ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ
ಮೈಸೂರು

ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

December 13, 2019

ನವದೆಹಲಿ,ಡಿ.12- ಎನ್‍ಡಿಎ ಸರ್ಕಾರದ ಮಹತ್ವದ ಕ್ರಮಗಳಲ್ಲೊಂ ದಾದ `ಪೌರತ್ವ (ತಿದ್ದುಪಡಿ) ಮಸೂದೆ’ಗೆ ಗುರುವಾರ ರಾತ್ರಿ ರಾಷ್ಟ್ರಪತಿಗಳ ಅಂಕಿ ತವೂ ಬಿದ್ದಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‍ಸಿಎಫ್, ಎಡಪಕ್ಷಗಳು ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಜನರ ತೀವ್ರ ವಿರೋಧದ ನಡುವೆಯೇ ಹೊಸ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದೆ. ಗೃಹ ಸಚಿವ ಅಮಿತ್ ಷಾ, ಮಹತ್ವದ ಈ ಪೌರತ್ವ ತಿದ್ದುಪಡಿ ವಿಧೇಯಕವನ್ನು ಕಳೆದ ಸೋಮವಾರ ಲೋಕಸಭೆಯಲ್ಲಿ, ಬುಧವಾರ ರಾಜ್ಯ ಸಭೆಯಲ್ಲಿ ಮಂಡಿಸಿ ಎರಡೂ ಸದನಗಳ ಒಪ್ಪಿಗೆ ಪಡೆದಿದ್ದರು. ಇದೀಗ ಗುರುವಾರ ರಾತ್ರಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕುವುದರೊಂದಿಗೆ ತಿದ್ದುಪಡಿ ವಿಧೇಯಕವು ಮಸೂದೆ ಯಾಗಿ ಜಾರಿಗೆ ಬಂದಿದೆ.

ಕಳೆದ ಹಲವು ದಶಕಗಳಿಂದ ಭಾರತದ ವಿವಿಧೆಡೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿ ರುವ ಕೋಟ್ಯಾಂತರ ವಲಸೆಗಾರ ಕುಟುಂಬಗಳು ಈ ನೂತನ ಕಾಯ್ದೆ ಜಾರಿಯನ್ನು ಹರ್ಷದಿಂದ ಸ್ವಾಗತಿಸಿವೆ.

ಪೌರತ್ವ ತಿದ್ದುಪಡಿ ಕಾಯ್ದೆ ದಿಟ್ಟ ನಡೆ: ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‍ಎಸ್‍ಎಸ್) ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ)ಯು ಸಂಸತ್ತಿನ ಎರಡೂ ಸದನಗಳಲ್ಲಿ ಅಂಗೀಕಾರವಾಗಿ ದ್ದಕ್ಕೆ ಹರ್ಷ ವ್ಯಕ್ತಪಡಿಸಿದೆ. ಆರ್‍ಎಸ್‍ಎಸ್ ಪ್ರಧಾನ ಕಾರ್ಯದರ್ಶಿ ಭೈಯಾಜಿ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದು, “ಇದು ಧೈರ್ಯಶಾಲಿ ನಡೆ” ಎಂದು ಪ್ರಶಂಸಿಸಿದ್ದಾರೆ.ಸುದ್ದಿಗಾರರೊಡನೆ ಮಾತನಾಡಿ, ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾ ದೇಶಗಳಿಂದ ಭಾರತಕ್ಕೆ ಬರುವ ಶೋಷಿತ ಅಲ್ಪಸಂಖ್ಯಾತ ಸಮುದಾಯದವರಿಗೆ ಇಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡ ಬೇಕು ಎಂಬುದು ಆರ್‍ಎಸ್‍ಎಸ್ ನಿಲುವು ಎಂದಿದ್ದಾರೆ.

ಮೇಘಾಲಯ ಸಿಎಂ ದೆಹಲಿಗೆ: ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಈ ಮಧ್ಯೆ, ಪೌರತ್ವ ಮಸೂದೆಯಿಂದ ಮೇಘಾಲಯಕ್ಕೆ ವಿನಾಯಿತಿ ನೀಡಿ ಎಂದು ಮುಖ್ಯಮಂತ್ರಿ ಕಾರ್ನಾಡ್ ಸಂಗ್ಮಾ ಮತ್ತು ಸಂಪುಟ ಸಚಿವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ನವದೆಹಲಿಗೆ ತೆರಳಿದರು.

Translate »