ಮೈಸೂರು,ಡಿ.12- ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ರಂಗ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸುವ ಪರಸ್ಪರ ಆರ್ಟ್ ಫೌಂಡೇಷನ್ ವತಿಯಿಂದ ಜಿ.ಎಲ್.ತ್ರಿಪುರಾಂತಕರವರು ರಚಿಸಿರುವ ‘ದ ಪೇಯಿಂಗ್ ಗೆಸ್ಟ್’ ನಾಟಕ ಡಿಸೆಂಬರ್ 14ರ ಶನಿವಾರ ಸಂಜೆ 7.00 ಗಂಟೆಗೆ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ರಂಗಾಯಣದ ಹಿರಿಯ ರಂಗಕರ್ಮಿಯಾಗಿದ್ದ ದಿವಂಗತ ಮಂಜುನಾಥ ಬೆಳೆಕೆರೆಯವರು ಸಂಸ್ಥಾಪಿಸಿರುವ ಪರಸ್ಪರ ಆರ್ಟ್ ಫೌಂಡೇಷನ್‍ನನ್ನು ಅವರ ಪತ್ನಿ ಶ್ರೀಮತಿ ಪ್ರಶಾಂತಿ ಬೆಳೆಕೆರೆ ಮುನ್ನಡೆಸುತ್ತಿದ್ದು, ಹೊಸ ನಾಟಕಕಾರರ ನಾಟಕಗಳಿಗೆ ರಂಗರೂಪ ನೀಡಿ, ಪ್ರಸ್ತುತಪಡಿಸುವ ಮೂಲಕ ಮಂಜುನಾಥ ಬೆಳೆಕೆರೆಯವರ ಆಶಯವನ್ನು ಸಾಕಾರಗೊಳಿಸುತ್ತಿದ್ದಾರೆ….
ವರಿಷ್ಠರಿಂದ ಬಿಎಸ್‍ವೈಗೆ ಗೌರವ, ಗುಣಗಾನ
December 12, 2019ನವದೆಹಲಿ, ಡಿ.11- ಕರ್ನಾಟಕದಲ್ಲಿನ ಉಪ ಚುನಾ ವಣೆಯಲ್ಲಿ ಅಮೋಘ ಜಯ ಸಾಧಿಸಿ ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷದ ನೆಲೆಯನ್ನು ಭದ್ರಪಡಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ವರಿಷ್ಠರ ಮಟ್ಟದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಕರ್ನಾಟಕದಲ್ಲಿನ ಬಿಜೆಪಿ ಮತ್ತು ಬಿಎಸ್‍ವೈ ಚುನಾವಣಾ ಸಾಧನೆಯನ್ನು ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲೇ ಹಾಡಿ ಹೊಗಳಿದ್ದಾರೆ. ನವದೆಹಲಿಯಲ್ಲಿ ಬುಧವಾರ ನಡೆದ ಭಾರತೀಯ ಜನತಾ ಪಕ್ಷದ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದ ಉಪ…
ರಾಜ್ಯಸಭೆಯಲ್ಲೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ
December 12, 2019ನವದೆಹಲಿ: ಭಾರೀ ವಿವಾದ ಸೃಷ್ಟಿಸಿ ರುವ ಪೌರತ್ವ ತಿದ್ದುಪಡಿ ಮಸೂದೆ ಬುಧವಾರ 8 ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ ರಾಜ್ಯಸಭೆ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಿಕೊಟ್ಟಿತು. ಮಸೂದೆಯ ಪರವಾಗಿ 125 ಸದ ಸ್ಯರು ಮತ ಹಾಕಿದರೆ, ಮಸೂದೆ ವಿರುದ್ಧ ವಾಗಿ 105 ಮತಗಳು ಚಲಾವಣೆಯಾ ದವು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು…
ಕೈ ಮುಗಿತೀನಿ, ಬಡ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಕಲ್ಪಿಸಿ: ಬಿಎಸ್‍ವೈ
December 12, 2019ಬೆಂಗಳೂರು,ಡಿ.11(ಕೆಎಂಶಿ)- ಕೆಲಸದ ಸಮಯದಲ್ಲಿ ರೋಗಿ ಗಳನ್ನು ನೋಡುವುದನ್ನು ಬಿಟ್ಟು ಹೊರಗಡೆ ಸುತ್ತುವುದು ನಿಮ್ಮ ವೃತ್ತಿಗೆ ಶೋಭೆ ತರುವುದಿಲ್ಲ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯರು ಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ. ಆರ್ಥಿಕವಾಗಿ ದುರ್ಬಲರಾದವರು ಚಿಕಿತ್ಸೆಗಾಗಿ ನಿಮ್ಮನ್ನು ಅವ ಲಂಬಿತರಾಗಿರುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಮತ್ತು ನ್ಯಾಯ ಕಲ್ಪಿಸಿದರೆ ಅದಕ್ಕಿಂತ ಬೇರೆ ಪುಣ್ಯ ಕಾರ್ಯವಿಲ್ಲ. ನಿಮ್ಮ ಗಳಿಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ಬಡ ರೋಗಿಗಳನ್ನು ನಿರ್ಲ ಕ್ಷಿಸಬೇಡಿ. ಸರ್ಕಾರ ನೀಡಿದ ಸವಲತ್ತುಗಳನ್ನು ಅವರಿಗೆ ಒದಗಿಸಿ, ಉತ್ತಮ ಚಿಕಿತ್ಸೆ ನೀಡಿ…
ವಸತಿ ಯೋಜನೆ ದುರ್ಬಳಕೆ ತಡೆಗೆ ಹೊಸ ಕಾಯ್ದೆ ರಚನೆ
December 12, 2019ಬೆಂಗಳೂರು,ಡಿ.11(ಕೆಎಂಶಿ)- ವಸತಿ ಯೋಜನೆಯಲ್ಲಿ ದುರ್ಬಳಕೆಯಾಗುವು ದನ್ನು ತಡೆಯಲು ಹೊಸ ಕಾಯ್ದೆ ರೂಪಿಸುವುದಾಗಿ ತಿಳಿಸಿರುವ ವಸತಿ ಸಚಿವ ವಿ.ಸೋಮಣ್ಣ, ರಾಜ್ಯವನ್ನು ಕೊಳಚೆ ಮುಕ್ತ ಮಾಡುವುದಾಗಿ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಯ ಯೋಜನೆಯಡಿ ಭಾರೀ ಅವ್ಯವಹಾರ ನಡೆದು, ಅಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರು ಕೋಟ್ಯಾಂತರ ರೂ. ಗುಳುಂ ಮಾಡಿದ್ದಾರೆ. ಒಂದೇ ಮನೆಯನ್ನು ನಾಲ್ಕರಿಂದ ಹತ್ತು ಜನಗಳಿಗೆ ಹಂಚಿ, ಆ ದುಡ್ಡನ್ನು ಸ್ಥಳೀಯ ಅಧಿಕಾರಿಗಳು, ನುಂಗಿ ಹಾಕಿದ್ದಾರೆ. ಇಂತಹವರನ್ನು ಅಮಾನತು ಮಾಡಿ, ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಅವರು ತಿಳಿಸಿದರು….
ಸ್ವತಂತ್ರ ತನಿಖೆಗೆ ಒಪ್ಪಿದ ಸುಪ್ರೀಂ
December 12, 2019ನವದೆಹಲಿ: ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ್ದ ಹೈದರಾಬಾದ್ ‘ದಿಶಾ’ ಪ್ರಕರಣದ ನಾಲ್ವರು ಆರೋಪಿಗಳ ಎನ್ ಕೌಂಟರ್ ಪ್ರಕರಣ ಇದೀಗ ಟ್ವಿಸ್ಟ್ ಪಡೆ ದಿದೆ. ಎನ್‍ಕೌಂಟರ್ ಕುರಿತು ಕೂಲಂಕುಷ ತನಿಖೆಗೆ ಸುಪ್ರೀಂಕೋರ್ಟ್ ಮುಂದಾಗಿದೆ. ಹೈದರಾಬಾದ್ ಪಶುವೈದ್ಯೆ ಅತ್ಯಾ ಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳು ಡಿ.6ರಂದು ಸೈಬರಾ ಬಾದ್ ಪೆÇಲೀಸರು ನಡೆಸಿದ ಎನ್ ಕೌಂಟರ್‍ನಲ್ಲಿ ಬಲಿಯಾಗಿದ್ದರು. ಈ ಕುರಿತು ಸ್ವತಂತ್ರ ತನಿಖೆಗೆ ಒತ್ತಾಯಿಸಿ ಜಿ.ಎಸ್.ಮಣಿ ಎಂಬು ವವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿಯ ವಿಚಾರಣೆ…
ದಸರಾ ಕ್ರೀಡಾಕೂಟದ ವಿಜೇತರಿಗೆ ಎರಡು ತಿಂಗಳಾದರೂ ಕೈ ಸೇರದ ನಗದು ಬಹುಮಾನ
December 12, 2019ಮೈಸೂರು,ಡಿ.11- `ದೇವರು ವರ ಕೊಟ್ರು ಪೂಜಾರಿ ಕೊಡನು’ ಗಾದೆ ಮಾತಿಗೆ ಅನ್ವರ್ಥಕವಾಗಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವರ್ತನೆ. ದಸರಾ ರಾಷ್ಟ್ರ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ಆಯೋಜಿಸಿ ಸೈ ಎನಿಸಿಕೊಂಡಿದ್ದ ಕ್ರೀಡಾ ಇಲಾಖೆ, ಇಲ್ಲಿನ ವಿಜೇತರಿಗೆ ಎರಡು ತಿಂಗಳಾದರೂ ನಗದು ಬಹುಮಾನ ನೀಡದೆ, ದಸರಾ ಉತ್ಸವಕ್ಕೆ ಕೆಟ್ಟ ಭಾವನೆ ಮೂಡುವಂತೆ ಮಾಡಿದೆ. ಮೈಸೂರು ಮಾತ್ರವಲ್ಲದೆ ರಾಜ್ಯದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದಸರಾ ಕ್ರೀಡಾಕೂಟ ತನ್ನದೇ ಪ್ರಾಮು ಖ್ಯತೆ ಪಡೆದಿದೆ. ದೇಶದ ವಿವಿಧ ರಾಜ್ಯಗಳಿಂದ ಕ್ರೀಡಾಪಟು…
ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು
December 12, 2019ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾರೋಗ್ಯದಿಂದ ಬೆಂಗ ಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿರುವ ಅವರು, ನಿಯಮಿತವಾಗಿ ಆರೋಗ್ಯ ತಪಾಸಣೆಗೆಂದು ಇಂದು ಆಸ್ಪತ್ರೆಗೆ ತೆರಳಿದಾಗ ಅವರ ಹೃದಯಕ್ಕೆ ರಕ್ತ ಪರಿ ಚಲನೆ ಸರಿಯಾಗಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆಂದು ಸಿದ್ದರಾಮಯ್ಯ ಪುತ್ರ, ಶಾಸಕ ಡಾ.ಯತೀಂದ್ರ ತಿಳಿಸಿದ್ದಾರೆ. ಸಿದ್ದ ರಾಮಯ್ಯ ಆಂಜಿಯೋಪ್ಲ್ಯಾಸ್ಟ್ ಚಿಕಿತ್ಸೆಗೆ ಒಳಗಾಗಿದ್ದಾರೆ. ಡಾ.ರಮೇಶ್ ಅವರು, ತಮ್ಮ ತಂದೆಯ ಆರೋಗ್ಯದ ಬಗ್ಗೆ ನೋಡಿ ಕೊಳ್ಳುತ್ತಿದ್ದರು. ಈ ಹಿಂದೆಯೂ ಕೂಡ ಅವರಿಗೆ…
ಮೈಸೂರಿನ ವರ್ತಕರು, ವಿದ್ಯಾರ್ಥಿಗಳಿಗೆ ಡಿ.ಬನುಮಯ್ಯ ಆದರ್ಶವಾಗಲಿ
December 12, 2019ಮೈಸೂರು,ಡಿ.11(ಎಂಟಿವೈ)- ಮೈಸೂ ರಿನ ವರ್ತಕರು ಪಾರದರ್ಶಕವಾಗಿದ್ದು, ಇಲ್ಲಿರುವಂತಹ ವರ್ತಕರನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಧರ್ಮಪ್ರಕಾಶ ಡಿ.ಬನುಮಯ್ಯ ಅವರ ಆದರ್ಶವನ್ನೇ ಪಾಲಿಸುತ್ತಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಪ್ರಶಂಸಿಸಿದ್ದಾರೆ. ಮೈಸೂರಿನ ಡಿ.ಬನುಮಯ್ಯ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರಂಭ ದಲ್ಲಿ ಮಾತನಾಡಿದ ಅವರು, ಎಪಿಎಂಸಿ ಯಲ್ಲಿ ಒಡನಾಟ ಇಟ್ಟುಕೊಂಡು ಬಂದಿ ರುವ ನನಗೆ ಮೈಸೂರಿನ ವರ್ತಕರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ವ್ಯಾಪಾರಿ ಯಾಗಿದ್ದ ಡಿ.ಬನುಮಯ್ಯ ಅವರ ಆದರ್ಶ ವನ್ನೇ ಈಗಿನ ವರ್ತಕರು ಅನುಸರಿಸುತ್ತಾ ಪಾರದರ್ಶಕವಾಗಿ ವ್ಯವಹರಿಸುತ್ತಿದ್ದಾರೆ ಎಂದು ಬಣ್ಣಿಸಿದರು….
ಡಿ.16, 17ಕ್ಕೆ `ಕಾರಂಜಿಕೆರೆ ಉತ್ಸವ’
December 12, 2019ಮೈಸೂರು,ಡಿ.11(ಎಂಟಿವೈ)- ಮೈಸೂ ರಿನ ಕಾರಂಜಿಕೆರೆ ಆವರಣದಲ್ಲಿ ಡಿ.16 ಮತ್ತು 17ರಂದು ನಡೆಯುವ ಕಾರಂಜಿಕೆರೆ ಉತ್ಸವಕ್ಕೆ ಮೈಸೂರು ಮೃಗಾಲಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಉತ್ಸವದಲ್ಲಿ ಪಾಲ್ಗೊ ಳ್ಳುವ ಆಸಕ್ತರಿಗೆ ವಿವಿಧ ವಿಷಯಗಳಲ್ಲಿ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಕೆರೆ ಪರಿಸರ, ಜೀವವೈವಿಧ್ಯ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲೆಂದೇ ಇದೇ ಮೊದಲ ಬಾರಿಗೆ ಕಾರಂಜಿಕೆರೆ ಉತ್ಸವ ಆಯೋಜಿಸಲಾಗಿದೆ. ಹಲವು ವರ್ಷಗಳ ಬಳಿಕ ಕೆರೆಯಲ್ಲಿ ಹೂಳೆತ್ತ ಲಾಗಿದ್ದು, ಮಳೆ ನೀರಿನಿಂದ ಕೆರೆ ತುಂಬಿ ತುಳುಕಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ…










