Tag: Kodagu

ಕಾರ್ಮಿಕ ಮುಖಂಡ ಭರತ್‍ಗೆ ಬೆದರಿಕೆ ಕರೆ
ಕೊಡಗು

ಕಾರ್ಮಿಕ ಮುಖಂಡ ಭರತ್‍ಗೆ ಬೆದರಿಕೆ ಕರೆ

October 25, 2018

ಮಡಿಕೇರಿ: ಕಾರ್ಮಿಕ ಮುಖಂಡರು ಹಾಗೂ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರಿಗೆ ದೂರವಾಣಿ ಕರೆಯ ಮೂಲಕ ಅನಾಮಧೇಯ ವ್ಯಕ್ತಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸುವಂತೆ ಗ್ರಾಪಂ ನೌಕರರ ಸಂಘದ ವಿರಾಜಪೇಟೆ ತಾಲೂಕು ಕಾರ್ಯದರ್ಶಿ ಟಿ.ಜಿ.ಸಚಿತ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.19 ರಂದು ಸಂಜೆ ದೂರವಾಣಿ ಕರೆಯ ಮೂಲಕ ಅನಾಮಧೇಯ ವ್ಯಕ್ತಿ ಭರತ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಅ.20 ಸಿದ್ದಾಪುರ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಯನ್ನು…

ಬೆಂಗಳೂರು-ಮೈಸೂರು ವಿಶ್ವ ದರ್ಜೆ ರಸ್ತೆ ಯೋಜನೆಗಿದ್ದ ಅಡ್ಡಿ-ಆತಂಕ ನಿವಾರಣೆ
ಮೈಸೂರು

ಬೆಂಗಳೂರು-ಮೈಸೂರು ವಿಶ್ವ ದರ್ಜೆ ರಸ್ತೆ ಯೋಜನೆಗಿದ್ದ ಅಡ್ಡಿ-ಆತಂಕ ನಿವಾರಣೆ

October 24, 2018

ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಶ್ವದರ್ಜೆಗೆ ಏರಿಸುವ ಯೋಜನೆಗೆ ಎದುರಾಗಿದ್ದ ಎಲ್ಲಾ ಅಡ್ಡಿ-ಆತಂಕಗಳು ಕೊನೆಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ದೊಡ್ಡ ಅಡ್ಡಿಯಾಗಿ ನಿಂತಿತ್ತು, ಅದು ಬಗೆಹರಿದಿದೆ. ಇನ್ನು 10 ಪಥಗಳ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ. ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಕೇಂದ್ರದ ಸಹಕಾರದಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ 36,000 ಕೋಟಿ ರೂ. ವೆಚ್ಚ ಮಾಡಲಿದ್ದಾರೆ. ಕೊಡಗಿನ ನೆರೆ…

ಬೇಟೆ ವೇಳೆ ವ್ಯಕ್ತಿಗೆ ಗುಂಡೇಟು: ಓರ್ವನ ಬಂಧನ
ಕೊಡಗು

ಬೇಟೆ ವೇಳೆ ವ್ಯಕ್ತಿಗೆ ಗುಂಡೇಟು: ಓರ್ವನ ಬಂಧನ

October 24, 2018

ಮಡಿಕೇರಿ: ಹಂದಿ ಬೇಟೆ ಯಾಡುವ ವೇಳೆ ವ್ಯಕ್ತಿಯೋರ್ವನಿಗೆ ಗುಂಡೇಟು ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿ ಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ತಂಡ ಯಶಸ್ವಿಯಾಗಿದೆ. ದಕ್ಷಿಣ ಕೊಡಗಿನ ವೆಸ್ಟ್‍ನೆಮ್ಮಲೆ ಗ್ರಾಮದ ಕಾಳಿಮಾಡ ದಿನೇಶ್ ದೇವಯ್ಯ (45) ಅ.18ರಂದು ಹೆಮ್ಮೆತಾಳು ಗ್ರಾಮದಲ್ಲಿರುವ ತನ್ನ ಮಾವನ ಮನೆಗೆ ಬಂದಿದ್ದು, ಅ. 21  ರಂದು ಸಂಜೆ ಕಾಳಿಮಾಡ ದಿನೇಶ್ ದೇವಯ್ಯ ಸ್ನೇಹಿತ ಅಯ್ಯಕುಟ್ಟೀರ ರಂಜಿತ್ ಮಾಚಯ್ಯ ಅವರೊಂದಿಗೆ ಹಂದಿ ಬೇಟೆಗೆಂದು ಹೋಗಿದ್ದರು ಎನ್ನಲಾಗಿದೆ. ಆದರೆ ಕತ್ತಲಿನಲ್ಲಿ ಕಾಡುಹಂದಿಗೆಂದು ಹೊಡೆದ ಗುಂಡು…

ನಾಳೆ ತಲಕಾವೇರಿಯಲ್ಲಿ ತೀರ್ಥೋದ್ಭವ
ಕೊಡಗು

ನಾಳೆ ತಲಕಾವೇರಿಯಲ್ಲಿ ತೀರ್ಥೋದ್ಭವ

October 16, 2018

ಮಡಿಕೇರಿ:  ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅ.17ರ ಸಂಜೆ 6 ಗಂಟೆ 43 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿ ತೀರ್ಥ ರೂಪಿಣಿಯಾಗಿ ಆವೀರ್ಭವಿಸಲಿದ್ದಾಳೆ. ಇದಕ್ಕಾಗಿ ಜಿಲ್ಲಾಡಳಿತ ಮತ್ತು ಭಾಗಮಂಡಲ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಎಲ್ಲಾ ಅಗತ್ಯ ಸಿದ್ದತೆಯನ್ನು ಮಾಡಿಕೊಂಡಿದೆ. ಅ.17ರ ಮುಂಜಾನೆ ಯಿಂದಲೇ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನೆರವೇರಲಿದೆ. ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಮತ್ತು ದೇವಸ್ಥಾನ ಸಮಿತಿ ಒಟ್ಟಾಗಿ…

ನಾಪೋಕ್ಲುವಿನಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಕೊಡಗು

ನಾಪೋಕ್ಲುವಿನಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

October 15, 2018

ನಾಪೋಕ್ಲು: 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಾಪೋಕ್ಲುವಿನಲ್ಲಿ ಆಯೋಜಿಸಲು ಉದ್ದೇಶಿಸಿದ್ದು ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ನಾಪೋಕ್ಲು ಸರಕಾರಿ ಪ್ರೌಢಶಾಲೆಯಲ್ಲಿ ಡಿ.22-23ರಂದು ನಡೆಸಲು ಉದ್ಧೇಶಿಸ ಲಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿ ಸರಳ ಕಾರ್ಯಕ್ರಮ ನಡೆಸು ವುದು ಒಳ್ಳೆಯದು ಎಂದರು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಹೋರಾಟ ನಡೆಸಬೇಕಾದ ಅನಿವಾರ್ಯ…

ಕೊಡಗಿನ ಪ್ರಕೃತಿ ವಿಕೋಪ ನೈಸರ್ಗಿಕ ಪ್ರಕ್ರಿಯೆ ಇದಕ್ಕೂ ಮಾನವನ ಚಟುವಟಿಕೆಗೂ ಸಂಬಂಧವಿಲ್ಲ
ಕೊಡಗು

ಕೊಡಗಿನ ಪ್ರಕೃತಿ ವಿಕೋಪ ನೈಸರ್ಗಿಕ ಪ್ರಕ್ರಿಯೆ ಇದಕ್ಕೂ ಮಾನವನ ಚಟುವಟಿಕೆಗೂ ಸಂಬಂಧವಿಲ್ಲ

October 14, 2018

ಮಡಿಕೇರಿ:  ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಮಾನವನ ಚಟುವಟಿಕೆಗೂ ಪ್ರಕೃತಿ ವಿಕೋಪಕ್ಕೆ ಯಾವುದೇ ಸಂಬಂಧವಿಲ್ಲ ಎಂದು ನ್ಯೂಜಿಲ್ಯಾಂಡ್‍ನ ಖ್ಯಾತ ಭೂಗರ್ಭ ಶಾಸ್ತ್ರ ವಿಜ್ಞಾನಿ ಐಚೆಟ್ಟಿರ ಮಾಚಯ್ಯ ಪ್ರತಿಪಾದಿಸಿದ್ದಾರೆ. ನಗರದ ಬಾಲಭವನದಲ್ಲಿ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ‘ಪ್ರಕೃತಿ ವಿಕೋಪದ ವಾಸ್ತವಗಳು ಮತ್ತು ಮುಂದಿನ ಹೆಜ್ಜೆಗಳು’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆಗಸ್ಟ್ 14 ರಿಂದ 17ರ 48 ಗಂಟೆ ಅವಧಿಯಲ್ಲಿ 30 ಇಂಚು ಮಳೆ ಸುರಿದಿರುವುದು ಭೂ ಕುಸಿತ ಮತ್ತು ಪ್ರವಾಹ…

ಅಬ್ಬಿ ಫಾಲ್ಸ್, ಮಾಂದಲಪಟ್ಟಿ ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ
ಕೊಡಗು

ಅಬ್ಬಿ ಫಾಲ್ಸ್, ಮಾಂದಲಪಟ್ಟಿ ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ

October 14, 2018

ಮಡಿಕೇರಿ:  ಕೊಡಗಿನಲ್ಲಿ ಆಗಸ್ಟ್ 16 ರಂದು ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಹಾನಿಗೀಡಾಗಿದ್ದ ಮಡಿಕೇರಿ-ಅಬ್ಬಿಫಾಲ್ಸ್ ಮತ್ತು ಮಡಿಕೇರಿ-ಮಾಂದಲಪಟ್ಟಿ ರಸ್ತೆಯನ್ನು ಇದೀಗ ಸಂಪೂರ್ಣ ದುರಸ್ಥಿಪಡಿಸಲಾಗಿದ್ದು ಪ್ರವಾಸಿಗರ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಹಿಂದೆ ರಸ್ತೆ ದುರಸ್ಥಿಯಾಗದ ಹಿನ್ನೆಲೆಯಲ್ಲಿ ಈ ಪ್ರವಾಸಿ ತಾಣಗಳಿಗೆ ತೆರಳದಂತೆ ನಿಷೇಧ ವಿಧಿಸಲಾಗಿತ್ತು. ಇದೀಗ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ರಸ್ತೆಯನ್ನು ಲಘು ವಾಹನಗಳ ಸಂಚಾರಕ್ಕೆ ಯೋಗ್ಯವಾದ ರೀತಿಯಲ್ಲಿ ದುರಸ್ಥಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಲಘು ವಾಹನಗಳಿಗೆ ಮಾಂದಲಪಟ್ಟಿ…

ಗೌಹಾತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಎ.ಎಸ್.ಬೋಪಣ್ಣ ನೇಮಕ
ಕೊಡಗು

ಗೌಹಾತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಎ.ಎಸ್.ಬೋಪಣ್ಣ ನೇಮಕ

October 13, 2018

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅಜ್ಜಿ ಕುಟ್ಟೀರ ಎಸ್.ಬೋಪಣ್ಣ ಅವರನ್ನು ಗೌಹಾತಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾಗಿ ಸುಪ್ರೀಂಕೋರ್ಟ್ ನೇಮಕ ಮಾಡಿದೆ. ಗೌಹಾತಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಅಜಿತ್ ಸಿಂಗ್ ಅವರು ಇತ್ತೀ ಚೆಗೆ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ನೇಮಕ ಮಾಡಲಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಿ, ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕೂರ್ ಮತ್ತು ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರಿದ್ದ ತ್ರಿಸದಸ್ಯ ಸಮಿತಿಯು ಗೌಹಾತಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ…

ಆರ್ಮಿ ಟ್ರೈನಿಂಗ್ ಕಮಾಂಡರ್ ಆಗಿ ಕೊಡಗಿನ ಪಿ.ಸಿ.ತಿಮ್ಮಯ್ಯ
ಕೊಡಗು

ಆರ್ಮಿ ಟ್ರೈನಿಂಗ್ ಕಮಾಂಡರ್ ಆಗಿ ಕೊಡಗಿನ ಪಿ.ಸಿ.ತಿಮ್ಮಯ್ಯ

October 12, 2018

ಮಡಿಕೇರಿ : ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕರ್ತವ್ಯದಲ್ಲಿರುವ ಕೊಡಗಿನ ಅಧಿಕಾರಿಯೊಬ್ಬರು ಇದೀಗ ಆರ್ಮಿ ಟ್ರೈನಿಂಗ್ ಕಮಾಂಡ್‍ನ ಮುಖ್ಯಸ್ಥರಾಗಿ ನಿಯುಕ್ತಿಗೊಳ್ಳುವ ಮೂಲಕ ಕೊಡಗಿನ ಸೇನಾ ಹಿರಿಮೆಗೆ ಮತ್ತೊಂದು ಗರಿ ಮೂಡಿದಂತಾಗಿದೆ. ಲೇ.ಜ. ಪಟ್ಟಚೆರುವಂಡ ಸಿ. ತಮ್ಮಯ್ಯ ಅವರು ಶಿಮ್ಲಾದಲ್ಲಿರುವ ಆರ್ಮಿ ಟ್ರೈನಿಂಗ್ ಕಮಾಂಡ್‍ನ ಕಮಾಂಡರ್ ಆಗಿ ನಿಯೋಜಿತರಾಗಿದ್ದಾರೆ. ಈ ಕೇಂದ್ರ ಭಾರತೀಯ ಸೇನೆಯ ಏಳು ಕಮಾಂಡ್‍ಗಳಲ್ಲಿ ಒಂದಾಗಿದೆ. ಈ ಹಿಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಬಿದ್ದಂಡ ಸಿ.ನಂದ ಅವರು ಈ ಶ್ರೇಣಿಯ ಅಧಿಕಾರಿಯಾಗಿ…

ಪ್ರವಾಹ ಪೀಡಿತ ಪ್ರದೇಶಗಳ ಬೆಳೆ ಹಾನಿ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಆರ್‍ಬಿಐ ಮಾರ್ಗಸೂಚಿ
ಕೊಡಗು

ಪ್ರವಾಹ ಪೀಡಿತ ಪ್ರದೇಶಗಳ ಬೆಳೆ ಹಾನಿ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಆರ್‍ಬಿಐ ಮಾರ್ಗಸೂಚಿ

October 12, 2018

ಮಡಿಕೇರಿ:  ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಘೋಷಿಸಿರುವ ತಾಲೂಕುಗಳಲ್ಲಿ ಆಗಿರುವ ಬೆಳೆಹಾನಿಗೆ ಹಲವು ರೀತಿಯ ರಿಯಾಯಿತಿ ನೀಡಲು ಬ್ಯಾಂಕ್‍ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗ ದರ್ಶಿ ಸೂತ್ರದ ಪ್ರಕಾರ ಕಾಫಿ ಬೆಳೆಯುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಕಾಫಿ ಬೆಳೆಗಾರರಿಗೂ ಅನೇಕ ರೀತಿಯ ಆರ್ಥಿಕ ಪರಿಹಾರ ದೊರಕಲಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ನರಸಿಂಹರಾಜಪುರ,…

1 59 60 61 62 63 84
Translate »