ಚುಂಚನಕಟ್ಟೆ ಜಲಪಾತದಲ್ಲಿ ಡಾ.ಸೋಮಶೇಖರ್ ಮೃತದೇಹ ಪತ್ತೆ
ಮೈಸೂರು

ಚುಂಚನಕಟ್ಟೆ ಜಲಪಾತದಲ್ಲಿ ಡಾ.ಸೋಮಶೇಖರ್ ಮೃತದೇಹ ಪತ್ತೆ

June 5, 2018

ಮೈಸೂರು: ಭಾನು ವಾರ ಸಂಜೆ ಪತ್ನಿ, ಪುತ್ರಿ ಎದುರೇ ಧುಮ್ಮಿಕ್ಕಿ ಹರಿಯು ತ್ತಿದ್ದ ಚುಂಚನಕಟ್ಟೆ ಜಲಪಾತದಲ್ಲಿ ಜಲಸಮಾಧಿ ಯಾಗಿದ್ದ ಮೈಸೂರಿನ ಸಿಎಫ್‍ಟಿಆರ್‍ಐ ಹಿರಿಯ ವಿಜ್ಞಾನಿ ಡಾ.ಎಸ್.ಸೋಮಶೇಖರ್ ಅವರ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಯಿತು. ಘಟನೆಗೆ ಸಂಬಂಧಿಸಿ ದಂತೆ ಕೆ.ಆರ್.ನಗರ ತಾಲೂಕು, ಚುಂಚನಕಟ್ಟೆ ಜಲಪಾತ ದಲ್ಲಿ ಭಾನುವಾರ ಸಂಜೆಯಿಂದಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜು ತಜ್ಞರು ಡಾ. ಸೋಮ ಶೇಖರ್ ಅವರ ಮೃತದೇಹಕ್ಕಾಗಿ ಶೋಧನಾ ಕಾರ್ಯಾಚರಣೆ ನಡೆಸುತ್ತಿದ್ದರಾದರೂ ಕತ್ತಲೆಯಾದ ಕಾರಣ ಪ್ರಯೋಜನವಾಗಿರಲಿಲ್ಲ.

ಇಂದು ಮುಂಜಾನೆಯಿಂದ ಕಾರ್ಯಾಚರಣೆ ಮುಂದುವರಿಸಿದಾಗ ಬೆಳಿಗ್ಗೆ 7.30 ಗಂಟೆ ವೇಳೆಗೆ ಬಿದ್ದಿದ್ದ ಸ್ಥಳದಿಂದ ತುಸು ದೂರದಲ್ಲಿ ಡಾ. ಸೋಮ ಶೇಖರ್ ಮೃತದೇಹ ಪತ್ತೆಯಾಯಿತು. ಪ್ರಕರಣ ದಾಖ ಲಿಸಿಕೊಂಡಿದ್ದ ಕೆ.ಆರ್. ನಗರ ಠಾಣೆ ಪೊಲೀಸರು, ಅಲ್ಲಿನ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿ ಮರಣೋ ತ್ತರ ಪರೀಕ್ಷೆ ನಡೆಸಿದ ನಂತರ ಮಧ್ಯಾಹ್ನ 12.15 ಗಂಟೆ ವೇಳೆಗೆ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ಮಧ್ಯಾಹ್ನ 1.15 ಗಂಟೆ ವೇಳೆಗೆ ಡಾ. ಸೋಮ ಶೇಖರ್ ಪಾರ್ಥೀವ ಶರೀರವನ್ನು ಮೈಸೂರಿನ ಕಾಳಿ ದಾಸ ರಸ್ತೆಯಲ್ಲಿರುವ ಚಂದ್ರಕಲಾ ಆಸ್ಪತ್ರೆ ಎದುರಿನ ಸಿಎಫ್‍ಟಿಆರ್‍ಐ ವಸತಿ ಸಮುಚ್ಛಯದ 7ನೇ ಬ್ಲಾಕ್ ನಲ್ಲಿರುವ ನಿವಾಸದ ಬಳಿ ಸಾರ್ವಜನಿಕರ ದರ್ಶನ ಕ್ಕಾಗಿ ಇರಿಸಲಾಗಿತ್ತು. ಸಿಎಫ್‍ಟಿಆರ್‍ಐನ ಹಿರಿಯ ವಿಜ್ಞಾನಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಬೆಂಗಳೂರಿನ ನೆಲಮಂಗಲ ಬಳಿಯ ಸ್ವಗ್ರಾಮ ಚಿಕ್ಕಮಾರನಹಳ್ಳಿ ಯಲ್ಲಿ ಇಂದು ಸಂಜೆ ಡಾ.ಸೋಮಶೇಖರ್ ಅಂತ್ಯ ಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಚಿಕ್ಕಮಾರನಹಳ್ಳಿಯ ಸಿದ್ದರಾಮ ಮತ್ತು ಶ್ರೀಮತಿ ಜಯಮ್ಮ ದಂಪತಿಯ ಜೇಷ್ಠಪುತ್ರರಾದ ಡಾ. ಸೋಮ ಶೇಖರ್, ತಂದೆ, ತಾಯಿ, ಪತ್ನಿ ಶ್ರೀಮತಿ ಪ್ರತಿಮಾ ತ್ರಿಪಾಠಿ, 5 ವರ್ಷದ ಪುತ್ರಿ ಇಶಾನಿ, ಮೂವರು ಸಹೋದರರು, ಮೂವರು ಸಹೋ ದರಿಯವರು, ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

ತಮ್ಮ ಕಣ್ಣೆದುರೇ ನೀರಿನಲ್ಲಿ ಕೊಚ್ಚಿ ಹೋದ ಪತಿಯ ಪಾರ್ಥೀವ ಶರೀರದ ಬಳಿ ಪ್ರತಿಮಾ, ಪುತ್ರಿ ಇಶಾನಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ತಂದೆ, ತಾಯಿ, ಸಂಬಂ ಧಿಕರು ಗೋಳಿಡುತ್ತಿದ್ದ ದೃಶ್ಯ ಹೃದಯ ಕಲಕುವಂತಿತ್ತು.
ಡಾ. ಸೋಮಶೇಖರ್ ಮೃತದೇಹವನ್ನು ಮೈಸೂ ರಿಗೆ ತಂದಾಗ ಸಿಎಫ್‍ಟಿಆರ್‍ಐ ಕ್ವಾರ್ಟರ್ಸ್‍ನಲ್ಲಿ ಸಂಸ್ಥೆಯ ಅಧಿಕಾರಿಗಳು, ಸಹದ್ಯೋಗಿ ವಿಜ್ಞಾನಿಗಳು ಹಾಗೂ ಸಿಬ್ಬಂದಿ ಕಂಬನಿ ಮಿಡಿದರು. ಇಡೀ ವಸತಿ ಸಮುಚ್ಛಯವೇ ಇಂದು ಶೋಕದಲ್ಲಿ ಮುಳುಗಿತ್ತು.

Translate »