ಮಡಿಕೇರಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ 2018ರ ಸಂಬಂಧ ಪ್ರಕೃತಿ ವಿಕೋಪದಿಂದಾಗಿ ಮಧ್ಯಂತರದಲ್ಲಿ ಸ್ಥಗಿತಗೊಳಿಸಲಾಗಿದ್ದ ಸೋಮವಾರಪೇಟೆ, ವಿರಾಜ ಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯಿತಿಯ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ.
ಅ.16 ರಂದು ಜಿಲ್ಲಾಧಿಕಾರಿ ಪರಿಷ್ಕøತ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದಾರೆ. ಅಂದೇ ನಾಮಪತ್ರ ಸಲ್ಲಿಸಲು ಕೊನೆ ದಿನ. ಅ.17 ರಂದು ನಾಮಪತ್ರ ಪರಿಶೀಲನೆ, ಅ.20 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ. ಅ.28 ರಂದು ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಅವಶ್ಯವಿದ್ದರೆ ಮತದಾನ ನಡೆಯಲಿದೆ. ಅ.30 ರಂದು ಮರು ಮತದಾನ ಇದ್ದಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಅ.31 ರಂದು ಮತ ಎಣಿಕೆಯು ಬೆಳಗ್ಗೆ 8ರಿಂದ ಆಯಾಯ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ರಾಜ್ಯ ಚುನಾ ವಣಾ ಆಯೋಗದ ಅಧೀನ ಕಾರ್ಯದರ್ಶಿ ಎಸ್.ಉಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.