ನಾಗರಹೊಳೆ ಅಭಯಾರಣ್ಯದಲ್ಲಿ `ಕಾಡ್ಗಿಚ್ಚು’ ತಡೆಗೆ ಕಣ್ಗಾವಲು
ಮೈಸೂರು

ನಾಗರಹೊಳೆ ಅಭಯಾರಣ್ಯದಲ್ಲಿ `ಕಾಡ್ಗಿಚ್ಚು’ ತಡೆಗೆ ಕಣ್ಗಾವಲು

January 18, 2020

ಮೈಸೂರು,ಜ.17- ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ನಾಗರಹೊಳೆ ಅಭಯಾರಣ್ಯ ಉರಿ ಬಿಸಿಲಿನಿಂದಾಗಿ ಒಣಗುತ್ತಿದೆ. ಮುಂಬ ರುವ ಬೇಸಿಗೆಯಲ್ಲಿ ಸಂಭವಿಸಬಹುದಾದ ಅಗ್ನಿ ಆಕಸ್ಮಿಕ ತಡೆಗೆ ಸಜ್ಜಾಗಿರುವ ಅರಣ್ಯ ಇಲಾಖೆ ಈ ಬಾರಿ 688 ಕಿ.ಮೀ ಹೆಚ್ಚು ವರಿ ಫೈರ್‍ಲೈನ್ ಸೇರಿದಂತೆ ಒಟ್ಟು 2677 ಕಿ.ಮೀ ಬೆಂಕಿ ರೇಖೆ ನಿರ್ಮಿಸಲಾಗಿದೆ.

ಪ್ರತಿ ಬೇಸಿಗೆಯಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂಕುಲದ ರಕ್ಷಣೆಯೇ ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣ ಮಿಸುತ್ತದೆ. ಡಿಸೆಂಬರ್‍ನಿಂದ ಮಾರ್ಚ್ ಅಂತ್ಯದವರೆಗೆ ಅರಣ್ಯ ಪ್ರದೇಶವನ್ನು ಕಾಪಾಡಿ ಕೊಳ್ಳುವುದಕ್ಕೆ ಇಲಾಖೆ ಎಲ್ಲಿಲ್ಲದ ಕಸರತ್ತು ಮಾಡಬೇಕಾಗುತ್ತದೆ. ಕೆಲವೊಮ್ಮೆ ಕಿಡಿ ಗೇಡಿಗಳು ಬೇಕಂತಲೇ ಕಾಡಿಗೆ ಬೆಂಕಿ ಇಟ್ಟು ವಿಕೃತ ಮನಸ್ಥಿತಿ ಪ್ರದರ್ಶಿಸಿದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ವಾಹನ ಸವಾ ರರು, ದಾರಿಹೋಕರು ಬೀಡಿ, ಸಿಗರೇಟ್ ಕಿಡಿಯನ್ನು ನಂದಿಸದೆ ಎಸೆದು ಹೋಗು ವುದರಿಂದ, ಕಾಡಂಚಿನ ಹೊಲದಲ್ಲಿ ಗಿಡಗಂಟಿ ಸುಡುವ ವೇಳೆ ಕಿಡಿ ತಗುಲಿ ಕಾಡ್ಗಿಚ್ಚು ಸಂಭವಿಸುತ್ತವೆ.

ಬೆಂಕಿ ರೇಖೆ(ಫೈರ್ ಲೈನ್): ನಾಗರ ಹೊಳೆ(ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನವನ) ಅಭಯಾರಣ್ಯವು ಈ ಮೊದಲು 643 ಚದರ ಕಿ.ಮೀ ವಿಸ್ತಾರ ಹೊಂದಿತ್ತು. ಪಿರಿಯಾಪಟ್ಟಣ, ಹುಣ ಸೂರು, ವಿರಾಜಪೇಟೆ ತಾಲೂಕಿಗೆ ಒಳ ಪಡುವ 200 ಚ.ಕಿ.ಮೀ ಬಫರ್ ಜೋóóನ್ ಪ್ರದೇಶ ಈ ಬಾರಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರ್ಪಡೆ ಗೊಂಡಿರುವುದರಿಂದ ಈ ಬಾರಿಯಿಂದ ಅರಣ್ಯದ ವ್ಯಾಪ್ತಿ 843.39 ಚ.ಕಿ.ಮೀ ವ್ಯಾಪ್ತಿಗೆ ವಿಸ್ತಾರಗೊಂಡಿದೆ. ನಾಗರಹೊಳೆ, ಕಲ್ಲಹಳ್ಳ, ಆನೆಚೌಕೂರು, ಹುಣಸೂರು, ವೀರನಹೊಸಳ್ಳಿ, ಮೇಟಿಕುಪ್ಪೆ, ಅಂತರ ಸಂತೆ, ಡಿ.ಬಿ.ಕುಪ್ಪೆ ವಲಯಗಳಾಗಿ ವಿಂಗ ಡಿಸಿರುವ ನಾಗರಹೊಳೆ ಅಭಯಾರಣ್ಯ ಮೈಸೂರು ಮತ್ತು ಕೊಡಗು ಜಿಲ್ಲೆಗೆ ಒಳಪಟ್ಟಿದ್ದು, ವೈವಿಧ್ಯಮಯ ವನ್ಯಸಂಪತ್ತು ಇರುವ ಕಾಡಾಗಿದೆ. ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಿಸಲು ಕಳೆದ ಬಾರಿ 1989.2 ಕಿ.ಮೀ ಉದ್ದದ ಬೆಂಕಿ ರೇಖೆ ನಿರ್ಮಿಸ ಲಾಗಿತ್ತು. ಈ ಬಾರಿ ಅರಣ್ಯ ಪ್ರದೇಶದ ವಿಸ್ತಾರವೂ ಹೆಚ್ಚಾದ ಹಿನ್ನೆಲೆಯಲ್ಲಿ 688 ಕಿ.ಮೀ ಹೆಚ್ಚುವರಿ ಬೆಂಕಿ ತಡೆರೇಖೆ ಸೇರಿ ದಂತೆ ಎಂಟು ವಲಯಗಳಿಂದ 2677 ಕಿ.ಮೀ ಫೈರ್‍ಲೈನ್ ನಿರ್ಮಿಸಲಾಗಿದೆ. ಸೂಕ್ಷ್ಮ ಪ್ರದೇಶ ಅಥವಾ ವಲಯ ಎಂದು ಗುರುತಿಸಲಾಗಿರುವ ಅರಣ್ಯ ಪ್ರದೇಶದಲ್ಲಿ ಫೈರ್‍ಲೈನ್ ಅಗಲವನ್ನು ಹೆಚ್ಚಿಸಲಾಗಿದೆ.

ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತಿ ರುವವರು: ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ನಾರಾಯಣಸ್ವಾಮಿ ನೇತೃತ್ವ ದಲ್ಲಿ ಎಲ್ಲಾ 8 ವಲಯಗಳ ಎಸಿಎಫ್, ಆರ್‍ಎಫ್‍ಒ, ಡಿಆರ್‍ಎಫ್ ಸೇರಿದಂತೆ ಸಿಬ್ಬಂದಿಗಳು ಕಾಡು ಕಾಯಲು ಶ್ರಮಿಸುತ್ತಿ ದ್ದಾರೆ. ಇವರೊಂದಿಗೆ 300 ಬೆಂಕಿ ವಾಚರ್ ಗಳು, 108 ಕಾವಲುಗಾರರು, 135 ಖಾಯಂ ಸಿಬ್ಬಂದಿ ಅವಿರತ ಶ್ರಮಿಸುತ್ತಿ ದ್ದಾರೆ. ಕಾಡಂಚಿನ ಹಾಡಿ, ಗ್ರಾಮಗಳಿಂದ ವಾಚರ್ ಕೆಲಸಕ್ಕೆ ಬರುವವರನ್ನು ಇಲಾಖೆ ವಾಹನಗಳಲ್ಲಿಯೇ ಆಯ್ದ ಸ್ಥಳಕ್ಕೆ ಕರೆ ದೊಯ್ಯಲಾಗುತ್ತದೆ. ಊಟದ ವ್ಯವಸ್ಥೆಯನ್ನು ಇಲಾಖೆ ವತಿಯಿಂದಲೇ ಪೂರೈಸಲಾಗು ತ್ತಿದೆ. ಪ್ರತಿಯೊಂದು ವಲಯದಲ್ಲಿ ಕೆಲಸ ಮಾಡುವ ವಾಚರ್ ಮತ್ತು ಗಾರ್ಡ್‍ಗಳಿಗೆ ಮೋಟರ್‍ವುಳ್ಳ ಸ್ಪ್ರೇಯರ್ ಹಾಗೂ ವಿವಿಧ ಸಲಕರಣೆಗಳನ್ನು ನೀಡಲಾಗಿದೆ.

ಕ್ಲಿಷ್ಟಕರ: ಒಂದೆಡೆ ವಾಹನ ಸವಾರ ರಿಂದ ಸಮಸ್ಯೆ ಉಂಟಾದರೆ, ಮತ್ತೊಂ ದೆಡೆ ಅರಣ್ಯ ಸಿಬ್ಬಂದಿ ಮೇಲಿನ ಸೇಡಿಗಾಗಿ ಕಾಡಿಗೆ ಬೆಂಕಿ ಹಾಕುವ ಕಿಡಿಗೇಡಿಗಳ ಬಗ್ಗೆ ಇಲಾಖೆಗೆ ಆತಂಕವಿದೆ. ವನ್ಯಜೀವಿಗಳ ಹಾವಳಿಯಿಂದ ಬೇಸತ್ತಿರುವವರೂ ಇಲಾಖೆಗೆ ಬಿಸಿತುಪ್ಪವಾಗಿದ್ದಾರೆ.

ಕೊಡಗು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ನಾಡಿಗೆ ಬರುವ ಆನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾಯಕ ದಲ್ಲಿಯೂ ಸಿಬ್ಬಂದಿ ನಿರತರಾಗಿರಬೇಕಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »