Tag: Kodagu

ಗುತ್ತಿಗೆದಾರನ ಮೇಲೆ ಮಾರಣಾಂತಿಕ ಹಲ್ಲೆ
ಕೊಡಗು

ಗುತ್ತಿಗೆದಾರನ ಮೇಲೆ ಮಾರಣಾಂತಿಕ ಹಲ್ಲೆ

September 22, 2018

ಕುಶಾಲನಗರ: ಪ್ರೇಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುತ್ತಿಗೆದಾರನೊಬ್ಬನ ಮೇಲೆ ಯುವತಿಯ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾರಂಗಿಯಲ್ಲಿ ನಡೆದಿದೆ. ಗುತ್ತಿಗೆದಾರ ಗಿರೀಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಇವರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿದ ಯುವತಿಯ ಸಂಬಂ ಧಿಕರಾದ ಶೇಖರ್ ಮತ್ತು ಗೌತಮ್ ಎಂಬು ವರು ಮಾರಕಾಸ್ತ್ರಗಳಿಂದ ಗಿರೀಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರ ವಾಗಿ ಗಾಯಗೊಂಡಿದ್ದ ಗಿರೀಶ್ ಅವರಿಗೆ ಇಲ್ಲಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿ ಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ…

ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ
ಕೊಡಗು

ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ

September 18, 2018

ಒಮ್ಮತದಿಂದ ಧರ್ಮದ ಪಾಲನೆ ಅಗತ್ಯ ವಿರಾಜಪೇಟೆ: ಇಂದಿನ ಸಮಾಜದಲ್ಲಿ ಆಧ್ಯಾತ್ಮಿಕತೆ ಎಂಬುದು ಶಾಂತಿ ನೆಮ್ಮದಿಯನ್ನು ತರಬಲ್ಲಹ ಶಕ್ತಿಯನ್ನು ಹೊಂದಿದೆ. ವಿಶ್ವಕರ್ಮ ಸಮುದಾಯವು ತನ್ನ ಸಂಸ್ಕøತಿ ಆಚರಣೆ ಪದ್ಧತಿ ಪರಂಪರೆಯಿಂದ ವಿಶಿಷ್ಟತೆಯನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ ಹಿಂದೂಗಳು ಒಗ್ಗಟ್ಟನ್ನು ಸಾಧಿಸಿ ಸಮಾಜದ ಸುಧಾರಣೆಯೊಂದಿಗೆ ಪ್ರಗತಿಯತ್ತ ಸಾಗಬೇಕಾಗಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ವಿರಾಜಪೇಟೆ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಪುರಭವನ ದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತ್ಯೋತ್ಸವದ ಕಾರ್ಯಕ್ರಮದ ಮೊದಲಿಗೆ ಶ್ರೀ…

ಇಂದು ವಿದ್ಯುತ್ ವ್ಯತ್ಯಯ
ಕೊಡಗು

ಇಂದು ವಿದ್ಯುತ್ ವ್ಯತ್ಯಯ

September 18, 2018

ಮಡಿಕೇರಿ: ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿದ್ದು, ಸೆ.18 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪೊನ್ನಂಪೇಟೆ, ಗೋಣಿಕೊಪ್ಪಲು, ನಲ್ಲೂರು, ಹುದಿಕೇರಿ, ತಿತಿಮತಿ, ಹಾತೂರು, ಪಾಲಿಬೆಟ್ಟ, ಶ್ರೀಮಂಗಲ, ಬಾಳಲೆ, ಕಾನೂರು, ಬಿರುನಾಣಿ, ಕುಟ್ಟ, ವಿರಾಜಪೇಟೆ, ಬಿ.ಶೆಟ್ಟಗೇರಿ, ಬೇತ್ರೀ, ಕಡಂಗಮರೂರು, ಕಾಕೋಟು ಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರುಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಅಯ್ಯಂಗೇರಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ…

ಅಕ್ರಮ ಬೀಟೆ ನಾಟ ವಶ
ಕೊಡಗು

ಅಕ್ರಮ ಬೀಟೆ ನಾಟ ವಶ

September 17, 2018

ಕುಶಾಲನಗರ:  ಆನೆಕಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿ ಯಲ್ಲಿ ಗುರುವಾರ ಬೆಳಗಿನ ಜಾವ ಮಾರುತಿ ಕಾರಿನಲ್ಲಿ ಅಕ್ರಮ ಬೀಟಿ ನಾಟ ಸಾಗಾಟ ಮಾಡುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿಗಳು ಮಿಂಚಿನ ಕಾರ್ಯಾ ಚರಣೆ ನಡೆಸಿ ವಾಹನ ಸಮೇತ ಮಾಲು ವಶಪಡಿಸಿಕೊಂಡಿದ್ದಾರೆ. ಆನೆಕಾಡು ಮೀಸಲು ಅರಣ್ಯ ವ್ಯಾಪ್ತಿಯ ಗದ್ದಹಳ್ಳ ಸಮೀಪದ ಗುರುವಾರ ಮುಂಜಾನೆ 3.45 ಗಂಟೆಗೆ ನೀಲಿ ಮಾರುತಿ ಕಾರಿನಲ್ಲಿ ಬೀಟೆ ನಾಟಗಳನ್ನು ತುಂಬಿಸಿಕೊಂಡು ಗಿರಿಯಪ್ಪ ಅವರ ತೋಟ ಹಾಗೂ ಮನೆಗೆ ಹೋಗುವ ಜಾಗದಲ್ಲಿ ಅನುಮಾನಗೊಂಡ ಅರಣ್ಯ ಸಿಬ್ಬಂದಿ ಕಾರು…

ಕೊಡಗಿಗೆ ನೆರವಾಗಲು ರೈತ ಸಂಘ ಕಾರ್ಯಕ್ರಮ
ಮೈಸೂರು

ಕೊಡಗಿಗೆ ನೆರವಾಗಲು ರೈತ ಸಂಘ ಕಾರ್ಯಕ್ರಮ

September 17, 2018

ಮೈಸೂರು: ರಾಜ್ಯದ ಬರ ಪ್ರದೇಶಗಳು ಹಾಗೂ ನೆರೆ ಹಾವಳಿಗೆ ತುತ್ತಾಗಿರುವ ಕೊಡಗು ಜಿಲ್ಲೆಗೆ ನೆರವಾಗುವ ಸಂಬಂಧ ಕಾರ್ಯಕ್ರಮಗಳನ್ನು ರೂಪಿಸು ವುದು ಮತ್ತು ಅ.2 ಮತ್ತು ನ.30ರಂದು ದೆಹಲಿಯಲ್ಲಿ ನಡೆಯಲಿರುವ ರೈತರ ರ್ಯಾಲಿ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಭಾನುವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಯಿತು. ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ನಡೆದ ರಾಜ್ಯ ಕಾರ್ಯ ಕಾರಿಣಿ ಸಭೆಯಲ್ಲಿ ರಾಜ್ಯದ…

ಅರಣ್ಯ ನಾಶ ಹಾಗೂ ಕುಂಭದ್ರೋಣ ಮಳೆ ವಿಕೋಪಕ್ಕೆ ಕಾರಣ
ಕೊಡಗು

ಅರಣ್ಯ ನಾಶ ಹಾಗೂ ಕುಂಭದ್ರೋಣ ಮಳೆ ವಿಕೋಪಕ್ಕೆ ಕಾರಣ

September 15, 2018

ಮೈಸೂರು: ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತ ಕೊಡಗಿನ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಮೈಸೂರು ಕೇಂದ್ರದ ತಂತ್ರ ಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮನಸೋಇಚ್ಛೆ ಅರಣ್ಯ ನಾಶ, ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಈ ಬಾರಿ ಸುರಿದ ಭಾರಿ ಮಳೆ ಈ ಪ್ರಾಕೃತಿಕ ವಿಕೋಪಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಅಧ್ಯಯನ ನಡೆಸಿ ವರದಿ ನೀಡುವಂತೆ ಹುಣಸೂರು ಶಾಸಕ ಎ.ಎಚ್. ವಿಶ್ವನಾಥ್ ಆ.24…

ಕೊಡಗು ಪ್ರವಾಹ ಸಂತ್ರಸ್ತರಿಗೆ ವಕೀಲರ ಸಂಘದ ಸಹಾಯ ಹಸ್ತ
ಕೊಡಗು

ಕೊಡಗು ಪ್ರವಾಹ ಸಂತ್ರಸ್ತರಿಗೆ ವಕೀಲರ ಸಂಘದ ಸಹಾಯ ಹಸ್ತ

September 15, 2018

ಮಡಿಕೇರಿ: ಬೆಂಗಳೂರು ಹಾಗೂ ಮಡಿಕೇರಿ ವಕೀಲರ ಸಂಘದ ಕೆಲವು ಸದಸ್ಯರು ಸರಕಾರದ ಪ್ರಥಮ ದರ್ಜೆ ಹೆಚ್ಚುವರಿ ಅಡ್ವಕೇಟ್ ಜನರಲ್ ಅಜ್ಜಿಕುಟೀರ ಎಸ್.ಪೊನ್ನಣ್ಣ ನೇತೃತ್ವದಲಿ ಮಳೆಯಿಂದ ಹಾನಿಗೊಳಗಾದ ಕೊಡಗಿನ ವಿವಿಧ ಸ್ಥಳಗಳಿಗೆ ್ಲ ಸೆ.12 ರಂದು ಭೇಟಿ ನೀಡಿ ಪರಿಶೀಲಿಸಿದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಕಾರ್ಯದರ್ಶಿ ಗಂಗಾ ಧರಯ್ಯ, ಖಜಾಂಚಿ ಶಿವಮೂರ್ತಿ, ಮಡಿ ಕೇರಿ ವಕೀಲರ ಸಂಘದ ಅಧ್ಯಕ್ಷ ಕಾರೇರ ಕವನ್, ಉಪಾಧ್ಯಕ್ಷ ಪಿ.ಯು. ಪ್ರೀತಂ, ಕಾರ್ಯದರ್ಶಿ ಕಿಶೋರ್ ಹಾಗೂ ಖಜಾಂಚಿ ಜ್ಯೋತಿ ಶಂಕರ್ ಅವರು…

ಕೊಡಗು ರೈಲು ಸಂಪರ್ಕ ಕುಶಾಲನಗರದವರೆಗೆ ಮಾತ್ರ
ಮೈಸೂರು

ಕೊಡಗು ರೈಲು ಸಂಪರ್ಕ ಕುಶಾಲನಗರದವರೆಗೆ ಮಾತ್ರ

September 13, 2018

ಪರಿಸರಕ್ಕೆ ಧಕ್ಕೆಯಾಗಲಿರುವ ಹಿನ್ನೆಲೆಯಲ್ಲಿ ವಿವಾದಿತ ಮೈಸೂರು-ಮಡಿಕೇರಿ ರೈಲು ಮಾರ್ಗ ನಿರ್ಮಾಣ ಸಂಬಂಧ ಪರಿಸರವಾದಿಗಳು ಬಲವಾಗಿ ವಿರೋಧಿಸುತ್ತಿದ್ದು, ಇದನ್ನು ಕುಶಾಲನಗರದವರೆಗೆ ಮಾತ್ರ ನಿರ್ಮಿಸಲು ನಿರ್ಧರಿಸಿರುವ ವಿಚಾರವನ್ನು ರೈಲ್ವೆ ಅಧಿಕಾರಿಗಳು ಸಂಸದರಲ್ಲಿ ಸ್ಪಷ್ಟಪಡಿಸಿದರು. ಮೈಸೂರು-ಮಡಿಕೇರಿ ಹೊಸ ರೈಲು ಸಂಪರ್ಕ ಕುರಿತಂತೆ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಈ ವಿಷಯ ಬೆಳಕಿಗೆ ಬಂದಿತು. ರೈಲು ಮಾರ್ಗವನ್ನು ಕುಶಾಲನಗರದವರೆಗೆ ಮಾತ್ರ ಸೀಮಿತಗೊಳಿಸುವಂತೆ ಸಂಸದ ಪ್ರತಾಪ್‍ಸಿಂಹ ಸಲಹೆ ನೀಡಿದರು. ಕೇರಳದ ತಲಚೇರಿಯಿಂದ ಮಡಿಕೇರಿವರೆಗಿನ ಉದ್ದೇಶಿತ ರೈಲು ಸಂಪರ್ಕಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ…

ಕೊಡಗಿಗೆ ಕೇಂದ್ರ ಅಧ್ಯಯನ ತಂಡ ಆಗಮನ
ಕೊಡಗು

ಕೊಡಗಿಗೆ ಕೇಂದ್ರ ಅಧ್ಯಯನ ತಂಡ ಆಗಮನ

September 13, 2018

ಮಡಿಕೇರಿ: ಅತೀ ವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಕೇಂದ್ರ ಸರ್ಕಾ ರದ ಹಿರಿಯ ಐಎಎಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮಡಿಕೇರಿ ಸಮೀಪದ ಹಾಲೇರಿ, ಕಾಂಡಕೊಲ್ಲಿ, ಹಟ್ಟಿಹೊಳೆ, ಸೋಮವಾರಪೇಟೆ ರಸ್ತೆಯ ಭೂಕುಸಿತ ಪ್ರದೇಶಗಳಿಗೆ ತೆರಳಿ ವಾಸ್ತವಾಂಶವನ್ನು ದಾಖಲಿಸಿಕೊಂಡರು. ಕೇಂದ್ರ ಸರಕಾರದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್, ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಭಿಯಂತರ ಜಿತೇಂದ್ರ ಪನ್ವ, ಕೇಂದ್ರ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಪೊನ್ನುಸ್ವಾಮಿ ಅವರುಗಳು ಅತೀವೃಷ್ಠಿ ಹಾನಿಯ…

ನಿರಾಶ್ರಿತ ಕುಟುಂಬದ ಯುವತಿಗೆ ವಿವಾಹ ಭಾಗ್ಯ
ಕೊಡಗು

ನಿರಾಶ್ರಿತ ಕುಟುಂಬದ ಯುವತಿಗೆ ವಿವಾಹ ಭಾಗ್ಯ

September 13, 2018

ಮಡಿಕೇರಿ: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಕುಟುಂಬ ಸಹಿತ ನಿರಾಶ್ರಿತ ಶಿಬಿರ ಸೇರಿದ್ದ ಹೆಣ್ಣು ಮಗಳೊಬ್ಬಳ ವಿವಾಹಕ್ಕೆ ಗೌರಿ ಹಬ್ಬದ ಶುಭ ದಿನದಂದು ನಗರದ ಓಂಕಾರೇಶ್ವರ ದೇವಾಲಯ ಸಾಕ್ಷಿಯಾಯಿತು. ಭೂ ಕುಸಿತ ಮತ್ತು ಪ್ರವಾಹದಿಂದ ಸಂತ್ರಸ್ಥರಾದ ಮಕ್ಕಂದೂರು ಹೆಮ್ಮೆತ್ತಾಳು ಗ್ರಾಮದ ರಾಟೆಮನೆ ಪೈಸಾರಿ ನಿವಾಸಿ ರಂಜಿತಾ ಮತ್ತು ಕೇರಳ ಕಣ್ಣೂರಿನ ರಂಜಿತ್ ಅವರುಗಳು ಸರಳ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಗರದ ನಿರಾಶ್ರಿತರ ಶಿಬಿರದಲ್ಲಿದ್ದ ರಂಜಿತಾ ಅವರ ಕುಟುಂಬಕ್ಕೆ ಸೇವಾ ಭಾರತಿ, ಲಯನ್ಸ್ ಮತ್ತು ವಿವಿಧ…

1 62 63 64 65 66 84
Translate »