Tag: Kodagu

ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ
ಕೊಡಗು

ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ

September 9, 2018

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪದವಿ ಕಾಲೇಜಿನ 3 ವಿದ್ಯಾರ್ಥಿಗಳ ಮೇಲೆ ಕಾಲೇಜಿನ ಹಳೇ ವಿದ್ರ್ಯಾರ್ಥಿಗಳು ಹಲ್ಲೆ ನಡೆಸಿದ್ದು, ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದ್ವಿತೀಯ ಬಿ.ಎ. ವ್ಯಾಸಂಗ ಮಾಡುತ್ತಿರುವ ಲಿಖಿತ್, ದೇವಯ್ಯ, ಸುಮನ್ ಎಂಬವರ ಮೇಲೆ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ದರ್ಶನ್, ಸಂಗಮ್ ಮತ್ತು ಇಬ್ಬರು ಹಲ್ಲೆ ನಡೆಸಿದ್ದಾರೆ. ಕಾಲೇಜಿನಲ್ಲಿ ಯೂನಿಯನ್ ಡೇ ನಡೆ ಯುತ್ತಿದ್ದ ಸಂದರ್ಭ ಏಕಾಏಕಿ ಕಾಲೇಜಿಗೆ ಪ್ರವೇಶಿಸಿದ ಹಳೇ ವಿದ್ಯಾರ್ಥಿಗಳು ಹಾಕಿ ಸ್ಟಿಕ್‍ನಿಂದ ಹಲ್ಲೆ ನಡೆಸಿದ್ದು, 3 ವಿದ್ಯಾರ್ಥಿಗಳು…

ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರ ಕಿಟ್‍ಗಳು ಗ್ರಾಪಂ ಸದಸ್ಯನ ಮನೆಯಲ್ಲಿ ಪತ್ತೆ
ಕೊಡಗು

ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರ ಕಿಟ್‍ಗಳು ಗ್ರಾಪಂ ಸದಸ್ಯನ ಮನೆಯಲ್ಲಿ ಪತ್ತೆ

September 8, 2018

ಸುಂಟಿಕೊಪ್ಪ: ಮಳೆಹಾನಿ ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರ ಕಿಟ್‍ಗಳನ್ನು ಗ್ರಾಮ ಪಂಚಾಯ್ತಿ ಸದಸ್ಯರೋರ್ವರು ತಮ್ಮ ಸಂಬಂಧಿಯ ಮನೆಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ ಪ್ರಕರಣ ಬಯಲಾಗಿದೆ. ಸುಂಟಿಕೊಪ್ಪದ ರಾಮಮಂದಿರ ಬಳಿಯ ಮನೆಯೊಂದರಲ್ಲಿ ಗರಂಗದೂರು ಗ್ರಾಮ ಪಂಚಾಯ್ತಿ ಸದಸ್ಯರೋರ್ವರು 40 ಚೀಲ ಪರಿಹಾರ ಕಿಟ್‍ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಈ ಕುರಿತು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ಮತ್ತು ಕಂದಾಯ ಅಧಿಕಾರಿಗಳು ಪರಿಹಾರದ ಕಿಟ್‍ಗಳನ್ನು ವಶಕ್ಕೆ ಪಡೆದು ಕುಶಾಲನಗರ ಎಪಿಎಂಸಿ ಗೋದಾಮಿಗೆ ಹಸ್ತಾಂತರಿಸಿದರು. ಪಡಿತರ…

ನೆರೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ತೆರಾಪಂಥ್ ಯುವಕ ಪರಿಷತ್ ಸಿದ್ಧ
ಮೈಸೂರು

ನೆರೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ತೆರಾಪಂಥ್ ಯುವಕ ಪರಿಷತ್ ಸಿದ್ಧ

September 7, 2018

ಮೈಸೂರು: ಅಖಿಲ ಭಾರತೀಯ ತೆರಾಪಂಥ್ ಯುವಕ್ ಪರಿಷತ್, ಮೈಸೂರು ಶಾಖೆ ವತಿಯಿಂದ ಕೊಡಗು ಹಾಗೂ ಕೇರಳ ನೆರೆ ಸಂತ್ರಸ್ತರಿಗೆ ಪರಿಹಾರದ ಕಿಟ್‍ಗಳನ್ನು ವಿತರಿಸಲಾಗಿದ್ದು, ಇನ್ನೂ ಹೆಚ್ಚಿನ ಸೇವೆ ನೀಡಲು ಸಂಘಟನೆ ಸಿದ್ಧವಿದೆ ಎಂದು ಸಂಘಟನೆಯ ಮೈಸೂರು ಶಾಖೆ ಅಧ್ಯಕ್ಷ ಮುಖೇಶ್ ಗೊಗ್ಲಿಯಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಅವಶ್ಯವಿರುವ ದಿನಬಳಕೆ ವಸ್ತುಗಳಾದ ಹೊದಿಕೆ, ಉಡುಪು, ಸೊಳ್ಳೆ ಪರದೆ, ಮೇಣದಬತ್ತಿ ಸೇರಿದಂತೆ ದಿನಸಿ ಪದಾರ್ಥಗಳನ್ನು ಒಳ ಗೊಂಡ 800…

ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜಮೀನು ಕೃಷಿಯೋಗ್ಯ ಮಾಡಲು ಪ್ರಯತ್ನ
ಕೊಡಗು

ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜಮೀನು ಕೃಷಿಯೋಗ್ಯ ಮಾಡಲು ಪ್ರಯತ್ನ

September 7, 2018

ಪೊನ್ನಂಪೇಟೆ: ಉತ್ತರ ಕೊಡಗಿ ನಲ್ಲಿ ಉಂಟಾಗಿರುವ ಭೀಕರ ಪ್ರಕೃತಿ ವಿಕೋ ಪದಿಂದ ಭೂಕುಸಿತ ಸೇರಿದಂತೆ ಅಪಾರ ಪ್ರಮಾಣದಲ್ಲಿ ಕಾಫಿ ತೋಟ ಮತ್ತು ಕೃಷಿ ಭೂಮಿಗಳು ಹಾನಿಯಾಗಿದ್ದು, ಅವುಗಳನ್ನು ಸೇನಾ ನೆರವು ಪಡೆದು ಕೃಷಿ ಯೋಗ್ಯವಾಗಿ ಮಾಡಲು ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿನ ಸಂತ್ರಸ್ತ ಕೃಷಿಕರು ವಿಚಲಿತರಾಗಿ ಜಾಗವನ್ನು ಮಾರಾಟ ಮಾಡದಂತೆ ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಕರೆ ನೀಡಿದ್ದಾರೆ. ಪೊನ್ನಂಪೇಟೆಯ ಕೊಡಗು ವನ್ಯ ಜೀವಿ ಸಂಘದ ಕಛೇರಿಯಲ್ಲಿ…

ನೋವಿನಲ್ಲೂ ಮೊಳಗಿದ ಮಂಗಳವಾದ್ಯ ನೆರೆ ಸಂತ್ರಸ್ತೆಗೆ ಮಾಂಗಲ್ಯ ಭಾಗ್ಯ
ಕೊಡಗು

ನೋವಿನಲ್ಲೂ ಮೊಳಗಿದ ಮಂಗಳವಾದ್ಯ ನೆರೆ ಸಂತ್ರಸ್ತೆಗೆ ಮಾಂಗಲ್ಯ ಭಾಗ್ಯ

September 7, 2018

ಮಡಿಕೇರಿ: ತಾನು ಪ್ರೀತಿಸಿದ ಯುವತಿ ಮನೆ, ತೋಟವನ್ನು ಕಳೆದು ಕೊಂಡು ನಿರಾಶ್ರಿತ ಕೇಂದ್ರ ಪಾಲಾದರೂ ಕೂಡ ಪ್ರಿಯತಮ ಆಕೆಯನ್ನು ವರಿಸುವ ಮೂಲಕ ಮಾನವೀಯತೆಯ ಹೃದಯ ಸ್ಪರ್ಶಿ ಘಟನೆಗೆ ಮಡಿಕೇರಿ ಅಶ್ವಿನಿ ಆಸ್ಪತ್ರೆಯ ಗಣಪತಿ ದೇವಾಲಯ ಸಾಕ್ಷಿಯಾಯಿತು. ಜೋಡುಪಾಲ 2ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ವಾರಿಜ ಮತ್ತು ಮಹಾರಾಷ್ಟ್ರ ಪುಣೆ ಸಮೀಪದ ಸೊಲ್ಲಾಪುರ ನಿವಾಸಿ ರುದ್ರೇಶ್ ಅವರುಗಳೇ ಪ್ರೇಮ ವಿವಾಹವಾದ ಪ್ರೇಮಿಗಳಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಬದುಕು ಕಟ್ಟಿಕೊಂಡಿದ್ದ ವಾರಿಜ ಮತ್ತು ಬೆಂಗಳೂರಿನ ಖಾಸಗಿ ಆಪ್ಟಿಕಲ್ಸ್(ಕನ್ನಡಕ)…

ಕೊಡಗು ದುರಂತಕ್ಕೆ ಮಾಫಿಯಾ ಕಾರಣ
ಕೊಡಗು

ಕೊಡಗು ದುರಂತಕ್ಕೆ ಮಾಫಿಯಾ ಕಾರಣ

September 7, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿವಿಧ ಮಾಫಿಯಾವೇ ಕಾರಣವೆಂದು ಆರೋಪಿಸಿರುವ ಬಸವಣ್ಣ ದೇವರ ಬನ ಸಂರಕ್ಷಣಾ ಟ್ರಸ್ಟ್, ಪ್ರೊ.ಮಾಧವನ್ ಗಾಡ್ಗಿಲ್ ವರದಿ ಅನುಷ್ಠಾನದಿಂದ ಮಾತ್ರ ಮೂಲ ನಿವಾಸಿಗಳ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‍ನ ಕಾರ್ಯ ದರ್ಶಿ ಡಾ.ಬಿ.ಸಿ.ನಂಜಪ್ಪ, ಮತ ಬ್ಯಾಂಕ್, ಟಿಂಬರ್, ಭೂ ಪರಿವರ್ತನೆ, ರೆಸಾರ್ಟ್, ಮರಳು, ಕಲ್ಲು ಗಣಿಗಾರಿಕೆ ಸೇರಿದಂತೆ ಪರಿಸರಕ್ಕೆ ವಿರುದ್ಧವಾದ ಮಾಫಿಯಾ ಕೂಟಗಳ ತಪ್ಪಿನಿಂದಾಗಿ ಕೊಡಗು ಈ ದುಸ್ಥಿತಿಗೆ ಬಂದು ತಲುಪಿದ್ದು, ಮೂಲ ನಿವಾಸಿಗಳು ಅಸ್ತಿತ್ವವನ್ನು…

ಜೀಪು ಡಿಕ್ಕಿ; ಓರ್ವ ಸಾವು
ಕೊಡಗು

ಜೀಪು ಡಿಕ್ಕಿ; ಓರ್ವ ಸಾವು

September 7, 2018

ಮಡಿಕೇರಿ: ಚಾಲಕನ ನಿಯಂ ತ್ರಣ ಕಳೆದುಕೊಂಡು ಜೀಪೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ನಗರದ ದೇಚೂರು ರಸ್ತೆಯ ಇಳಿ ಜಾರಿನಲ್ಲಿ ವೇಗವಾಗಿ ಬಂದ ಜೀಪು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ತೆರಳುತ್ತಿದ್ದ ಪಶ್ಚಿಮ ಬಂಗಾಳ ಮೂಲಕ ತೌಫಲ್ (45) ಎಂಬುವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತೌಫಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು, ಜೀಪು ಮಗುಚಿ ಕೊಂಡಿದೆ. ಜೀಪು ಚಾಲಕನ ವಿರುದ್ದ ಅಜಾಗರೂಕತೆಯ ಚಾಲನೆ ಪ್ರಕರಣ ದಾಖಲಿಸಿ ಕೊಂಡಿರುವ ನಗರ ಸಂಚಾರ…

ಸಾಲಬಾಧೆಗೆ ಮಹಿಳೆ ಆತ್ಮಹತ್ಯೆ
ಕೊಡಗು

ಸಾಲಬಾಧೆಗೆ ಮಹಿಳೆ ಆತ್ಮಹತ್ಯೆ

September 7, 2018

ಮಡಿಕೇರಿ: ಖಾಸಗಿ ಹಣಕಾಸು ಸಂಘವೊಂದರಲ್ಲಿ ಮಾಡಿದ್ದ ಸಾಲವನ್ನು ಮರುಪಾವತಿಸಲಾಗದೇ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮರಗೋಡು ಗ್ರಾಮದಲ್ಲಿ ನಡೆದಿದೆ. ಮರಗೋಡು ನಿವಾಸಿ ಆಶಾ (34) ಎಂಬುವರೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಆಶಾ ಈ ಹಿಂದೆ ಸಂಘವೊಂದರಿಂದ 2 ಲಕ್ಷ ರೂಪಾಯಿಗಳ ಸಾಲ ಪಡೆದಿದ್ದು, 85 ಸಾವಿರ ರೂಪಾಯಿಗಳನ್ನು ಮರುಪಾವತಿಸಿದ್ದರು. ಉಳಿದ 1.15 ಲಕ್ಷ ರೂಪಾಯಿಗಳ ಸಾಲವನ್ನು ಪಾವತಿಸಲು ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಮನನೊಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣದ ಕುರಿತು…

ವಿರಾಜಪೇಟೆ ತಾಲೂಕನ್ನೂ ಬಿಡಲಿಲ್ಲ ಪ್ರಕೃತಿಯ ಮುನಿಸು: ಅಂಬಟ್ಟಿ ಗ್ರಾಮದಲ್ಲಿ ಮಣ್ಣಿನಡಿ ಮರೆಯಾದ ಮನೆ
ಕೊಡಗು

ವಿರಾಜಪೇಟೆ ತಾಲೂಕನ್ನೂ ಬಿಡಲಿಲ್ಲ ಪ್ರಕೃತಿಯ ಮುನಿಸು: ಅಂಬಟ್ಟಿ ಗ್ರಾಮದಲ್ಲಿ ಮಣ್ಣಿನಡಿ ಮರೆಯಾದ ಮನೆ

September 6, 2018

ಪೊನ್ನಂಪೇಟೆ: ಕೊಡಗಿನಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರಕೃತಿಯ ‘ಮಹಾ ದುರಂತ’ದ ಛಾಯೆ ಜಿಲ್ಲೆಯಾದ್ಯಂತ ಪಸರಿಸಿದೆ. ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂ ಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸುವಂತೆ ಪ್ರಕೃತಿಯ ಮಹಾದುರಂತ ಘಟಿಸಿದ್ದರಿಂದ ವಿರಾಜಪೇಟೆ ತಾಲೂಕಿನಲ್ಲಿ ಉಂಟಾದ ದುರಂತದ ಕಪ್ಪುಛಾಯೆ ಹೆಚ್ಚಿನ ಸುದ್ದಿಯಾಗದೆ ಸರಿಯಾಗಿ ಗಮನಸೆಳೆಯಲಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಕಳೆದ ತಿಂಗಳು ವಿರಾಜಪೇಟೆ ತಾಲೂಕಿನಲ್ಲಿ ಸಂಭವಿಸಿದ ಪ್ರಕೃತಿ ದುರಂತಗಳು ಇದೀಗ ತಡವಾಗಿ ಬೆಳಕಿಗೆ ಬರುತ್ತಿದ್ದು, ವಾಸದ ಮನೆಯೊಂದು ಭೂಕುಸಿತಕ್ಕೆ ಸಿಲುಕಿ ಮಣ್ಣಿನಲ್ಲಿ ಮರೆಯಾದ ಘೋರ ಘಟನೆ ವಿರಾಜಪೇಟೆ ಸಮೀಪದ…

ಮಳೆ ನಿಂತರೂ ನಿಂತಿಲ್ಲ ಕೊಡಗಿನ ಬವಣೆ: ವ್ಯಾಪಾರ-ವ್ಯವಹಾರ ಸ್ಥಗಿತ… ಕಾರ್ಮಿಕರಿಗೂ ಕೆಲಸವಿಲ್ಲ
ಕೊಡಗು

ಮಳೆ ನಿಂತರೂ ನಿಂತಿಲ್ಲ ಕೊಡಗಿನ ಬವಣೆ: ವ್ಯಾಪಾರ-ವ್ಯವಹಾರ ಸ್ಥಗಿತ… ಕಾರ್ಮಿಕರಿಗೂ ಕೆಲಸವಿಲ್ಲ

September 5, 2018

ಮಡಿಕೇರಿ: ಮಹಾಮಳೆಯ ರಣಕೇಕೆಯಿಂದ ಜಿಲ್ಲೆಯ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬಿದ್ದಿದೆ. ಅಂಗಡಿ, ಮಳಿಗೆಗಳು, ಶಾಪಿಂಗ್ ಸೆಂಟರ್‍ಗಳೆಲ್ಲವೂ ಬಣಗುಡುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಇಂದಿಗೂ ಆರ್ಥಿಕತೆ ಚೇತರಿಕೆ ಕಂಡಿಲ್ಲ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಸ್ತೆ ಧ್ವಂಸಗೊಂಡಿರುವುದು, ಭೂ ಕುಸಿತ ಮತ್ತಿತರ ಕಾರಣಗಳಿಂದ ಜನರು ಕೂಡ ನಗರ ಪಟ್ಟಣಗಳ ಕಡೆ ಮುಖ ಮಾಡು ತ್ತಿಲ್ಲ. ಭತ್ತ, ಕಾಫಿ, ಕರಿಮೆಣಸು, ಅಡಿಕೆ ಬೆಳೆಗಳು ಕೂಡ ಭಾರಿ ಪ್ರಮಾಣದಲ್ಲಿ ನಾಶಗೊಂಡಿದ್ದು, ವ್ಯಾಪಾರ ವಹಿವಾಟು ಕ್ಷೀಣಗೊಳ್ಳಲು ಕಾರಣವಾಗಿದೆ. ಮಡಿ…

1 64 65 66 67 68 84
Translate »