ಬೆಂಬಲ ಬೆಲೆಯಡಿ ಭತ್ತ, ರಾಗಿ, ಜೋಳ ಖರೀದಿ
ಮೈಸೂರು

ಬೆಂಬಲ ಬೆಲೆಯಡಿ ಭತ್ತ, ರಾಗಿ, ಜೋಳ ಖರೀದಿ

December 13, 2019

ಬೆಂಗಳೂರು, ಡಿ.12(ಕೆಎಂಶಿ)- ಮಧ್ಯ ವರ್ತಿಗಳ ಹಾವಳಿಯಿಂದ ರೈತರನ್ನು ಪಾರು ಮಾಡಲು ಭತ್ತ, ರಾಗಿ ಹಾಗೂ ಜೋಳ ವನ್ನು ಬೆಂಬಲ ಬೆಲೆಯಡಿ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪು ಟದ ಉಪ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‍ಗೆ 1815 ರೂ., ಎ-ಗ್ರೇಡ್ ಭತ್ತಕ್ಕೆ 1835 ರೂ., ನಿಗದಿ ಮಾಡಿದೆ. ರಾಗಿ ಪ್ರತಿ ಕ್ವಿಂಟಾಲ್‍ಗೆ 3150 ರೂ. ದರದಲ್ಲಿ ಖರೀದಿ ಮಾಡಲು ತೀರ್ಮಾನಿಸಿದ್ದರೆ, ಬಿಳಿ ಜೋಳ ಪ್ರತಿ ಕ್ವಿಂಟಾಲ್‍ಗೆ 2550 ಹಾಗೂ 2570 ದರದಲ್ಲಿ ಖರೀದಿ ಮಾಡಲು ಸರ್ಕಾರ ನಿರ್ಧ ರಿಸಿದೆ. ಜನವರಿ 1ರಿಂದ ಸರ್ಕಾರ ಆರಂಭಿ ಸಲಿರುವ ಖರೀದಿ ಕೇಂದ್ರಗಳಲ್ಲಿ ರೈತರಿಂದ ಎಫ್‍ಎಕ್ವೂ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಲಾಗುವುದು ಎಂದು ಕೃಷಿ ಇಲಾಖೆ ಹೊಣೆ ಹೊತ್ತಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ ದ್ದಾರೆ. ಮಾರ್ಚ್ ಅಂತ್ಯದವರೆಗೂ ಅಂದರೆ 3 ತಿಂಗಳ ಕಾಲ ರೈತರು ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆಯ ದಿದ್ದರೆ, ಸರ್ಕಾರದ ಕೇಂದ್ರಗಳಲ್ಲಿ ತಮ್ಮ ದಾಸ್ತಾನು ಮಾರಾಟ ಮಾಡಿ, ಹಣ ಪಡೆ ಯಬಹುದಾಗಿದೆ. ಪ್ರತಿ ರೈತರಿಂದ 40 ಕ್ವಿಂಟಾಲ್ ಭತ್ತ, 75 ಕ್ವಿಂಟಾಲ್ ರಾಗಿ, ಜೋಳ ವನ್ನು ಖರೀದಿಸಲಾಗುವುದು. ಭತ್ತಕ್ಕೆ ಸಂಬಂ ಧಿಸಿದಂತೆ ಆಯಾ ಜಿಲ್ಲೆಗಳಲ್ಲಿ ಅಕ್ಕಿಯನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಂದ ಆಯ್ಕೆ ಮಾಡಿ,ಗುರುತಿಸುವ ಗಿರಣಿಗೆ ತಂತ್ರಾಂಶದ ಗುರುತಿನೊಂದಿಗೆ ಉತ್ಪನ್ನಗಳನ್ನು ತಂದು ಒದಗಿಸ ಬಹುದಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ, ರಾಜ್ಯ ಉಗ್ರಾಣ ನಿಗಮ ಹಾಗೂ ಸಹಕಾರ ಮಾರಾಟ ಮಹಾ ಮಂಡಳಿ ಇವರಿಗೆ ನಿಯೋಜಿತ ಜಿಲ್ಲೆಗಳಲ್ಲಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಸವದಿ ತಿಳಿಸಿದ್ದಾರೆ. ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯನ್ನು ರಚಿಸಿ, ಆ ಸಮಿತಿ ಮೂಲಕ ಸ್ಥಳೀಯ ಅಗತ್ಯತೆಗನುಗುಣವಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.

Translate »