`ಅಚ್ಚ ಕನ್ನಡ’ದಲ್ಲೇ ಮಾತನಾಡುತ್ತಾ ಭಾಷೆ ಬೆಳೆಸಿರಿ: ಶ್ರವಣಬೆಳಗೊಳ ಶ್ರೀಗಳ ಕರೆ
ಮೈಸೂರು

`ಅಚ್ಚ ಕನ್ನಡ’ದಲ್ಲೇ ಮಾತನಾಡುತ್ತಾ ಭಾಷೆ ಬೆಳೆಸಿರಿ: ಶ್ರವಣಬೆಳಗೊಳ ಶ್ರೀಗಳ ಕರೆ

December 13, 2019

ಮೈಸೂರು, ಡಿ.12(ಎಸ್‍ಬಿಡಿ)- ಅಚ್ಚ ಕನ್ನಡದಲ್ಲಿಯೇ ಮಾತನಾಡುತ್ತಾ ಭಾಷೆ ಬೆಳೆಸಬೇಕು ಎಂದು ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಮೈಸೂರು ವಿವಿ, ಹಂಪಿ ಕನ್ನಡ ವಿವಿ, ನವದೆಹಲಿ ಸಾಹಿತ್ಯ ಅಕಾಡೆಮಿ ಹಾಗೂ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ, ಮೈಸೂರಿನ ಮಾನಸ ಗಂಗೋತ್ರಿ ಸೆನೆಟ್ ಭವನದಲ್ಲಿ ಏರ್ಪಡಿ ಸಿರುವ 2 ದಿನಗಳ `ಅಂತಾರಾಷ್ಟ್ರೀಯ ಪ್ರಾಕೃತ ಸಮಾವೇಶ’ದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ, ಅವರು ಮಾತನಾಡಿದರು.

ಇಂಗ್ಲೀಷ್ ಪ್ರಭಾವದಿಂದ ಜನ ಕನ್ನಡ ಭಾಷೆಯನ್ನೇ ಮರೆತು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಪದಗಳಿ ಗಿಂತ ಇಂಗ್ಲಿಷ್ ಪದಗಳನ್ನೇ ಹೆಚ್ಚು ಬಳಸುತ್ತಿ ದ್ದಾರೆ. ಜರ್ಮನಿ ಸೇರಿದಂತೆ ಯೂರೋಪ್‍ನ ಹಲವು ರಾಷ್ಟ್ರಗಳ ಜನ ತಮ್ಮ ಭಾಷೆಯ ಬಗ್ಗೆ ಅಪಾರವಾದ ಅಭಿಮಾನ ಹೊಂದಿ ದ್ದಾರೆ. ಇಂಗ್ಲಿಷ್ ಇನ್ನಿತರೆ ಭಾಷೆ ತಿಳಿದಿದ್ದರೂ ಮಾತೃಭಾಷೆಯಲ್ಲೇ ಮಾತನಾಡುತ್ತಾರೆ. ಅಂತಹ ಭಾಷಾಭಿಮಾನವನ್ನು ಪ್ರತಿಯೊಬ್ಬ ಕನ್ನಡಿಗರೂ ಬೆಳೆಸಿಕೊಂಡು, ಭಾಷಾಭಿವೃದ್ಧಿಗೆ ಸಂಕಲ್ಪ ಮಾಡಬೇಕು. ಜೊತೆಗೆ ಪ್ರಾಚೀನ ಪಾಕೃತ ಮತ್ತು ಸಂಸ್ಕøತ ಭಾಷೆಯನ್ನೂ ಉಳಿಸಿ, ಬೆಳೆಸಬೇಕು ಎಂದು ನುಡಿದರು.

ಮೈಸೂರಲ್ಲಿ ಜ್ಞಾನ ದಾಸೋಹ: ಶರೀರದ ಬೆಳವಣಿಗೆಯೊಂದಿಗೆ ಜ್ಞಾನದ ವಿಕಾಸವೂ ಆಗಬೇಕು. ಈ ಮೂಲಕ ಪ್ರಪಂಚದ ಜೊತೆಗೆ ತಮ್ಮನ್ನು ತಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಸಮಾಜದಲ್ಲಿ ಅಜ್ಞಾನದ ಅಂಧಕಾರ ಮರೆಯಾಗಬೇಕು. ಈ ನಿಟ್ಟಿನಲ್ಲಿ ಮೈಸೂರು ವಿವಿ ಸೇರಿದಂತೆ ಅನೇಕ ವಿಶ್ವ ವಿದ್ಯಾ ನಿಲಯ, ಶಿಕ್ಷಣ ಸಂಸ್ಥೆಗಳಿರುವ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಜ್ಞಾನ ದಾಸೋಹ ನಡೆ ಯುತ್ತಿದೆ. ಮೈಸೂರು ಆಕ್ಸ್‍ಫರ್ಡ್ ಮಾದರಿ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಿಷ್ಣುತೆಯಿಂದ ಸುಧಾರಣೆ: ಇದಕ್ಕೂ ಮುನ್ನ ಸಮಾವೇಶ ಉದ್ಘಾಟಿಸಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತ ನಾಡಿ, ಜೈನ ಧರ್ಮ ಸಹಿಷ್ಣುತೆ ಹಾಗೂ ಅಹಿಂಸೆಗೆ ಮಹತ್ವ ನೀಡಿದೆ. ಇದನ್ನು ಧ್ಯೇಯವಾಗಿ ಅಳವಡಿಸಿಕೊಂಡರೆ ಜಗತ್ತಿನಲ್ಲಿ ಶಾಂತಿ ನೆಲೆಸಿ, ಸುಧಾರಣೆ ಆಗುತ್ತದೆ. ಶ್ರೀ ಚಾರುಕೀರ್ತಿ ಭಟ್ಟಾರಕರು ದೀಕ್ಷೆ ಪಡೆದು ಇಂದಿಗೆ ಸರಿಯಾಗಿ 50 ವರ್ಷವಾಯಿತು. ತಾವು ವಿದ್ಯಾಭ್ಯಾಸ ಮಾಡಿರುವ ಮೈಸೂರು ವಿವಿ ಆವರಣದಲ್ಲಿ ತಮ್ಮ ದೀಕ್ಷಾ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸುವ ಸದಾ ವಕಾಶ ನಮ್ಮೆಲ್ಲರಿಗೂ ದೊರಕಿದೆ. ಶ್ರೀಗಳು ಸ್ವ-ಅಧ್ಯಯನ, ಸ್ವ ಅನುಭವ ಹಾಗೂ ವಿದ್ವತ್ತಿನಿಂದ ಸಾಹಿತ್ಯ ಪ್ರಪಂಚ ವಿಸ್ತರಿಸಿ ದ್ದಾರೆ. 8-10 ವರ್ಷಗಳ ಪರಿಶ್ರಮದಿಂದ ದವಳ ಕೃತಿಯನ್ನು 40ಕ್ಕೂ ಹೆಚ್ಚು ಸಂಪುಟ ಗಳಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ರುವ ಶ್ರೀಗಳು, 4 ಬಾರಿ ಮಹಾಮಸ್ತ ಕಾಭಿಷೇಕವನ್ನು ಯಶಸ್ವಿಯಾಗಿ ನೆರ ವೇರಿಸಿಕೊಟ್ಟಿದ್ದಾರೆ ಎಂದು ಶ್ಲಾಘನೀಯ ನುಡಿಗಳನ್ನಾಡಿದರು.

ಕೃತಿಗಳ ಬಿಡುಗಡೆ: `ಯುಗಯಾತ್ರೀ ಶ್ರವಣ ಬೆಳಗೊಳ’, `ಪ್ರಾಕೃತ: ಕನ್ನಡ ಪರಂಪರೆ ಮತ್ತು ಪ್ರಭಾವ’, `ಪ್ರಾಕೃತದಲ್ಲಿ ಸಟ್ಟಕ ಸಾಹಿತ್ಯ: ಒಂದು ಪರಿಚಯ’, `ಶ್ರವಣ ಬೆಳ ಗೊಳ ಥ್ರೂ ದಿ ಏಜಸ್’ ಹಾಗೂ `ಧವಳ ಮನುಸ್ಕ್ರಿಪ್ಟ್ಸ್’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹಂಪಿ ಕನ್ನಡ ವಿಶ್ವ ವಿದ್ಯಾ ಲಯದ ಕುಲಪತಿ ಪೆÇ್ರ.ಸ.ಚಿ.ರಮೇಶ್, ಕನ್ನಡ ವಿವಿ 100ಕ್ಕೂ ಹೆಚ್ಚು ಜೈನ ಕೃತಿ ಗಳನ್ನು ಪ್ರಕಟಿಸಿದ್ದು, ಬಹುತೇಕ ಮರು ಮುದ್ರಣ ಕಂಡಿವೆ. ಶಾತವಾಹನರ ಕಾಲದಲ್ಲಿ ಜನರಭಾಷೆಯಾಗಿದ್ದು ಪ್ರಾಕೃತ, ಕದಂ ಬರ ಕಾಲದಲ್ಲಿ ಆಡಳಿತ ಭಾಷೆಯೂ ಆಗಿತ್ತು. ಸರ್ಕಾರ ಕನ್ನಡ ವಿವಿಗೆ `ಪ್ರಾಕೃತ ಅಧ್ಯಯನ ಕೇಂದ್ರ’ ನೀಡಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂದು ತಿಳಿಸಿದರು.

ಕನಕಗಿರಿಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು, ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಶಿವಪ್ಪ, ಕಾರ್ಯ ಕ್ರಮ ಸಂಯೋಜಕರಾದ ಡಾ. ಜಯ ಕುಮಾರ ಉಪಾಧ್ಯೆ, ಡಾ. ಹಂಪ ನಾಗ ರಾಜಯ್ಯ, ನವದೆಹಲಿಯ ಪೆÇ್ರ.ರಮಾ ಕಾಂತ ಶುಕ್ಲ, ಪ್ರೊ. ನೀಲಗಿರಿ ತಳವಾರ, ಪ್ರೊ.ಸಿ.ನಾಗಣ್ಣ ಮತ್ತಿತರರು ಉಪಸ್ಥಿತರಿದ್ದರು.

ಮಾನಸಗಂಗೋತ್ರಿ ಜೈನಾಲಜಿ ಮತ್ತು ಪ್ರಾಕೃತ ವಿಭಾಗದ ಸಭಾಂಗಣದಲ್ಲಿ ಡಿ.13 ರಂದು ಬೆಳಿಗ್ಗೆ 9ಕ್ಕೆ`ಪ್ರಾಕೃತ ಭಾಷೆ ಮತ್ತು ಸಾಹಿತ್ಯ’, ಮಧ್ಯಾಹ್ನ 12ಕ್ಕೆ `ಪ್ರಾಕೃತ-ಸಂಸ್ಕøತ ಸಾಹಿತ್ಯ: ಕೆಲವು ಚಿಂತನೆಗಳು’ ಮಧ್ಯಾಹ್ನ 3ಕ್ಕೆ `ಸಂಕೀರ್ಣ ಗೋಷ್ಠಿ’ ನಡೆಯ ಲಿದ್ದು, ಸಂಜೆ 5ಕ್ಕೆ ಸಮಾರೋಪಗೊಳ್ಳಲಿದೆ.

Translate »