Tag: Kodagu

ಕೊಡಗಿನ ನಿರಾಶ್ರಿತರ ಶಿಬಿರದಲ್ಲಿ ಗೌರಿ ಹಬ್ಬದ ಸಂಭ್ರಮ
ಕೊಡಗು

ಕೊಡಗಿನ ನಿರಾಶ್ರಿತರ ಶಿಬಿರದಲ್ಲಿ ಗೌರಿ ಹಬ್ಬದ ಸಂಭ್ರಮ

September 13, 2018

ಮಡಿಕೇರಿ: ಕೊಡಗಿನಲ್ಲಿ ಪ್ರಕೃತ್ತಿ ವಿಕೋಪದ ಹಿನ್ನಲೆಯಲ್ಲಿ ಗಣೇಶ ಚತುರ್ಥಿಗೆ ಕಾರ್ಮೋಡ ಕವಿದಂತಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿಯೇ ಇರುವ ನೂರಾರು ಜನರು ಹಬ್ಬದ ಸಡಗರವಿಲ್ಲದೇ ಮಂಕಾಗಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜಿಲ್ಲೆಯಲ್ಲಿನ 17 ಪುನರ್ವಸತಿ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಗೌರಿಹಬ್ಬದ ಉಡುಗೊರೆಯಾಗಿ ಸರ್ಕಾರದಿಂದ ಮಹಿಳೆಯರಿಗೆ ರೇಷ್ಮೆ ಸೀರೆ, ಮಕ್ಕಳಿಗೆ ಬಟ್ಟೆ, ಪುರುಷರಿಗೆ ಷರ್ಟ್, ಪ್ಯಾಂಟ್ ವಿತರಿಸಿದರು. ಮಡಿಕೇರಿಯಲ್ಲಿರುವ ಮೈತ್ರಿ ಸಮುದಾಯ ಭವನಕ್ಕೆ ಬಂದ ಸಚಿವರು ಇಲ್ಲಿನ ನಿರಾಶ್ರಿತರಿಗೆ ಬಟ್ಟೆ ವಿತರಿಸಿದರಲ್ಲದೇ ನಿರಾಶ್ರಿತ ಮಹಿಳೆ ಉದಯಗಿರಿಯ ಜಯಂತಿ ಅವರೊಂದಿಗೆ ಕುಳಿತು…

ಕೊಡಗು ನಿರಾಶ್ರಿತರಿಗೆ ಪುನರ್‍ವಸತಿ ಕಾರ್ಯ ಆರಂಭ
ಕೊಡಗು

ಕೊಡಗು ನಿರಾಶ್ರಿತರಿಗೆ ಪುನರ್‍ವಸತಿ ಕಾರ್ಯ ಆರಂಭ

September 13, 2018

ಮಡಿಕೇರಿ:  ಭಾರೀ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬ ಗಳಿಗೆ ಜಿಲ್ಲಾಡಳಿತದ ವತಿಯಿಂದ ಪುನರ್ ವಸತಿ ವ್ಯವಸ್ಥೆ ಕಲ್ಪಿಸುವ ಕಾರ್ಯ ಆರಂಭಗೊಂಡಿದೆ. ಮಳೆ ಯಿಂದ ಹಾನಿಗೊಳಗಾದ ಗ್ರಾಮಗಳ ಸಮೀಪದಲ್ಲೇ ಕಂದಾಯ ಇಲಾಖೆಯ ವಶದಲ್ಲಿರುವ ಮತ್ತು ಸರಕಾರಿ ಜಾಗಗಳನ್ನು ಗುರುತಿಸಲಾಗಿದ್ದು ಒಟ್ಟು 100 ಎಕರೆ ಪ್ರದೇಶವನ್ನು ಪುನರ್ ವಸತಿಗಾಗಿ ಬಳಸಿಕೊಳ್ಳ ಲಾಗುತ್ತಿದೆ. ಈ ಸಳ್ಥಗಳೆಲ್ಲವು ಸಮತಟ್ಟು ಪ್ರದೇಶ ಗಳಾಗಿದ್ದು, ಇಲ್ಲಿ ನಿವೇಶನಗಳನ್ನು ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ದೊರೆತ್ತಿದೆ. ಕರ್ಣಗೇರಿ, ಕೆ.ನಿಡುಗಣೆ, ಕಾಟಕೇರಿ, ಮದೆನಾಡು, ಮಾದಾಪುರ, ಸಂಪಾಜೆ…

ಕೊಡಗಿನಲ್ಲಿ ಶೆಡ್‍ಗಳಿಗೆ ಕುಸಿದ ಬೇಡಿಕೆ
ಕೊಡಗು

ಕೊಡಗಿನಲ್ಲಿ ಶೆಡ್‍ಗಳಿಗೆ ಕುಸಿದ ಬೇಡಿಕೆ

September 12, 2018

ಮಡಿಕೇರಿ: ಭಾರಿ ಮಳೆಯಿಂದ ಮನೆ ಕಳೆದೊಕೊಂಡವರಿಗೆ ಸಂಯೋಜಿತ ಸಾಮಾಗ್ರಿಗಳ ತಂತ್ರಜ್ಞಾನವನ್ನು ಬಳಸಿ ನೂತನ ಮನೆಗಳನ್ನು ನಿರ್ಮಿಸಿಕೊಡಲಾಗುವುದೆಂದು ವಿಶೇಷ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, 2 ರೂಂಗಳುಳ್ಳ ಪ್ರಾಯೋಗಿಕ ಮನೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅನುಮತಿ ನೀಡಿದ್ದಾರೆ. ಈಗಾ ಗಲೇ ನಿರ್ಮಿಸಿರುವ ಶೆಡ್‍ಗಳಲ್ಲಿ ವಾಸಿಸಲು ಜನರು ಹಿಂದೇಟು ಹಾಕುತ್ತಿರುವ ಕಾರಣ ನೂತನ ತಂತ್ರಜ್ಞಾನ ಹಾಗೂ ವಸ್ತುಗಳನ್ನು ಬಳಸಿ ಮನೆಗಳನ್ನು ನಿರ್ಮಿ ಸಿಕೊಡಲಾಗುವುದು ಎಂದು ತಿಳಿಸಿದ್ದಾರೆ. ಈ ಮನೆಗಳಿಗೆ ಬಳಸುವ ವಸ್ತುಗಳು ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳುವ…

ತಕ್ಷಣ 2000 ಕೋಟಿ ರೂ. ಅನುದಾನಕ್ಕೆ ಪ್ರಧಾನಿಗೆ ಸಿಎಂ ಕುಮಾರಸ್ವಾಮಿ ಮನವಿ
ಮೈಸೂರು

ತಕ್ಷಣ 2000 ಕೋಟಿ ರೂ. ಅನುದಾನಕ್ಕೆ ಪ್ರಧಾನಿಗೆ ಸಿಎಂ ಕುಮಾರಸ್ವಾಮಿ ಮನವಿ

September 11, 2018

ಬೆಂಗಳೂರು:  ಅತಿ ವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿರುವ ರಾಜ್ಯಕ್ಕೆ ತತ್‍ಕ್ಷಣವೇ 2000 ಕೋಟಿ ರೂ. ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ ತಲೆದೋರಿರುವ ನೆರೆ ಮತ್ತು ಬರ ಪರಿಸ್ಥಿತಿ ಅಧ್ಯಯನ ಮಾಡಲು ಕೇಂದ್ರ ತಂಡ ಕಳುಹಿಸಿ, ತಕ್ಷಣವೇ ಅನುದಾನ ಬಿಡುಗಡೆ ಮಾಡಿ ಎಂದು ಕೋರಿದ್ದಾರೆ. ಸರ್ಕಾರದ ಕೋರಿಕೆಗೆ ತಕ್ಷಣವೇ ಸ್ಪಂದಿ ಸಿರುವ ಪ್ರಧಾನಿಯವರು, ರಾಜ್ಯಕ್ಕೆ ತಜ್ಞರ ತಂಡಗಳನ್ನು ಕಳುಹಿಸಿಕೊಡುವುದಾಗಿ ಹೇಳಿ ದರಾದರೂ, ಅನುದಾನದ ಬಗ್ಗೆ ಚಕಾರ ವೆತ್ತಿಲ್ಲ. ನವದೆಹಲಿಯಲ್ಲಿಂದು ಪ್ರಧಾನಿ…

ಇಂದಿನಿಂದ ಕೊಡಗಿಗೆ ಪ್ರವಾಸಿಗರ ನಿಷೇಧ ತೆರವು
ಕೊಡಗು

ಇಂದಿನಿಂದ ಕೊಡಗಿಗೆ ಪ್ರವಾಸಿಗರ ನಿಷೇಧ ತೆರವು

September 10, 2018

ಮಡಿಕೇರಿ: ಜಿಲ್ಲೆಯಾದ್ಯಂತ ಮಳೆಯ ಕಾರ್ಮೋಡ ಕರಗಿ ನೇಸರನ ಆಗಮನವಾಗಿದ್ದು, ಸಂಪೂರ್ಣ ಸ್ತಬ್ಧಗೊಂಡಿದ್ದ ಪ್ರವಾಸೋದ್ಯಮ ಚಟುವಟಿಕೆ ಮತ್ತೆ ಚಿಗುರೊಡೆಯುವ ಲಕ್ಷಣ ಕಂಡು ಬರುತ್ತಿದೆ. ಜಿಲ್ಲೆಗೆ ಪ್ರವಾಸಿಗರ ಆಗಮನಕ್ಕೆ ಜಿಲ್ಲಾಡಳಿತ ಹೇರಿದ್ದ ನಿರ್ಬಂಧವನ್ನು ಸೆ.10ರಿಂದ ಜಾರಿಗೆ ಬರುವಂತೆ ಸಡಿಲಿಸಿದ್ದು, ಪ್ರವಾಸೋದ್ಯಮವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದವರಿಗೆ ಇದರಿಂದ ತುಸು ನೆಮ್ಮದಿ ದೊರಕಿದಂತಾಗಿದೆ. ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ನಿರ್ಬಂಧದ ಕುರಿತು ವಿಶೇಷ ಸಭೆಯನ್ನು ಸೆ.7ರಂದು ನಡೆಸಲಾಗಿದ್ದು, ಅಧಿಕಾರಿ ಗಳ ಸಲಹೆ-ಸೂಚನೆ ಅನ್ವಯ ಸೆ.9ವರೆಗೆ ಪ್ರವಾಸಿಗರ ಆಗಮನಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಿ ಆದೇಶ…

ಉತ್ತರ ಅಮೇರಿಕದ ವಾರ್ಷಿಕ ಕೊಡವ ಕೂಟ: ಕೊಡಗಿನ ಪುನರ್ ನಿರ್ಮಾಣಕ್ಕೆ ರೂ.35 ಲಕ್ಷ ಸಂಗ್ರಹಿಸಿದ ಸದಸ್ಯರು
ಕೊಡಗು

ಉತ್ತರ ಅಮೇರಿಕದ ವಾರ್ಷಿಕ ಕೊಡವ ಕೂಟ: ಕೊಡಗಿನ ಪುನರ್ ನಿರ್ಮಾಣಕ್ಕೆ ರೂ.35 ಲಕ್ಷ ಸಂಗ್ರಹಿಸಿದ ಸದಸ್ಯರು

September 10, 2018

ಮೈಸೂರು: ಉತ್ತರ ಅಮೇ ರಿಕದ ವಾರ್ಷಿಕ ಕೊಡವ ಕೂಟವು (ಸಮ್ಮೇಳನ) ದಕ್ಷಿಣ ಕೆರೋಲಿನ (South Carolina) ದ ಮಿರ್ಟಲ್ ಬೀಚ್‍ನಲ್ಲಿ ಇತ್ತೀಚೆಗೆ ನಡೆಯಿತು. ಅಂದಹಾಗೆ ಮಿರ್ಟಲ್ ಬೀಚನ್ನು ಜಗತ್ತಿನ ಗಾಲ್ಫ್ ರಾಜಧಾನಿ ಎಂದೂ ಕರೆಯಲಾಗುತ್ತದೆ. ಮಿರ್ಟಲ್ ಬೀಚ್‍ನ Double Tree Resort by Hilton ನಲ್ಲಿ 370ಕ್ಕೂ ಹೆಚ್ಚು ಕೊಡವರು ಈ ಎರಡು ದಿನಗಳ ಕೂಟದಲ್ಲಿ ಭಾಗವಹಿಸಿದ್ದರು.ಕೊಡಗಿನ ಸಾಂಪ್ರದಾಯಿಕ ಅಕ್ಕಿ ತಿನಿಸು ಆದ ‘ಕಡಂಬುಟ್ಟು’ವನ್ನು ಹದ ಮಾಡಿ ತಯಾರಿಸುವುದರ ಮೂಲಕ ಒಂದು ದಿವಸ ಮುಂಚೆಯೇ ಈ ಎರಡು…

ಕೊಡಗಿನಲ್ಲಿ ಸ್ಥಳಾಂತರಗೊಂಡ ಅನಾಥ ಪ್ರಾಣಿಗಳಿಗೆ ಸ್ವಯಂಸೇವಕರ ಸಹಾಯಹಸ್ತ
ಕೊಡಗು

ಕೊಡಗಿನಲ್ಲಿ ಸ್ಥಳಾಂತರಗೊಂಡ ಅನಾಥ ಪ್ರಾಣಿಗಳಿಗೆ ಸ್ವಯಂಸೇವಕರ ಸಹಾಯಹಸ್ತ

September 10, 2018

ಕುಶಾಲನಗರ: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಾವಿರಾರು ಕುಟುಂಬಗಳು ಮನೆ, ಮಠ ಕಳೆ ದುಕೊಂಡು ಆಶ್ರಯವಿಲ್ಲದಂತಾಗಿರುವುದಲ್ಲದೆ, ನೂರಾ ಜಾನುವಾರುಗಳು ಸ್ಥಳಾಂತರಗೊಂಡಿವೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಮತ್ತು ವಿವಿಧ ಸಾಮಾ ಜಿಕ ಸಂಘಟನೆಗಳ ಸ್ವಯಂ ಸೇವಕರು ಪರಿಹಾರ ಕೇಂದ್ರಗಳಲ್ಲಿರುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಪ್ರಾಣಿ ಸಂರಕ್ಷಣಾ ಎನ್‍ಜಿಓಗಳು ಸ್ಥಳಾಂತರಗೊಂಡ ಪ್ರಾಣಿಗಳನ್ನು ರಕ್ಷಿಸಿ, ಅವು ಗಳಿಗೆ ಸೌಕರ್ಯ ನೀಡುವಲ್ಲಿ ಸರ್ವ ಪ್ರಯತ್ನ ಮಾಡುತ್ತಿವೆ. ಅನಾಥವಾದ ಸಾಕು ಪ್ರಾಣಿಗಳು ಮತ್ತು ಜಾನುವಾರುಗಳಿಗೆ ಆಶ್ರಯ, ಆಹಾರ ನೀಡುವುದರ ಜೊತೆಗೆ, ಗಾಯಗೊಂಡ…

ಕೊಡಗಿನಲ್ಲಿ ಬಂದ್ ಇಲ್ಲ: ಖಾಸಗಿ ಬಸ್ ಸಂಚಾರ ಸ್ಥಗಿತ
ಕೊಡಗು

ಕೊಡಗಿನಲ್ಲಿ ಬಂದ್ ಇಲ್ಲ: ಖಾಸಗಿ ಬಸ್ ಸಂಚಾರ ಸ್ಥಗಿತ

September 10, 2018

ಮಡಿಕೇರಿ:  ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಮತ್ತು ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ನಿರ್ಧಾರಕ್ಕೆ ಕೊಡಗು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ಜಿಲ್ಲಾ ಕಾಂಗ್ರೆಸ್ ಮತ್ತು ಬಿಜೆಪಿ ಕೊಡಗು ಜಿಲ್ಲೆಯಲ್ಲಿ ಬಂದ್‍ಗೆ ತಮ್ಮ ಬೆಂಬಲವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಆದರೆ, ಜೆಡಿಎಸ್ ಮಾತ್ರ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸುವುದಾಗಿ ಹೇಳಿಕೊಂಡಿದೆ. ಕೊಡಗು ಜಿಲ್ಲೆಯಲ್ಲಿ ಅತೀವೃಷ್ಟಿ, ಪ್ರವಾಹ, ಭೂ ಕುಸಿತದಿಂದ…

ಬೆಳೆ ನಷ್ಟದ ವರದಿ ಸೆ.12ರೊಳಗೆ ಸಲ್ಲಿಸಲು ತ.ಮ.ವಿಜಯ ಭಾಸ್ಕರ್ ಸೂಚನೆ
ಕೊಡಗು

ಬೆಳೆ ನಷ್ಟದ ವರದಿ ಸೆ.12ರೊಳಗೆ ಸಲ್ಲಿಸಲು ತ.ಮ.ವಿಜಯ ಭಾಸ್ಕರ್ ಸೂಚನೆ

September 9, 2018

ಮಡಿಕೇರಿ: ತೀವ್ರ ಅತಿವೃಷ್ಟಿಯಿಂದ ಹಾನಿಯಾಗಿರುವ ಕೃಷಿ, ತೋಟಗಾರಿಕೆ, ಕಾಫಿ, ಸಾಂಬಾರ ಸೇರಿದಂತೆ ವಿವಿಧ ಬೆಳೆಗಳ ನಷ್ಟದ ವರದಿಯನ್ನು ಸೆಪ್ಟೆಂಬರ್ 12ರೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತ.ಮ.ವಿಜಯ ಭಾಸ್ಕರ್ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಹಾನಿ ಸಂಬಂಧ ಇದುವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಆಗಬೇಕಿರುವ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಬೆಳೆ ನಷ್ಟ ಸಂಬಂಧ ಸರ್ಕಾರಕ್ಕೆ ಸೆಪ್ಟೆಂಬರ್ 15 ರೊಳಗೆ ವರದಿ ಸಲ್ಲಿಸಬೇಕಿರುವುದರಿಂದ,…

ನಾಳೆ ಕೊಡಗು ಬಂದ್ ಇಲ್ಲ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ
ಕೊಡಗು

ನಾಳೆ ಕೊಡಗು ಬಂದ್ ಇಲ್ಲ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ

September 9, 2018

ಮಡಿಕೇರಿ: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಭಾರತ್ ಬಂದ್‍ಗೆ ಕರೆ ನೀಡಿವೆ. ಆದರೆ ಕೊಡಗಿನಲ್ಲಿ ಬಂದ್ ಆಚರಿಸು ವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಜನರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಬಂದ್ ಕೈಬಿಡ ಲಾಗಿದೆ ಎಂದಿದ್ದಾರೆ. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಹತ್ತಾರು ಪ್ರಾಣ ಹಾನಿ ಸಂಬಂಧಿಸಿ, ಅನೇಕರು ಮನೆ, ಮಠ,…

1 63 64 65 66 67 84
Translate »