ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಶೇ.40 ರಿಯಾಯ್ತಿ ದರದ ಔಷಧಿ ವ್ಯಾಪಾರ ಮಳಿಗೆ
ಮೈಸೂರು

ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಶೇ.40 ರಿಯಾಯ್ತಿ ದರದ ಔಷಧಿ ವ್ಯಾಪಾರ ಮಳಿಗೆ

December 13, 2019

ಬೆಂಗಳೂರು, ಡಿ.12(ಕೆಎಂಶಿ)- ಗ್ರಾಮೀಣ ಭಾಗದಲ್ಲಿ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಶೇ.40ರಷ್ಟು ರಿಯಾ ಯಿತಿ ದರದಲ್ಲಿ ಔಷಧಿಗಳನ್ನು ಪೂರೈಸುವ ಔಷಧಿ ಅಂಗಡಿ ಗಳನ್ನು ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾರಂಭಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

ಜೆನರಿಕ್ ಔಷಧಿಗೂ, ಈ ಮಳಿಗೆಗಳಿಗೂ ಸಂಬಂಧ ವಿಲ್ಲ. ನೇರವಾಗಿ ಔಷಧಿ ಕಂಪನಿಗಳಿಂದ ಔಷಧಿ ಖರೀ ದಿಸಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಮೊದಲ ಹಂತದಲ್ಲಿ ಹೋಬಳಿ ಕೇಂದ್ರಗಳಲ್ಲೂ ನಂತರ ರಾಜ್ಯದ 6030 ಪಂಚಾಯಿತಿಗಳಲ್ಲೂ, ಮಳಿಗೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದೆ. ಪ್ರಾಯೋಗಿಕವಾಗಿ ಬೆಂಗ ಳೂರು ನಗರದ ಹೊರ ವಲಯದ ದೊಡ್ಡಜಾಲ ಪಂಚಾಯಿತಿ ಯಲ್ಲಿ ಮಳಿಗೆ ಆರಂಭಿಸಿದ್ದು, ಇಷ್ಟು ರಿಯಾಯಿತಿ ದರದಲ್ಲಿ ಔಷಧಿ ನೀಡಿದರೂ, ಮಾಸಿಕ 2 ಲಕ್ಷ ರೂ. ಲಾಭ ತರುತ್ತಿದೆ. ರಾಜ್ಯದ ಎಲ್ಲಾ ಪಂಚಾಯಿತಿಗಳು 80ರಿಂದ 1.50 ಲಕ್ಷ ರೂ.ವರೆಗೂ ವಾರ್ಷಿಕ ಆದಾಯ ಇದ್ದು, ಅವರ ಸಂಪ ನ್ಮೂಲದಲ್ಲೇ ಮಳಿಗೆಗಳನ್ನು ಆರಂಭಿಸುವುದು. ರಾಜ್ಯದ ಪ್ರತಿಷ್ಠಿತ ಔಷಧಿ ಕಂಪನಿಗಳಿಂದ ನೇರವಾಗಿ ಮಳಿಗೆಗಳಿಗೆ ಅಗತ್ಯ ಔಷಧಿ ತರಿಸಿ ಮಾರಾಟ ಮಾಡುವುದರಿಂದ ಗ್ರಾಮೀಣ ಜನತೆಗೆ ಅತ್ಯಂತ ಕಡಿಮೆ ಬೆಲೆಗೆ ಔಷಧಿಗಳು ಮನೆ ಬಾಗಿ ಲಿಗೆ ದೊರೆಯತ್ತಿದೆ. ಔಷಧ ಅಂಗಡಿಗಳು ಅತ್ಯಂತ ಹೆಚ್ಚು ಲಾಭವನ್ನಿಟ್ಟು ಕೊಂಡು ಔಷಧ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದು ಇದರಿಂದಾಗಿ ಜನಸಾಮಾನ್ಯರು ಕಷ್ಟಪಡುವ ಸ್ಥಿತಿ ಎದುರಾಗಿದೆ ಎಂಬುದು ಸರ್ಕಾರದ ಉನ್ನತ ಮೂಲ ಗಳ ಹೇಳಿಕೆ. ನೂರು ರೂಪಾಯಿಗೆ ಮಾರಾಟವಾಗುವ ಮಾತ್ರೆ, ಔಷಧಗಳ ಮೂಲ ಬೆಲೆ ಕೇವಲ 30ರಿಂದ 40 ರೂ. ಮಾತ್ರ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಶೇ.60ರಿಂದ 65ರಷ್ಟು ಪ್ರಮಾಣದ ಲಾಭವನ್ನು ಮಾರಾಟಗಾರರು ಪಡೆ ಯುತ್ತಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಡಯಾಬಿಟಿಸ್ ಖಾಯಿ ಲೆಗೆ ಮಾತ್ರೆ ತೆಗೆದುಕೊಳ್ಳಬೇಕು ಎಂದರೆ ಪ್ರತಿ ತಿಂಗಳು 700ರಿಂದ 800 ರೂಪಾಯಿ ವ್ಯಯಿಸಬೇಕು. ಆದರೆ ಮೂಲತಃ ಈ ಮಾತ್ರೆ, ಔಷಧದ ಬೆಲೆ 265ರಿಂದ 300 ರೂಪಾಯಿ ಮಾತ್ರ. ಜನರಿಗೆ ಆರೋಗ್ಯ, ಊಟ, ವಸತಿ, ಶಿಕ್ಷಣ ಕಡಿಮೆ ಬೆಲೆಯಲ್ಲಿ ದೊರೆಯಬೇಕಾದ ಅನಿವಾರ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದ ಮೇಲೆ ಮೊದಲು ನಿಯಂತ್ರಣ ಸಾಧಿಸಲು ಸರ್ಕಾರ ಮುಂದಾಗಿದೆ.

ಹೀಗೆ ಶೇ.40ರಷ್ಟು ರಿಯಾಯ್ತಿ ದರದಲ್ಲಿ ಔಷಧ, ಮಾತ್ರೆ ಪೂರೈಸಿದರೂ ಶೇ. 20ರಿಂದ 25ರಷ್ಟು ಪ್ರಮಾಣದಲ್ಲಿ ಲಾಭ ಬರುತ್ತದೆ. ಇದರಿಂದಾಗಿ ಮೂರು ಮಂದಿಗೆ ಉದ್ಯೋಗಾವಕಾಶ ನೀಡಲು ಸಾಧ್ಯವಾಗಲಿದೆ. ನಮ್ಮ ಮೆಡಿಕಲ್ ಸ್ಟೋರ್‍ಗೆ ಆರಂಭಿಕ ಹಂತದ ಬಂಡವಾಳವಾಗಿ 5 ಲಕ್ಷ ರೂಪಾಯಿ ಹೂಡಿದರೆ ಸಾಕು ಎಂಬ ಮಾಹಿತಿ ಪಡೆದಿರುವ ಅಧಿಕಾರಿಗಳ ತಂಡ ಇದೀಗ ಆ ಕುರಿತ ಪ್ರಸ್ತಾವವನ್ನು ಸರ್ಕಾರದ ಮುಂದಿಟ್ಟಿದೆ. ಆರಂಭಿಕ ಬಂಡವಾಳವನ್ನು ಸರ್ಕಾರ ಒದಗಿಸಿ ನಂತರ ಪಂಚಾಯಿತಿಗಳೇ ಔಷಧಿ ಮಳಿಗೆಗಳಿಗೆ ಹೆಚ್ಚಿನ ದಾಸ್ತಾನು ಒದಗಿಸಲು ತನ್ನ ಸಂಪನ್ಮೂಲ ಬಳಕೆ ಮಾಡಿಕೊಳ್ಳಬೇಕು. ಬರುವ ಲಾಭಾಂಶ ಪೂರ್ಣವಾಗಿ ಆ ಪಂಚಾಯಿತಿಗೆ ದೊರೆಯಲಿದೆ ಎಂದು ಇದೇ ಮೂಲಗಳು ತಿಳಿಸಿವೆ.

Translate »