ನಮ್ಮಲ್ಲಿನ ಜಲಕ್ರೀಡೆ ಪ್ರವಾಸಿ ತಾಣಗಳೆಷ್ಟು ಸುರಕ್ಷಿತ?
ಮೈಸೂರು

ನಮ್ಮಲ್ಲಿನ ಜಲಕ್ರೀಡೆ ಪ್ರವಾಸಿ ತಾಣಗಳೆಷ್ಟು ಸುರಕ್ಷಿತ?

June 5, 2018

– ಎಸ್.ಟಿ.ರವಿಕುಮಾರ್

ಮೈಸೂರು: ಮಳೆ ಆರಂಭ ವಾಯಿತೆಂದರೆ ನೀರು ನಿಸರ್ಗದ ಸೊಬಗಿ ನಲ್ಲಿ ಜಲಪಾತವಾಗಿ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ಅತ್ಯಂತ ಆಕರ್ಷಣೀಯ.

ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವ ಜಲಪಾತಗಳ ಸೌಂದರ್ಯ ಎಣ ಕೆಗೂ ಮೀರಿದ್ದು. ದಟ್ಟ ಅರಣ್ಯಗಳಲ್ಲಿ ಉಗಮವಾಗಿ ಬೆಟ್ಟಗುಡ್ಡಗಳ ಮಧ್ಯೆ ನುಸುಳಿ ರಭಸದಿಂದ ಪ್ರಪಾತಕ್ಕೆ ಧುಮ್ಕಿಕ್ಕುವ ಜಲಧಾರೆಗಳನ್ನು ನೋಡುವುದೇ ಚೆಂದ. ಅತೀ ವೇಗದ ಇಂದಿನ ದಿನಗಳಲ್ಲಿ ಮಕ್ಕಳಿಗೆ ಓದುವ ಟೆನ್ಷನ್, ಉದ್ಯೋಗಸ್ಥರಿಗೆ ಕೆಲಸದ ಒತ್ತಡ, ಗೃಹಿಣ ಯರಿಗೆ ಮನೆ ನಿಭಾಯಿಸುವ ಚಿಂತೆ. ಈ ಯಾಂತ್ರಿಕ ಜೀವನದ ಸುಳಿಗೆ ಸಿಲುಕಿರುವ ಜನರು ಒತ್ತಡದಿಂದ ಹೊರಬರಲು ಪಿಕ್‍ನಿಕ್ ಸ್ಪಾಟ್‍ಗಳನ್ನು ಆಯ್ಕೆ ಮಾಡಿ ಕೊಳ್ಳುವುದು ಸರ್ವೇಸಾಮಾನ್ಯ.

ಅರಣ್ಯ ಪ್ರದೇಶ, ಕಾಡು ಪ್ರಾಣ ಗಳು, ನದಿ, ಸಾಗರ, ಸಮುದ್ರ, ಜಲಕ್ರೀಡೆ, ಈಜು ಸ್ಥಳಗಳೆಂದರೆ ಇನ್ನೂ ಅಚ್ಚುಮೆಚ್ಚು. ಸದಾ ಕೆಲಸದ ಒತ್ತಡದಲ್ಲಿ ಕೆಲಸ ಮಾಡುವವರು ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಳ್ಳಲು ವಾರಾಂತ್ಯ ದಲ್ಲಿ, ರಜಾ ದಿನಗಳು ಬಂತೆಂದರೆ ಸ್ನೇಹಿತರು, ಕುಟುಂಬ ಸಮೇತ ಹೊರಗೆ ಹೋಗುತ್ತಿ ರುವ ಟ್ರೆಂಡ್ ಈಗ ಹೆಚ್ಚಾಗತೊಡಗಿದೆ.

ಪ್ರವಾಸೋದ್ಯಮ ವೃದ್ಧಿ: ಮನಶ್ಯಾಂತಿ, ನೆಮ್ಮದಿಗಾಗಿ ದೇವಸ್ಥಾನಗಳು, ಯಾತ್ರಾ ಸ್ಥಳಗಳಿಗೆ ಹೋಗುವಂತೆ ಜನರು ಪ್ರವಾಸಿ ತಾಣಗಳಿಗೂ ಹೆಚ್ಚಾಗಿ ತೆರಳುತ್ತಿರುವುದ ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರವಾ ಸೋದ್ಯಮ ಅಭಿವೃದ್ಧಿಯಾಗುತ್ತಿವೆ.

ಸುರಕ್ಷತಾ ಕ್ರಮಗಳೇನು?: ಪ್ರವಾಸಿಗ ರನ್ನು ಸೆಳೆಯಲು ಅವರಿಗೆ ಪ್ರವಾಸಿ ತಾಣ ಗಳಲ್ಲಿ ರಸ್ತೆ, ನೀರು, ಶೌಚಾಲಯ, ಮಾಹಿತಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸು ವುದು ಅತ್ಯವಶ್ಯ. ಅದಕ್ಕಿಂತ ಮಿಗಿಲಾಗಿ ಪ್ರವಾಸಿಗರ ಸುರಕ್ಷತೆ, ಪ್ರಾಣ ರಕ್ಷಣೆಯೂ ಸಹ ಅಷ್ಟೇ ಮುಖ್ಯವಾದುದು.
ಜಲಪಾತಗಳಲ್ಲಿ ಸುರಕ್ಷತಾ ಕ್ರಮ: ಅರಣ್ಯ, ಪ್ರಾಣ ಹಾಗೂ ನೀರು ಹರಿಯುವ ಜಲ ಪಾತಗಳಂತಹ ಸ್ಥಳಗಳಿಗೆ ಮಕ್ಕಳು, ವಯ ಸ್ಕರು ಹೆಚ್ಚು ಭೇಟಿ ನೀಡುವುದು ಸಾಮಾನ್ಯ. ಕೆರೆ, ಸಾಗರ, ನದಿ, ಸಮುದ್ರ, ಜಲಪಾತ ಗಳು ಅಂತಹ ಸ್ಥಳಗಳು ಅತೀ ಅಪಾಯ ಕಾರಿಯಾಗಿರುವುದರಿಂದ ಮುಂಜಾಗ್ರತಾ ಕ್ರಮ ವಹಿಸುವುದು ಪ್ರವಾಸಿಗರ ಪ್ರಾಣ ರಕ್ಷಣೆ ದೃಷ್ಟಿಯಿಂದ ಅತ್ಯಂತ ಮುಖ್ಯವಾದುದು.

ಭಾನುವಾರವಷ್ಟೇ ಕೆ.ಆರ್.ನಗರ ತಾಲೂಕು ಚುಂಚನಕಟ್ಟೆ ಜಲಪಾತದಲ್ಲಿ ಪತ್ನಿ, ಪುತ್ರಿ ಹಾಗೂ ಸ್ನೇಹಿತರ ಎದುರೇ ಮೈಸೂರಿನ ಸಿಎಫ್‍ಟಿಆರ್‍ಐ ಹಿರಿಯ ವಿಜ್ಞಾನಿ ಡಾ. ಎಸ್.ಸೋಮಶೇಖರ್ ಅವರು ಜಲ ಸಮಾಧಿಯಾಗಿರುವುದು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ಯಾವ ಕ್ರಮವಾಗಬೇಕು: ಚುಂಚನಕಟ್ಟೆ ಜಲಪಾತದಲ್ಲಿ ಅತೀ ಮಳೆಯಾಗಿ ನೀರನ್ನು ಬಿಡಬೇಕಾದಾಗ ಅಥವಾ ವಿದ್ಯುತ್ ಉತ್ಪಾ ದನಾ ಸ್ಥಾವರಕ್ಕೆ ನೀರು ಹರಿಸಬೇಕೆಂದಿದ್ದರೆ ರಾತ್ರಿ 10 ಗಂಟೆ ನಂತರ ಮುಂಜಾನೆ 3 ಗಂಟೆವರೆಗೆ ಫ್ಲಡ್ ಗೇಟನ್ನು ತೆರೆಯ ಬೇಕು. ಚುಂಚನಕಟ್ಟೆ ಜಲಪಾತದ ಸುತ್ತ ತಂತಿ ಬೇಲಿ ಹಾಕಿ ಗೇಟ್ ಬಳಿ ಸಿಬ್ಬಂದಿ ಯನ್ನು ನಿಯೋಜಿಸಬೇಕು. ಸ್ಥಳದಲ್ಲಿ ಜಲ ಪಾತದ ಅಪಾಯದ ಸ್ಥಳದ ಬಗ್ಗೆ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಎಚ್ಚರಿಕೆ ಸಂದೇಶದ ಫಲಕವನ್ನು ಅಳವಡಿಸ ಬೇಕು. ನೀರು ಬಿಡುವ ಮುನ್ನ ಸೈರನ್ ಹಾಕುವ ಜೊತೆಗೆ ಜನರು ಜಲಾಶಯ ದಿಂದ ತೆರಳಿದ್ದಾರೆಯೇ ಎಂಬುದನ್ನು ಗಮನಿಸಿ ದೃಢಪಡಿಸುವುದೂ ಸಹ ಅತ್ಯಗತ್ಯ. ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡ ಳಿತಗಳು, ಪ್ರವಾಸಿ ತಾಣಗಳು ಜಲಕ್ರೀಡೆ ಪ್ರದೇಶ ಹಾಗೂ ಜಲಪಾತಗಳಲ್ಲಿ ಪ್ರಾಣ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದರೆ ಪ್ರಾಣ ಹಾನಿ ಖಚಿತ.

ಎಲ್ಲೆಲ್ಲಿ ಜಲಕ್ರೀಡೆಗಳು: ಮೈಸೂರು ಜಿಲ್ಲೆ ಯಲ್ಲಿ ಕೆ.ಆರ್.ನಗರ ತಾಲೂಕಿನ ಚುಂಚನ ಕಟ್ಟೆ ಜಲಪಾತ, ಹೆಚ್.ಡಿ.ಕೋಟೆಯ ಕಬಿನಿ, ನಂಜನಗೂಡಿನ ಕಪಿಲಾ ನದಿ ತೀರ, ತಿ.ನರಸೀ ಪುರದ ಕೂಡಲ ಸಂಗಮ, ಮುಡುಕು ತೊರೆ, ತಲಕಾಡು, ಮೈಸೂರಿನ ವರುಣಾ ಕೆರೆ ದೋಣ ವಿಹಾರ ಸೇರಿದಂತೆ ಹಲ ವೆಡೆ ಜಲಕ್ರೀಡೆಗೆ ಜನ ತೆರಳುತ್ತಾರೆ. ಅದೇ ರೀತಿ ಕೊಡಗು ಜಿಲ್ಲೆಯ ಅಬ್ಬಿ ಫಾಲ್ಸ್, ಇರ್ಪು ಪಾಲ್ಸ್, ಕಾವೇರಿ ನಿಸರ್ಗಧಾಮ, ದುಬಾರೆ ಫಾರೆಸ್ಟ್, ಚಾಮರಾಜನಗರ ಜಿಲ್ಲೆಯ ಚಿಕ್ಕಿ ಹೊಳೆ, ಸುವರ್ಣಾವತಿ, ಗುಂಡಾಲ್ ಜಲಾ ಶಯ, ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಹಿನ್ನೀರು, ಬೃಂದಾವನದ ದೋಣ ವಿಹಾರ, ಬಲ ಮುರಿ, ಎಡಮುರಿ, ರಂಗನತಿಟ್ಟು ಪಕ್ಷಿ ಧಾಮ, ಪಶ್ಚಿಮ ವಾಹಿನಿ, ನಿಮಿಷಾಂಬ ದೇವಸ್ಥಾನದ ಬಳಿಯ ಕಾವೇರಿ ನದಿ ತೀರ, ಸಂಗಮ, ಗೋಸಾಯ್ ಘಾಟ್, ಮಹದೇವಪುರ, ಮುತ್ತತ್ತಿ, ಶಿವನ ಸಮುದ್ರ, ಕೆರೆ ತೊಣ್ಣೂರು ಜಲಕ್ರೀಡೆಗಳಾಗಿದ್ದು, ಈಗಾಗಲೇ ಹಲವು ಪ್ರಾಣಾಪಾಯ ಪ್ರಕ ರಣಗಳಾಗಿರುವುದನ್ನು ಗಮನಿಸಬಹು ದಾಗಿದೆ. ಇನ್ನು ರಾಜ್ಯಾದ್ಯಂತ ಜೋಗ ಜಲಪಾತ, ಸಾತ್ಕಂಡ ಜಲಪಾತ, ಗೊಡ ಚಿನಮಲ್ಕಿ, ಅರಿಶಿನಗುಂಡಿ, ಮಾಗೋಡು, ಸಾತೋಡ್ಡಿ, ಶಿರ್ಲೆ, ಉಂಚಳ್ಳಿ, ವಿಭೂತಿ ಸೇರಿದಂತೆ ಹಲವು ಆಕರ್ಷಕ ದೊಡ್ಡ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವುದರಿಂದ ಎಲ್ಲೆಡೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯ.

Translate »