Tag: Kodagu

ಕೊಡಗು ನೆರೆ ಸಂತ್ರಸ್ತರಿಗೆ ಡಾ. ಸುಧಾಮೂರ್ತಿ 25 ಕೋಟಿ ರೂ. ನೆರವು ಘೋಷಣೆ
ಮೈಸೂರು

ಕೊಡಗು ನೆರೆ ಸಂತ್ರಸ್ತರಿಗೆ ಡಾ. ಸುಧಾಮೂರ್ತಿ 25 ಕೋಟಿ ರೂ. ನೆರವು ಘೋಷಣೆ

October 11, 2018

ಮೈಸೂರು: ಪ್ರಕೃತಿ ವಿಕೋಪದಿಂದ ನಿರಾಶ್ರಿತರಾಗಿರುವ ಕೊಡಗಿನವರಿಗೆ ಮನೆ ನಿರ್ಮಿಸಿಕೊಡಲು ತಾವು 25 ಕೋಟಿ ರೂ. ನೆರವು ನೀಡು ವುದಾಗಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು ಇಂದಿಲ್ಲಿ ಪ್ರಕಟಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾ ಟಿಸಿ, ಮಾತನಾಡುತ್ತಿದ್ದ ಅವರು, ನೆರೆ ಪೀಡಿತ ಕೊಡಗಿನ ಜನರು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ತೊಂದರೆಗೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ಅಲ್ಲಿನ ಜನರಿಗೆ ಪುನರ್ವಸತಿ ಕಲ್ಪಿಸುತ್ತಿದೆ. ಆ ಕಾರ್ಯಕ್ಕೆ ನಮ್ಮ ಸಂಸ್ಥೆಯೂ ಕೈಜೋಡಿಸುವುದು ನಮ್ಮ…

ಕೊಡಗು ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‍ಗೆ ಆಗ್ರಹ
ಕೊಡಗು

ಕೊಡಗು ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‍ಗೆ ಆಗ್ರಹ

October 10, 2018

ಮಡಿಕೇರಿ: ಹಿಂದೆಂದೂ ಕೇಳರಿಯದ ಪ್ರಕೃತಿ ವಿಕೋಪಕ್ಕೆ ಕೊಡಗು ಜಿಲ್ಲೆ ತುತ್ತಾಗಿದ್ದು, ಕೇಂದ್ರ ಸರಕಾರ ಜಿಲ್ಲೆಯ ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಅದರಿಂದಾದ ನಷ್ಟಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಹಾರಂಗಿಯಲ್ಲಿ ಸಭೆ ನಡೆಸಿದ ವೀರಪ್ಪ ಮೊಯ್ಲಿ, ಸಮಗ್ರ ವರದಿ ಮತ್ತು ಈಗಾಗಲೇ ನಡೆಸಲಾದ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು….

ನಿರಾಶ್ರಿತರಿಗೆ ಮನೆ ನಿರ್ಮಾಣ ಸದ್ಯದಲ್ಲೇ ಆರಂಭ: ಜಗದೀಶ್
ಕೊಡಗು

ನಿರಾಶ್ರಿತರಿಗೆ ಮನೆ ನಿರ್ಮಾಣ ಸದ್ಯದಲ್ಲೇ ಆರಂಭ: ಜಗದೀಶ್

October 7, 2018

ಮಡಿಕೇರಿ:  ‘ ಆಗಸ್ಟ್‌ನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ಜನಜೀವನ ಅಸ್ತ ವ್ಯಸ್ತವಾಗಿತ್ತು. ಇದರಿಂದ ಹಲವು ಕುಟುಂಬಗಳು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದರು. ಪ್ರಕೃತಿ ವಿಕೋಪದಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಯಿತು. ಈ ನಿಟ್ಟಿನಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಈಗಾಗಲೇ ಜಾಗ ಗುರುತಿಸಿದ್ದು, ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡು, ಬಡಾವಣೆ ನಿರ್ಮಾಣ ಸಂಬಂಧ ಅನುಮೋದನೆ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದರು. ಮನೆ ನಿರ್ಮಾಣ ಸಂಬಂಧ ನಿರ್ಮಾಣಗೊಳ್ಳುತ್ತಿರುವ…

ನೆರೆ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ
ಕೊಡಗು

ನೆರೆ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ

September 29, 2018

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಸುರಿದ ಅತಿವೃಷ್ಠಿಯಿಂದಾಗಿ ಉಂಟಾದ ನೆರೆಹಾವಳಿ ಮತ್ತು ಭೂ ಕುಸಿತಕ್ಕೆ ಸಿಲುಕಿ ಸಂತ್ರಸ್ತರಾದ ಗ್ರಾಮಗಳು ಮತ್ತು ಅಲ್ಲಿ ನೆಲೆಸಿರುವ ಗ್ರಾಮಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ, ಕೊಡಗು ಪ್ರಾಕೃತಿ ವಿಕೋಪ ಮತ್ತು ನೆರೆ ಸಂತ್ರಸ್ತರ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದವು. ನಗರದ ಗಾಂಧಿ ಮಂಟಪದಿಂದ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಪ್ರತಿಭಟನಾ ಜಾಥಾ ತೆರಳಿದ ಸಂತ್ರಸ್ತರು ಮತ್ತು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದರು….

ಜೋಡುಪಾಲದ ಬಳಿ ಅಸ್ಥಿಪಂಜರ ಪತ್ತೆ
ಕೊಡಗು

ಜೋಡುಪಾಲದ ಬಳಿ ಅಸ್ಥಿಪಂಜರ ಪತ್ತೆ

September 28, 2018

ಭೂಕುಸಿತ ವೇಳೆ ನಾಪತ್ತೆಯಾಗಿರುವ ಬಾಲಕಿ ಮಂಜುಳಾ ಅವರದ್ದು ಎಂಬ ಶಂಕೆ ಮಡಿಕೇರಿ: ಭೂ ಕುಸಿತ ಮತ್ತು ಜಲ ಪ್ರಳಯಕ್ಕೆ ತುತ್ತಾಗಿ ಧ್ವಂಸಗೊಂಡ ಜೋಡುಪಾಲದ ಬಳಿ ಮೃತದೇಹವೊಂ ದರ ಅಸ್ತಿಪಂಜರ ಪತ್ತೆಯಾಗಿದೆ. ಆಗಸ್ಟ್ 16ರಂದು ಭೂ ಕುಸಿತ ಮತ್ತು ನದಿ ಪ್ರವಾ ಹಕ್ಕೆ ಸಿಲುಕಿ ಕಣ್ಮರೆಯಾಗಿದ್ದ ಮಂಜುಳಾ (15) ಎಂಬಾಕೆಯ ಮೃತದೇಹದ ಅಸ್ತಿಪಂಜರ ಇಬರಬಹುದೆಂಬ ಬಲ ವಾದ ಶಂಕೆ ವ್ಯಕ್ತವಾಗಿದ್ದು, ವೈದ್ಯಕೀಯ ಮೂಲಗಳು ಮತ್ತು ಪೊಲೀಸರು ಇದನ್ನು ದೃಢಪಡಿಸಿಲ್ಲ. ಮೃತದೇಹದ ಅಸ್ತಿಪಂಜರ ಮಾತ್ರವೇ ಪತ್ತೆಯಾಗಿರುವುದರಿಂದ ಮಂಜುಳಾ ಅವರ ಪೋಷಕರು…

ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ
ಕೊಡಗು

ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

September 28, 2018

ವಿರಾಜಪೇಟೆ:  ವಿರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿ ಗೌರಿ-ಗಣೇಶೋತ್ಸವದ ಅದ್ದೂರಿ ಕಾರ್ಯ ಕ್ರಮಗಳನ್ನು ಬದಿಗೊತ್ತಿ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಆಸ್ತಿ ಮನೆ ಕಳೆದು ಕೊಂಡು ಸಂಕಷ್ಟದಲ್ಲಿರುವ ಮೂರು ಕುಟುಂ ಬಗಳ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವುದು ಶ್ಲಾಘನಿಯ ಎಂದು ಜಿಲ್ಲಾ ವಾಣಿಜೋ ದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್ ಹೇಳಿದರು. ಪಟ್ಟಣದ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಗೌರಿ ಗಣೇಶ ವಿಸರ್ಜ ನೋತ್ಸವದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ‘ಸಂತ್ರಸ್ತರಿಗೆ ಸಹಾಯ ಹಸ್ತ’ದ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವ ಹಿಸಿದ್ದ…

ಕೊಡಗಿನ ದುರಂತಕ್ಕೆ ಮಳೆ, ಪ್ರಕೃತಿ ಮೇಲಿನ ಮಾನವ ಅಟ್ಟಹಾಸ ಕಾರಣ
ಕೊಡಗು, ಮೈಸೂರು

ಕೊಡಗಿನ ದುರಂತಕ್ಕೆ ಮಳೆ, ಪ್ರಕೃತಿ ಮೇಲಿನ ಮಾನವ ಅಟ್ಟಹಾಸ ಕಾರಣ

September 27, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಅತಿಯಾದ ಮಳೆ ಮತ್ತು ಪ್ರಕೃತಿ ಮೇಲಿನ ಮಾನವನ ಅಟ್ಟಹಾಸ ಕಾರಣವೆಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ(ಜಿಎಸ್‍ಐ)ದ ಹಿರಿಯ ಭೂ ವಿಜ್ಞಾನಿಗಳ ತಂಡ ವರದಿ ನೀಡಿದೆ. ಕೊಡಗು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ಜಿಎಸ್‍ಐನ ಮೂವರು ಭೂ ವಿಜ್ಞಾನಿಗಳು ತಯಾರಿಸಿದ 279 ಪುಟಗಳ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿದೆ. ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ.ವಿ. ಮಾರುತಿ ಮತ್ತು ಭೂ ವಿಜ್ಞಾನಿಗಳಾದ ಅಂಕುರ್ ಕುಮಾರ್ ಶ್ರೀವಾಸ್ತವ್…

ಕೆನರಾ ಬ್ಯಾಂಕ್‍ನಿಂದ ಸಿಎಂ ಪರಿಹಾರ ನಿಧಿಗೆ 2 ಕೋಟಿ ಹಸ್ತಾಂತರ
ಕೊಡಗು

ಕೆನರಾ ಬ್ಯಾಂಕ್‍ನಿಂದ ಸಿಎಂ ಪರಿಹಾರ ನಿಧಿಗೆ 2 ಕೋಟಿ ಹಸ್ತಾಂತರ

September 27, 2018

ಮಡಿಕೇರಿ: ಕೆನರಾ ಬ್ಯಾಂಕ್ ವತಿ ಯಿಂದ ಇತ್ತೀಚೆಗೆ ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬ್ಯಾಂಕ್ ಸಿಬ್ಬಂದಿಗಳ ಒಂದು ದಿನದ ವೇತನ ರೂ. 2 ಕೋಟಿ ಚೆಕ್‍ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂ ತರಿಸಿದರು. ಈ ಸಂದ ರ್ಭದಲ್ಲಿ ಕೆನರಾ ಬ್ಯಾಂಕ್ ಚೇರ್ಮನ್ ಮನೋಹರನ್, ಕಾರ್ಯ ಪಾಲಕ ನಿರ್ದೇಶಕರಾದ ಪಿ.ವಿ.ಭಾರತಿ, ಮಂಗಳೂರು ವೃತ್ತದ ಮಹಾ ನಿರ್ದೇ ಶಕರಾದ ಲಕ್ಷ್ಮಿನಾರಾಯಣ ಹಾಗೂ ಕೊಡಗು ಕ್ಷೇತ್ರ ಕಚೇರಿಯ ಮುಖ್ಯಸ್ಥರಾದ ವಿ.ಜೆ.ಅರುಣ ಇದ್ದರು.

ಕೊಡಗಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಎಂದು ಆರೋಪಿಸಿ ಪ್ರತಿಭಟನೆ
ಕೊಡಗು

ಕೊಡಗಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಎಂದು ಆರೋಪಿಸಿ ಪ್ರತಿಭಟನೆ

September 26, 2018

ಮಡಿಕೇರಿ: ಪ್ರಕೃತಿ ವಿಕೋಪ ದಿಂದ ತತ್ತರಿಸಿರುವ ಕೊಡಗು ಜಿಲ್ಲೆಗೆ ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಲತಾಯಿ ಧೋರಣೆ ತೋರುತ್ತಿವೆ ಎಂದು ಆರೋಪಿಸಿ ಸುವರ್ಣ ಕನ್ನಡನಾಡು ಯುವ ವೇದಿಕೆ ಮಡಿ ಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿ ಸಿದರು.ಜಿಲ್ಲೆಯ ಜನತೆ ಸಂಕಷ್ಟ ದಲ್ಲಿದ್ದು, ವಿವಿಧ ರೀತಿಯ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯ…

ರೈತ ಸಂಘದಿಂದ ಸಂತ್ರಸ್ತರಿಗೆ 3ನೇ ಸುತ್ತು ನೆರವು
ಕೊಡಗು

ರೈತ ಸಂಘದಿಂದ ಸಂತ್ರಸ್ತರಿಗೆ 3ನೇ ಸುತ್ತು ನೆರವು

September 26, 2018

ಕೊಡಗಿನ ಋಣ ತೀರಿಸಲು ಸಾಧ್ಯವಿಲ್ಲ: ಕೆ.ಎಸ್.ನಂಜುಂಡೇಗೌಡ ಗೋಣಿಕೊಪ್ಪಲು:  ಜಿಲ್ಲೆಯಲ್ಲಿ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿ ರುವ ಸಂತ್ರಸ್ತರ ಪ್ರದೇಶಗಳಾದ ಮಾಂದಲ ಪಟ್ಟಿ, ಒಣಚಲು, ಎರಡನೇ ಮೊಣ್ಣಂಗೇರಿ, ಚಾಮುಂಡೇಶ್ವರಿನಗರದ ಪ್ರದೇಶದಲ್ಲಿ ಇರುವ ಆಯ್ದ ನೂರು ಸಂತ್ರಸ್ತರ ಕುಟುಂಬ ಗಳಿಗೆ ಶ್ರೀರಂಗಪಟ್ಟಣದ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ನಂಜುಂಡೇಗೌಡ ಮುಂದಾಳತ್ವದಲ್ಲಿ ಅಕ್ಕಿ ಹಾಗೂ ಆಹಾರ ಸಾಮಗ್ರಿಗಳನ್ನು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ವಿತರಿಸಲಾಯಿತು. ಶ್ರೀರಂಗಪಟ್ಟಣದ ರೈತ ಮುಖಂಡ ರಾದ ಕೃಷ್ಣೇಗೌಡ, ಫಿಲಿಫ್, ಉಮೇಶ್ ಕುಮಾರ್,…

1 60 61 62 63 64 84
Translate »