ಮೈಸೂರು, ಡಿ.14(ಆರ್‍ಕೆ)- ವಾಸ್ತವಾಂಶ ಮರೆಮಾಚಿ ಕಾನೂನು ಬಾಹಿರವಾಗಿ 3 ನಿವೇಶನ ಪಡೆದಿರುವ ಎಂ.ಎನ್.ರಾಮಕೃಷ್ಣಗೆ ಮುಡಾ ವಿಶೇಷ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ. ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗ `ಕರ್ನಾಟಕದ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಾಗಲೀ ಅಥವಾ ಸಂಘ-ಸಂಸ್ಥೆಗಳಿಂದಾಗಲೀ ನಿವೇಶನ/ಮನೆಯನ್ನು ಪಡೆದುಕೊಂಡಿರುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಪಡೆದುಕೊಂಡಿರುವುದರಿಂದ ನಿವೇಶನ ಹಂಚಿಕೆ ನಿಯಮದಡಿ ಕಾನೂನು ಬಾಹಿರವಾಗಿದೆ ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ. ಪಡೆದುಕೊಂಡಿರುವ ನಿವೇಶನಗಳ ಮಂಜೂರಾತಿಯನ್ನು ಏಕೆ ರದ್ದುಗೊಳಿಸಬಾರದು ಹಾಗೂ ನಿಮ್ಮ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವ…
ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಶೇ.40 ರಿಯಾಯ್ತಿ ದರದ ಔಷಧಿ ವ್ಯಾಪಾರ ಮಳಿಗೆ
December 13, 2019ಬೆಂಗಳೂರು, ಡಿ.12(ಕೆಎಂಶಿ)- ಗ್ರಾಮೀಣ ಭಾಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಶೇ.40ರಷ್ಟು ರಿಯಾ ಯಿತಿ ದರದಲ್ಲಿ ಔಷಧಿಗಳನ್ನು ಪೂರೈಸುವ ಔಷಧಿ ಅಂಗಡಿ ಗಳನ್ನು ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾರಂಭಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಜೆನರಿಕ್ ಔಷಧಿಗೂ, ಈ ಮಳಿಗೆಗಳಿಗೂ ಸಂಬಂಧ ವಿಲ್ಲ. ನೇರವಾಗಿ ಔಷಧಿ ಕಂಪನಿಗಳಿಂದ ಔಷಧಿ ಖರೀ ದಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಮೊದಲ ಹಂತದಲ್ಲಿ ಹೋಬಳಿ ಕೇಂದ್ರಗಳಲ್ಲೂ ನಂತರ ರಾಜ್ಯದ 6030 ಪಂಚಾಯಿತಿಗಳಲ್ಲೂ, ಮಳಿಗೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದೆ. ಪ್ರಾಯೋಗಿಕವಾಗಿ…
ಪರಿಶಿಷ್ಟ ಪಂಗಡಕ್ಕೆ ಪರಿವಾರ, ತಳವಾರ ಸಮುದಾಯಗಳ ಸೇರ್ಪಡೆ ವಿಧೇಯಕಕ್ಕೆ ರಾಜ್ಯಸಭೆ ಅಂಗೀಕಾರ
December 13, 2019ನವದೆಹಲಿ, ಡಿ.12-ಕಳೆದ ಮೂರೂ ವರೆ ದಶಕಕ್ಕೂ ಅಧಿಕ ಕಾಲದಿಂದ ಪರಿ ವಾರ ಮತ್ತು ತಳವಾರ ಸಮುದಾಯ ಗಳು ನಡೆಸುತ್ತಿದ್ದ ಹೋರಾಟಕ್ಕೆ ಫಲ ದೊರಕುವ ಕಾಲ ಸನ್ನಿಹಿತವಾಗಿದೆ. ಇಂದು ರಾಜ್ಯಸಭೆಯಲ್ಲಿ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂ ಧಿತ ವಿಧೇಯಕ ಅಂಗೀಕಾರವಾಗಿದೆ. ಇದರೊಂದಿಗೆ ಮೈಸೂರು, ಚಾಮರಾಜ ನಗರ, ಮಂಡ್ಯ, ಹಾಸನ ಸೇರಿದಂತೆ ರಾಜ್ಯ ದಾದ್ಯಂತ ಇರುವ ಸುಮಾರು 20 ಲಕ್ಷ ಪರಿವಾರ ಮತ್ತು ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸವಲತ್ತು ಲಭಿಸುವ ದಿನಗಳು ಸಮೀಪಿಸಿವೆ….
ಬೆಂಬಲ ಬೆಲೆಯಡಿ ಭತ್ತ, ರಾಗಿ, ಜೋಳ ಖರೀದಿ
December 13, 2019ಬೆಂಗಳೂರು, ಡಿ.12(ಕೆಎಂಶಿ)- ಮಧ್ಯ ವರ್ತಿಗಳ ಹಾವಳಿಯಿಂದ ರೈತರನ್ನು ಪಾರು ಮಾಡಲು ಭತ್ತ, ರಾಗಿ ಹಾಗೂ ಜೋಳ ವನ್ನು ಬೆಂಬಲ ಬೆಲೆಯಡಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪು ಟದ ಉಪ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‍ಗೆ 1815 ರೂ., ಎ-ಗ್ರೇಡ್ ಭತ್ತಕ್ಕೆ 1835 ರೂ., ನಿಗದಿ ಮಾಡಿದೆ. ರಾಗಿ ಪ್ರತಿ ಕ್ವಿಂಟಾಲ್‍ಗೆ 3150 ರೂ. ದರದಲ್ಲಿ ಖರೀದಿ ಮಾಡಲು ತೀರ್ಮಾನಿಸಿದ್ದರೆ, ಬಿಳಿ…
ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ
December 13, 2019ಬೆಂಗಳೂರು,ಡಿ.12- ತೀವ್ರ ಹೃದಯ ಸಮಸ್ಯೆಯಿಂದಾಗಿ ಆಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ ಸಿದ್ದ ರಾಮಯ್ಯರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ಸಂಜೆ 7 ಗಂಟೆಗೆ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಸಿದ್ದರಾಮಯ್ಯರ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಈ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ರೊಂದಿಗೆ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು. ಕಾವೇರಿ ನಿವಾಸದಲ್ಲಿದ್ದ ಸಿದ್ದರಾಮಯ್ಯ ರಲ್ಲಿ ಬುಧವಾರ ಬೆಳಿಗ್ಗೆ…
ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ
December 13, 2019ನವದೆಹಲಿ,ಡಿ.12- ಎನ್‍ಡಿಎ ಸರ್ಕಾರದ ಮಹತ್ವದ ಕ್ರಮಗಳಲ್ಲೊಂ ದಾದ `ಪೌರತ್ವ (ತಿದ್ದುಪಡಿ) ಮಸೂದೆ’ಗೆ ಗುರುವಾರ ರಾತ್ರಿ ರಾಷ್ಟ್ರಪತಿಗಳ ಅಂಕಿ ತವೂ ಬಿದ್ದಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‍ಸಿಎಫ್, ಎಡಪಕ್ಷಗಳು ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಜನರ ತೀವ್ರ ವಿರೋಧದ ನಡುವೆಯೇ ಹೊಸ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದೆ. ಗೃಹ ಸಚಿವ ಅಮಿತ್ ಷಾ, ಮಹತ್ವದ ಈ ಪೌರತ್ವ ತಿದ್ದುಪಡಿ ವಿಧೇಯಕವನ್ನು ಕಳೆದ ಸೋಮವಾರ ಲೋಕಸಭೆಯಲ್ಲಿ, ಬುಧವಾರ ರಾಜ್ಯ ಸಭೆಯಲ್ಲಿ ಮಂಡಿಸಿ ಎರಡೂ ಸದನಗಳ ಒಪ್ಪಿಗೆ ಪಡೆದಿದ್ದರು. ಇದೀಗ ಗುರುವಾರ ರಾತ್ರಿ…
ದೆಹಲಿಯಿಂದ ಬಂದ ನಂತರ ಸಂಪುಟ ವಿಸ್ತರಣೆ: ಬಿಎಸ್‍ವೈ
December 13, 2019ತುಮಕೂರು,ಡಿ.12-ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗಿ ಬಂದ ಮೇಲೆ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದು, ಎಂಟು ದಿನಗಳ ನಂತರ ಸಂಪುಟ ವಿಸ್ತರಣೆಯಾಗಲಿದೆ ಎಂದು ಗಡುವನ್ನೂ ನೀಡಿದ್ಧಾರೆ. ಕುಪ್ಪೂರು ಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಉಪ ಚುನಾ ವಣೆಯಲ್ಲಿ ಸೋತವರಿಗೆ ಅವಕಾಶ ನೀಡುವ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟ ಪಡಿಸಿದರು. ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಡಿಸೆಂಬರ್ 20ರ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ…
ಸರ್ಕಾರಿ ನೌಕರರ 4ನೇ ಶನಿವಾರ ರಜೆ ರದ್ದು
December 13, 2019ಸಂಪುಟ ಸಭೆ ನಿರ್ಧಾರ ಜ.20ರಿಂದ 10 ದಿನ ಅಧಿವೇಶನ ಬೆಂಗಳೂರು, ಡಿ.12-ಸರ್ಕಾರಿ ನೌಕರರ 4ನೇ ಶನಿವಾರದ ರಜೆಯನ್ನು ರದ್ದುಪಡಿ ಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಂಪುಟ ಸಭೆ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿ ಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು, ರಾಜ್ಯದ ಎಲ್ಲಾ ಕೋರ್ಟ್‍ಗಳಲ್ಲಿನ ಪ್ರಕರಣಗಳ ಸಮನ್ವಯ ಸಾಧಿಸಲು ಭಾಗಿಯಾಗುವ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ 4ನೇ ಶನಿವಾರದ ರಜೆ ರದ್ದುಪಡಿಸಲಾಗಿದ್ದು, ಅದಕ್ಕಾಗಿ 2019ರ ಜುಲೈ 13ರ…
ಕೇಂದ್ರ ಸರ್ಕಾರಿ ನೌಕರರ ಪ್ರವರ್ಗದಡಿ ಒಬ್ಬ ವ್ಯಕ್ತಿಗೇ ಮುಡಾದಿಂದ 3 ನಿವೇಶನ ಮಂಜೂರು!
December 13, 2019ಜೇಷ್ಠತೆ ಇಲ್ಲದೆ 20 ವರ್ಷಗಳಿಂದ ಅರ್ಜಿ ಸಲ್ಲಿಸಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಕಾಯುತ್ತಿರುವಾಗ ಒಬ್ಬನೇ ವ್ಯಕ್ತಿಗೆ ಬರೋಬ್ಬರಿ 3 ನಿವೇಶನ ಮಂಜೂರು ಮಾಡಿರುವ ಮುಡಾ ನಡೆಗೆ ನಾಗರಿಕರ ತೀವ್ರ ಆಕ್ರೋಶ = ಎಸ್.ಟಿ.ರವಿಕುಮಾರ್ ಮೈಸೂರು, ಡಿ.12- ಮೈಸೂರು ನಗರದಲ್ಲಿ ಮುಡಾದಿಂದ ಒಂದು ನಿವೇ ಶನಕ್ಕೂ ದುಸ್ಸಾಹಸ ಮಾಡಬೇಕಲ್ಲದೆ, ಕನಿಷ್ಠ 20ರಿಂದ 25 ವರ್ಷ ಕಾಯಬೇಕು. ಆದರೆ ಇಲ್ಲೊಬ್ಬ ಮಹಾಶಯರಿಗೆ ಒಂದಲ್ಲ, ಎರಡಲ್ಲಾ ಬರೋಬ್ಬರಿ 3 ನಿವೇಶನ ಗಳನ್ನು ಮುಡಾ ಮಂಜೂರು ಮಾಡಿದೆ. ಅಚ್ಚರಿ…
`ಅಚ್ಚ ಕನ್ನಡ’ದಲ್ಲೇ ಮಾತನಾಡುತ್ತಾ ಭಾಷೆ ಬೆಳೆಸಿರಿ: ಶ್ರವಣಬೆಳಗೊಳ ಶ್ರೀಗಳ ಕರೆ
December 13, 2019ಮೈಸೂರು, ಡಿ.12(ಎಸ್‍ಬಿಡಿ)- ಅಚ್ಚ ಕನ್ನಡದಲ್ಲಿಯೇ ಮಾತನಾಡುತ್ತಾ ಭಾಷೆ ಬೆಳೆಸಬೇಕು ಎಂದು ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಮೈಸೂರು ವಿವಿ, ಹಂಪಿ ಕನ್ನಡ ವಿವಿ, ನವದೆಹಲಿ ಸಾಹಿತ್ಯ ಅಕಾಡೆಮಿ ಹಾಗೂ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ, ಮೈಸೂರಿನ ಮಾನಸ ಗಂಗೋತ್ರಿ ಸೆನೆಟ್ ಭವನದಲ್ಲಿ ಏರ್ಪಡಿ ಸಿರುವ 2 ದಿನಗಳ `ಅಂತಾರಾಷ್ಟ್ರೀಯ ಪ್ರಾಕೃತ ಸಮಾವೇಶ’ದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ, ಅವರು ಮಾತನಾಡಿದರು. ಇಂಗ್ಲೀಷ್ ಪ್ರಭಾವದಿಂದ ಜನ ಕನ್ನಡ ಭಾಷೆಯನ್ನೇ ಮರೆತು…









