ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ
ಮೈಸೂರು

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ

December 13, 2019

ಬೆಂಗಳೂರು,ಡಿ.12- ತೀವ್ರ ಹೃದಯ ಸಮಸ್ಯೆಯಿಂದಾಗಿ ಆಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ ಸಿದ್ದ ರಾಮಯ್ಯರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ಸಂಜೆ 7 ಗಂಟೆಗೆ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಸಿದ್ದರಾಮಯ್ಯರ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಈ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ರೊಂದಿಗೆ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.

ಕಾವೇರಿ ನಿವಾಸದಲ್ಲಿದ್ದ ಸಿದ್ದರಾಮಯ್ಯ ರಲ್ಲಿ ಬುಧವಾರ ಬೆಳಿಗ್ಗೆ 6.30ರ ಸಮಯ ದಲ್ಲಿ ಅಧಿಕ ರಕ್ತದೊತ್ತಡದ ಜತೆಗೆ ಎದೆ ನೋವು ಕಾಣಿಸಿಕೊಂಡಿತ್ತು. ಈ ಬೆನ್ನಲ್ಲೇ ಸಿದ್ದರಾಮ ಯ್ಯರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಲ್ಲೇಶ್ವರಂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಸುದ್ದಿ ಗಾರರೊಂದಿಗೆ ಮಾತನಾಡಿದ ಸಿದ್ದ ರಾಮಯ್ಯ, ಹೃದಯದ ಒಂದು ನಾಳ ಬ್ಲಾಕ್ ಆಗಿತ್ತು. ಅದಕ್ಕೆ ಸ್ಟಂಟ್ ಅಳವಡಿಸಿ ದ್ದಾರೆ. ಇದೀಗ ಆರೋಗ್ಯವಾಗಿದ್ದೇನೆ. ಯಾರೂ ಕೂಡ ಊಹಾಪೆÇೀಹಗಳಿಗೆ ಕಿವಿಗೊಡ ಬಾರದು. ಆಸ್ಪತ್ರೆ ಬಳಿ ಯಾರೂ ಬರು ವುದು ಬೇಡ. ಎರಡು ದಿನಗಳಾದ ಬಳಿಕ ಮನೆಗೆ ಬನ್ನಿ ಎಂದು ಮನವಿ ಮಾಡಿದರು. 2000 ಜುಲೈ ತಿಂಗಳಲ್ಲಿ ಎರಡು ರಕ್ತನಾಳ ಗಳು ಬ್ಲಾಕ್ ಆಗಿದ್ದವು. ದೆಹಲಿ ಎಸ್ಕಾರ್ಟ್ ಆಸ್ಪತ್ರೆಯಲ್ಲಿ ಸ್ಟಂಟ್ ಹಾಕಿಸಿದ್ದೆ. 19 ವರ್ಷ ಗಳಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಇದೀಗ ಆ ಸ್ಟಂಟ್ ಹಾಕಿದ್ದ ಎರಡು ನಾಳಗಳಲ್ಲಿ ಒಂದು ಬ್ಲಾಕ್ ಆಗಿತ್ತು. ಅಂಜಿಯೋ ಗ್ರಾಮ್ ಮಾಡಿ, ಬ್ಲಾಕ್ ಆಗಿದ್ದ ನಾಳದಲ್ಲಿ ಮತ್ತೊಂದು ಸ್ಟಂಟ್ ಹಾಕಿದ್ದಾರೆ ಅಷ್ಟೇ. ಅದು ಬಿಟ್ಟರೇ ಯಾವುದೇ ತೊಂದರೆ ಇಲ್ಲ. ನಾನು ಆರೋಗ್ಯವಾಗಿ ದ್ದೇನೆ. ಎರಡು ದಿನ ವಿಶ್ರಾಂತಿ ಪಡೆಯುವ ನಿಟ್ಟಿನಲ್ಲಿ ಇಲ್ಲೇ ಉಳಿಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದರು.

ನಿಮಗೂ ಹಾರ್ಟ್ ಇರೋದು ಗ್ಯಾರಂಟಿ ಆಯ್ತು; ಭೇಟಿ ವೇಳೆ ಸಚಿವ ಕೆ.ಎಸ್.ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲೆಳೆದಿದ್ಧಾರೆ. ‘ನಿಮಗೂ ಹಾರ್ಟ್ ಇರೋದು ಗ್ಯಾರಂಟಿ ಆಯ್ತು,’ ಎಂದು ಈಶ್ವರಪ್ಪ ನಗೆ ಚಟಾಕಿ ಹಾರಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಹಾರ್ಟ್ ಇಲ್ಲ ಎಂದು ಯಾವತ್ತಾದರೂ ಹೇಳಿದ್ದೀನಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಮತ್ತೆ ಕಾಲೆಳೆದ ಈಶ್ವರಪ್ಪ, `ಅಯ್ಯೋ ನಾನು ಯಾವತ್ತಾದ್ರೂ ಇಲ್ಲ ಅಂತ ಹೇಳಿದ್ದೀನಾ ಅಂತ ಹೇಳಿ ನಕ್ಕರು. ಇದಕ್ಕೆ ಪ್ರತಿಯಾಗಿ ಮತ್ತೆ ಕಾಲೆಳೆದ ಈಶ್ವರಪ್ಪ, ‘ಅಯ್ಯೋ ನಾನು ಯಾವತ್ತಾದ್ರೂ ಇಲ್ಲ ಅಂತ ಹೇಳಿದ್ದೀನಾ ಅಂತ ಹೇಳಿ ನಕ್ಕರು.

Translate »