ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ
ಕೊಡಗು

ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

September 28, 2018

ವಿರಾಜಪೇಟೆ:  ವಿರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿ ಗೌರಿ-ಗಣೇಶೋತ್ಸವದ ಅದ್ದೂರಿ ಕಾರ್ಯ ಕ್ರಮಗಳನ್ನು ಬದಿಗೊತ್ತಿ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಆಸ್ತಿ ಮನೆ ಕಳೆದು ಕೊಂಡು ಸಂಕಷ್ಟದಲ್ಲಿರುವ ಮೂರು ಕುಟುಂ ಬಗಳ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವುದು ಶ್ಲಾಘನಿಯ ಎಂದು ಜಿಲ್ಲಾ ವಾಣಿಜೋ ದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್ ಹೇಳಿದರು.

ಪಟ್ಟಣದ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಗೌರಿ ಗಣೇಶ ವಿಸರ್ಜ ನೋತ್ಸವದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ‘ಸಂತ್ರಸ್ತರಿಗೆ ಸಹಾಯ ಹಸ್ತ’ದ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವ ಹಿಸಿದ್ದ ಅವರು ಗಣಪತಿ ಸೇವಾ ಸಮಿತಿ ಪರವಾಗಿ ಮಕ್ಕಂದೂರಿನ ಸಂತ್ರಸ್ತರಾದ ಮೂರು ಕುಟುಂಬಗಳಿಗೆ ತಲಾ ರೂ.15000 ನೀಡಿ ಸಾಂತ್ವಾನ ಹೇಳಿದ ನಂತರ ಮಾತ ನಾಡಿದ ಅವರು, ಕೊಡಗು ಭೀಕರ ಪ್ರಕೃತಿ ದುರಂತದಿಂದ ತತ್ತರಿಸಿದೆ. ಇಂತಹ ನಿರಾ ಶ್ರಿತ ಕುಟುಂಬಗಳನ್ನು ಗುರುತಿಸಿ ಸಹಾಯ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ಗಣಪತಿ ಸೇವಾ ಸಮಿತಿಯು ಭಕ್ತಿಯ ಜೊತೆಗೆ ಸಮಾಜ ಸೇವಾ ಮನೋಭಾವ ವನ್ನು ಹೊಂದಿದ್ದು ಇದರಂತೆ ಎಲ್ಲ ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ಸಹಾಯ ಮಾಡು ವಂತಾಗಬೇಕು ಎಂದರು. ಕಾಫಿ ಮಂಡಳಿಯ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಮಾತ ನಾಡಿ, ಕೊಡಗು ಕಂಡರಿಯದ ಪ್ರಕೃತಿ ವಿಕೋಪಕ್ಕೆ ಎದುರಾಗಿದೆ. ಸಹಸ್ರಾರು ಮಂದಿ ಮನೆ ಆಸ್ತಿ ಪಾಸ್ತಿ ಕಳೆದುಕೊಂಡಿರುವುದ ರಿಂದ ಕೊಡಗಿನ ಎಲ್ಲ ಉದಾರಿಗಳು ಸಂತ್ರ ಸ್ತರಿಗೆ ಸಹಾಯ ಹಸ್ತ ನೀಡಿ ಮಾನವೀ ಯತೆ ಮೆರೆಯುವಂತಾಗಬೇಕು. ಗಣಪತಿ ಸೇವಾ ಸಮಿತಿ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿರುವುದು ಉತ್ತಮ ಕಾರ್ಯ ಎಂದರು.

ಸಭೆಯನ್ನುದ್ದೇಶಿಸಿ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಬೋಪಣ್ಣ, ವಕೀಲರಾದ ಸೋಮ ಲೋಕ ನಾಥ್ ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಮಾಳೇ ಟಿರ ಕಾಶಿ ಕುಂಞಪ್ಪ, ಉದ್ಯಮಿಗಳಾದ ಚೋಪಿ ಜೋಸೆಫ್, ಬೊಳ್ಯಪಂಡ ಬೋಪಣ್ಣ, ಮಾಹಿನ್ ಕುಟ್ಟಿ, ಕುಯ್ಮಂಡ ಶಾಂತಿ ಕಾವೇರಪ್ಪ ಉಪಸ್ಥಿತರಿದ್ದರು.

ಸೇವಾ ಸಮಿತಿಯ ಅಧ್ಯಕ್ಷರಾದ ಚಿಲ್ಲ ವಂಡ ಗಣಪತಿ ಅಧ್ಯಕ್ಷತೆ ವಹಿಸಿ ಮಾತನಾ ಡಿದರು. ಇದೇ ಸಮಾರಂಭದಲ್ಲಿ ನಿರಾಶ್ರಿತ ರಾದ ಬಿದ್ದಿಯಂಡ ರಮೇಶ್ ಮೃತ ಗಿಲ್ಬರ್ಟ್ ಮಂಡೋಸ್ ಅವರ ಪತ್ನಿ ರೀಟಾ ಮಂಡೋಸ್, ಅಂತರಾಷ್ಟ್ರೀಯ ಆಟ ಗಾರ್ತಿ ಕು.ತಶ್ಮ ಇವರುಗಳು ನಗದು ಸಹಾಯವನ್ನು ಸ್ವೀಕರಿಸಿದರು.

ಸಮಾರಂಭದಲ್ಲಿ ಸೇವಾ ಸಮಿತಿಯ ಗೌರವ ಅಧ್ಯಕ್ಷ ಕುಯ್ಮಂಡ ರಾಖೇಶ್ ಬಿದ್ದಪ್ಪ, ಮಾಜಿ ಅಧ್ಯಕ್ಷ ಪಿ.ಎ.ಮಂಜು ನಾಥ್, ಉಪಾಧ್ಯಕ್ಷ ಐಚಂಡ ಸದಾ, ಕಾರ್ಯದರ್ಶಿಗಳಾದ ಶಿನೋಜ್, ಪ್ರಿತೇಶ್ ರೈ, ರಂಜನ್ ನಾಯ್ಡು ಹಾಜರಿದ್ದರು. ಎಂ.ಎಂ. ಶಶಿಧರ್ ಸ್ವಾಗತಿಸಿ ನಿರೂಪಿಸಿದರು.

Translate »