3 ನಿವೇಶನ ಪಡೆದ ವ್ಯಕ್ತಿಗೆ ಮುಡಾ ನೋಟಿಸ್
ಮೈಸೂರು

3 ನಿವೇಶನ ಪಡೆದ ವ್ಯಕ್ತಿಗೆ ಮುಡಾ ನೋಟಿಸ್

December 14, 2019

ಮೈಸೂರು, ಡಿ.14(ಆರ್‍ಕೆ)- ವಾಸ್ತವಾಂಶ ಮರೆಮಾಚಿ ಕಾನೂನು ಬಾಹಿರವಾಗಿ 3 ನಿವೇಶನ ಪಡೆದಿರುವ ಎಂ.ಎನ್.ರಾಮಕೃಷ್ಣಗೆ ಮುಡಾ ವಿಶೇಷ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ.

ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗ `ಕರ್ನಾಟಕದ ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಾಗಲೀ ಅಥವಾ ಸಂಘ-ಸಂಸ್ಥೆಗಳಿಂದಾಗಲೀ ನಿವೇಶನ/ಮನೆಯನ್ನು ಪಡೆದುಕೊಂಡಿರುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಪಡೆದುಕೊಂಡಿರುವುದರಿಂದ ನಿವೇಶನ ಹಂಚಿಕೆ ನಿಯಮದಡಿ ಕಾನೂನು ಬಾಹಿರವಾಗಿದೆ ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ. ಪಡೆದುಕೊಂಡಿರುವ ನಿವೇಶನಗಳ ಮಂಜೂರಾತಿಯನ್ನು ಏಕೆ ರದ್ದುಗೊಳಿಸಬಾರದು ಹಾಗೂ ನಿಮ್ಮ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಬಗ್ಗೆ 7 ದಿನದೊಳಗಾಗಿ ಖುದ್ದು ಹಾಜರಾಗಿ ಸಮಜಾಯಿಷಿ ನೀಡಬೇಕೆಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.

Translate »