ಅಬ್ಬಿ ಫಾಲ್ಸ್, ಮಾಂದಲಪಟ್ಟಿ ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ
ಕೊಡಗು

ಅಬ್ಬಿ ಫಾಲ್ಸ್, ಮಾಂದಲಪಟ್ಟಿ ರಸ್ತೆ ಲಘು ವಾಹನ ಸಂಚಾರಕ್ಕೆ ಮುಕ್ತ

October 14, 2018

ಮಡಿಕೇರಿ:  ಕೊಡಗಿನಲ್ಲಿ ಆಗಸ್ಟ್ 16 ರಂದು ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಹಾನಿಗೀಡಾಗಿದ್ದ ಮಡಿಕೇರಿ-ಅಬ್ಬಿಫಾಲ್ಸ್ ಮತ್ತು ಮಡಿಕೇರಿ-ಮಾಂದಲಪಟ್ಟಿ ರಸ್ತೆಯನ್ನು ಇದೀಗ ಸಂಪೂರ್ಣ ದುರಸ್ಥಿಪಡಿಸಲಾಗಿದ್ದು ಪ್ರವಾಸಿಗರ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಈ ಹಿಂದೆ ರಸ್ತೆ ದುರಸ್ಥಿಯಾಗದ ಹಿನ್ನೆಲೆಯಲ್ಲಿ ಈ ಪ್ರವಾಸಿ ತಾಣಗಳಿಗೆ ತೆರಳದಂತೆ ನಿಷೇಧ ವಿಧಿಸಲಾಗಿತ್ತು. ಇದೀಗ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ರಸ್ತೆಯನ್ನು ಲಘು ವಾಹನಗಳ ಸಂಚಾರಕ್ಕೆ ಯೋಗ್ಯವಾದ ರೀತಿಯಲ್ಲಿ ದುರಸ್ಥಿ ಮಾಡಲಾಗಿದೆ.

ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಎಲ್ಲಾ ರೀತಿಯ ಲಘು ವಾಹನಗಳಿಗೆ ಮಾಂದಲಪಟ್ಟಿ ಮತ್ತು ಅಬ್ಬಿಫಾಲ್ಸ್ ರಸ್ತೆಯನ್ನು ಮುಕ್ತಗೊಳಿಸಿ ಆದೇಶ ಹೊರಡಿಸಿದೆ.

Translate »