ್ಯಾ ರ್ಥಿಗಳು ಅನಗತ್ಯ ಸಾಮಾಜಿಕ ಜಾಲ ತಾಣಗಳ ಅತಿಯಾದ ಬಳಕೆಯಿಂದ ದೂರ ವಿರಬೇಕು ಎಂದು ಕರೆ ನೀಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು. ಪ್ರೀತಂ ಮಾತನಾಡಿ, ಪ್ರಸ್ತುತ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅಗತ್ಯವಿದೆ. 2009ರ ನಂತರ ಅಂತರಾಷ್ಟ್ರೀಯ ಸಾಮಾ ಜಿಕ ನ್ಯಾಯ ದಿನಾಚರಣೆಯನ್ನು ಆಚರಿ ಸಲಾಗುತ್ತಿದೆ. ಭಾರತದ ಪ್ರಜೆಗಳು ಸಾಮಾ ಜಿಕ ನ್ಯಾಯದಿಂದ ಶಾಂತಿ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಒಲವು ತೋರಿಸಬೇಕಾಗುತ್ತದೆ ಎಂದು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆನ್ನಿಪರ್ ಲೋಲಿಟಾ ಅಧ್ಯಕ್ಷತೆ ವಹಿ ಸಿದರು, ವಿವಿಧ ವಿಭಾಗದ ಅಧ್ಯಾಪಕರು, ಉಪನ್ಯಾಸಕರು ಉಪಸ್ಥಿತರಿದ್ದರು, ನಿಕಿತಾ ಸ್ವಾಗತಿಸಿದರು, ಅರ್ಪಿತಾ ವಂದಿಸಿದರು.