ಮೈಸೂರು,ಡಿ.13(ಪಿಎಂ)-ಶಾಸಕ ಜಿ.ಟಿ.ದೇವೇಗೌಡರು ಸಮಯ ಸಾಧಕ ರಾಜಕಾರಣ ಮಾಡುತ್ತಿದ್ದು, ಹುಣಸೂರು ಉಪಚುನಾವಣೆಯಲ್ಲಿ ತಮ್ಮ ಜೆಡಿಎಸ್ ಪಕ್ಷಕ್ಕೂ ಕೆಲಸ ಮಾಡದೇ ಕಾಂಗ್ರೆಸ್ ಪರ ವಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹೇಮಂತ್‍ಕುಮಾರ್ ಗೌಡ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹುಣ ಸೂರಿನಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಜಿ.ಟಿ. ದೇವೇಗೌಡರು, ಇದೀಗ ಬಿಜೆಪಿ ಅಭ್ಯರ್ಥಿ ಸೋಲಿಗೆ…
ಕಲ್ಯಾಣಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ
December 14, 2019ಮೈಸೂರು,ಡಿ.13(ಎಂಕೆ)-ಮೈಸೂರಿನ ಕಲ್ಯಾಣಗಿರಿನಗರದಲ್ಲಿ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಶ್ರೀ ಕಲ್ಯಾಣ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದ ಸಮಿತಿ ವತಿಯಿಂದ ವಿಷ್ಣು ದೀಪೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಷ ದೀಪೋತ್ಸವ ಭಕ್ತಿ-ಭಾವದೊಂದಿಗೆ ಜರುಗಿತು. ದೇವರಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಬಣ್ಣ ಬಣ್ಣ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸುತ್ತಿದ್ದ ಭಕ್ತ ಸಮೂಹ ದೇವಸ್ಥಾನದ ಆವರಣ ಮತ್ತು ರಸ್ತೆಯ ಎರಡು ಬದಿಯಲ್ಲಿ ಜೋಡಿಸ ಲಾಗಿದ್ದ ಸಾವಿರಾರು ದೀಪಗಳನ್ನು ಬೆಳಗಿಸಿ…
ಸ್ವಾತಂತ್ರ್ಯ ಬಂದು 7 ದಶಕವಾದರೂ ಬಗೆಹರಿಯದ ವಸತಿ ಸಮಸ್ಯೆ
December 14, 2019ಮೈಸೂರು,ಡಿ.13(ಎಂಟಿವೈ)- ಕಟ್ಟಡ ಸಾಮಗ್ರಿಗಳ ಮೇಲಿನ ತೆರಿಗೆ ಹೆಚ್ಚಳದಿಂ ದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಮನೆ ನಿರ್ಮಿಸಿಕೊಳ್ಳಲು ಸಾಧ್ಯ ವಾಗದೇ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಕೆ. ಶ್ರೀರಾಮ್ ವಿಷಾದಿಸಿದ್ದಾರೆ. ಮೈಸೂರು ವಿಶ್ವೇಶ್ವರ ನಗರದ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ `ಎಲ್ಲರಿಗೂ ಸೂರು’ ಶೀರ್ಷಿಕೆಯಡಿ ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣ `ಬಿಲ್ಡ್‍ಟೆಕ್-2019’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯ…
ಖದೀಮನ ಸೆರೆ: 12.65 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನಗಳ ವಶ
December 14, 2019ಮೈಸೂರು,ಡಿ.13(ಆರ್‍ಕೆ)-ಕಳ್ಳ ನೋರ್ವನನ್ನು ಬಂಧಿಸಿರುವ ಮೇಟಗಳ್ಳಿ ಠಾಣೆ ಪೊಲೀಸರು, 12.65 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪಿರಿಯಾಪಟ್ಟಣ ತಾಲೂಕು, ಉತ್ತೇನ ಹಳ್ಳಿ ಗ್ರಾಮದ ಲೇಟ್ ಸುಂದರಮೂರ್ತಿ ಅವರ ಮಗ ಕೀರ್ತಿಕುಮಾರ್ ಅಲಿ ಯಾಸ್ ಕುಮಾರ್(24) ಬಂಧಿತ ಆರೋಪಿ. ಆತನಿಂದ 12.65 ಲಕ್ಷ ರೂ. ಬೆಲೆ ಬಾಳುವ ಒಟ್ಟು 16 ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರು ನಗರ, ಜಿಲ್ಲಾ ಗ್ರಾಮಾಂತರ ಹಾಗೂ ಬೆಂಗಳೂರು ನಗರಗಳಲ್ಲಿ ಕಳೆದ ಒಂದು ವರ್ಷದಿಂದ ಆತ ದ್ವಿಚಕ್ರ ವಾಹನಗಳನ್ನು ಕಳವು…
ಶ್ರವಣದೋಷ ಮಕ್ಕಳ ನೆರವಿಗಾಗಿ ಮೈಸೂರಿಗೆ ಬಂದ `ರಿಕ್ಷಾರನ್-2019’ ಯಾತ್ರೆ
December 14, 2019ಮೈಸೂರು,ಡಿ.13(ವೈಡಿಎಸ್)- ಶ್ರವಣ ದೋಷ ಸಮಸ್ಯೆಯುಳ್ಳ ಮಕ್ಕಳ ನೆರವಿ ಗಾಗಿ ಸೇವಾ ಯುಕೆ ಸಂಸ್ಥೆ ಹಮ್ಮಿ ಕೊಂಡಿರುವ `ರಿಕ್ಷಾ ರನ್-2019’ ಯಾತ್ರೆ ಗುರುವಾರ ಮೈಸೂರು ಆಗಮಿಸಿತು. ಗುರುವಾರ ಸಂಜೆ ಮೈಸೂರಿಗೆ ಆಗ ಮಿಸಿದ ದಿವ್ಯಾಂಗ ಜನಸಮುದಾಯಕ್ಕೆ ನೆರವಾಗುವಂತೆ ಅರಿವು ಮೂಡಿಸುವ `ರಿಕ್ಷಾ ರನ್’ ಯಾತ್ರೆ ಅನ್ನು ಮೈಸೂರು-ನಂಜನಗೂಡು ರಸ್ತೆಯ ಉತ್ತನಹಳ್ಳಿ ವೃತ್ತದ ಬಳಿ ವಾದ್ಯಮೇಳದೊಂದಿಗೆ ಶಾಸಕ ಎಸ್.ಎ.ರಾಮದಾಸ್ ಮತ್ತು ಮೇಯರ್ ಪುಷ್ಪಲತಾ ಜಗನ್ನಾಥ್ ಸ್ವಾಗತಿಸಿದರು. ನಂತರ 30 ಆಟೋರಿಕ್ಷಾಗಳಲ್ಲಿ ಆಗ ಮಿಸಿದ 22 ಮಂದಿ ಮಹಿಳೆಯರು ಸೇರಿ ದಂತೆ…
ಮೈಸೂರಿನ ಫಿಲೋಮಿನಾ ಚರ್ಚ್‍ನಲ್ಲಿ ಡಿ.21, 22ರಂದು ಕ್ರಿಸ್ಮಸ್ ಕಾರ್ನಿವಲ್ ಸಂಭ್ರಮ
December 14, 2019ಮೈಸೂರು, ಡಿ.13(ಪಿಎಂ)- ಕ್ರಿಸ್ಮಸ್ ಹಬ್ಬದ ಅಂಗವಾಗಿ ಹ್ಯೂಮನ್ ವಿಂಗ್ಸ್ ಫೌಂಡೇಷನ್ ವತಿಯಿಂದ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್‍ನಲ್ಲಿ ಇದೇ ಪ್ರಥಮ ಬಾರಿಗೆ ಡಿ.21 ಮತ್ತು 22ರಂದು ಕ್ರಿಸ್ಮಸ್ ಕಾರ್ನಿವಲ್ ಹಾಗೂ ವೆಸ್ಟರ್ನ್ ಕಾರ್ಲೋಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ವ್ಯವಸ್ಥಾಪಕ ರೆ.ಫಾ.ಸ್ಟ್ಯಾನೆ ಡಿ.ಅಲ್ಮೇಡಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ದಿನಗಳು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಚರ್ಚ್ ನಲ್ಲಿ ಈ ರೀತಿಯ…
ಮೈಸೂರಿನ ಏಕೈಕ `ನಿರಾಶ್ರಿತ ಮಹಿಳೆಯರ ಆಶ್ರಯ ತಾಣ’ಕ್ಕೆ ಬೀಗ!
December 14, 2019ಮೈಸೂರು, ಡಿ.13(ಎಂಟಿವೈ)- ಮೈಸೂರಿನ ದೇವರಾಜ ಮೊಹಲ್ಲಾದ ಬಿಡಾರಂ ಕೃಷ್ಣಪ್ಪ ರಸ್ತೆಯ ಗಾಡಿಚೌಕದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ನಗರ ಪಾಲಿಕೆ ಆರಂಭಿಸಿದ್ದ `ನಿರಾಶ್ರಿತ ಮಹಿಳೆಯರ ಆಶ್ರಯ ತಾಣ’ವನ್ನು ಈಗ ಶಾಶ್ವತವಾಗಿ ಮುಚ್ಚಲಾಗಿದೆ. ಒಂದೆಡೆ ನಿರಾಶ್ರಿತ ಮಹಿಳೆಯರ ಸಂಖ್ಯೆ ಇಳಿಮುಖವಾಗಿದ್ದುದು, ಇನ್ನೊಂದೆಡೆ ನಿರ್ವಹಣೆ ವೆಚ್ಚ ಹೆಚ್ಚಾಗಿದ್ದರಿಂದ ನಿರಾಶ್ರಿತ ಮಹಿಳೆಯರ ಆಶ್ರಯ ತಾಣಕ್ಕೆ ಬೀಗ ಹಾಕಲಾಗಿದೆ. ಪ್ರಸ್ತುತ ಇಲ್ಲಿದ್ದ ಇಬ್ಬರು ಮಹಿಳೆಯರನ್ನು ವಿಜಯನಗರ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳೆಯರ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಆ ಮೂಲಕ…
ಇಂದಿನಿಂದ ಸುತ್ತೂರಿನಲ್ಲಿ ಕೃಷಿ ಸಂಶೋಧನೆ, ಅಭಿವೃದ್ಧಿ ವಿಸ್ತರಣೆ ಕುರಿತ ಅಂತಾರಾಷ್ಟ್ರೀಯ ಸಮಾವೇಶ
December 14, 2019ಮೈಸೂರು,ಡಿ.13(ಪಿಎಂ)-ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ), ಬೆಂಗಳೂರಿನ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (ಐಸಿಎಆರ್-ಅಟಾರಿ), ಕೊಯಮ ತೂರಿನ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ಶಿಕ್ಷಣ ಸಂಘದ (ಇಇಎಸ್) ಸಂಯುಕ್ತಾಶ್ರಯದಲ್ಲಿ ಡಿ.14ರಿಂದ 16ರವರೆಗೆ `ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ವಿಸ್ತರಣೆ’ ಕುರಿತಂತೆ ಸುತ್ತೂರಿನಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿದೆ ಎಂದು ಕೆವಿಕೆ ಮುಖ್ಯಸ್ಥೆ ಡಾ.ಅರುಣ್‍ಬಾಲಮಟ್ಟಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುತ್ತೂರಿನ ಕೆವಿಕೆ ಭಾರತ ಸರ್ಕಾರದಿಂದ (ಐಸಿಎಆರ್) 1994ರಲ್ಲಿ ಮಂಜೂರಾಗಿದ್ದು, ಇದೀಗ…
ವಿಶೇಷಚೇತನರಿಗೆ ಅವರ ಅಗತ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿದರೆ ಪ್ರಜಾಪ್ರಭುತ್ವಕ್ಕೆ ಅರ್ಥ
December 14, 2019ಮೈಸೂರು, ಡಿ.13(ಪಿಎಂ)- ವಿಶೇಷಚೇತನರಿಗೆ ಅವರ ಅಗತ್ಯತೆಗಳನ್ನು ಸಮರ್ಪಕವಾಗಿ ಕಲ್ಪಿಸಿದರೆ ಮಾತ್ರ ಪ್ರಜಾಪ್ರಭುತ್ವ ನಿಜವಾಗಿಯೂ ಅರ್ಥಪೂರ್ಣ ವಾಗುತ್ತದೆ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಜೆ.ಮಮತಾ ಅಭಿಪ್ರಾಯಪಟ್ಟರು. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಜೆಎಸ್‍ಎಸ್ ಕಾಲೇಜ್ ಆಫ್ ಫಿಜಿ ಯೋಥೆರಪಿ ಮತ್ತು ಜೆಎಸ್‍ಎಸ್ ಫಿಜಿಕಲ್ ಮೆಡಿಷನ್ ಅಂಡ್ ರಿಯಾಬಿಲೇಟೆಷನ್ ಸೆಂಟರ್ (ಜೆಎಸ್‍ಎಸ್- ಪಿಎಂಆರ್‍ಸಿ) ವತಿಯಿಂದ ಶುಕ್ರವಾರ ಹಮ್ಮಿ ಕೊಂಡಿದ್ದ ವಿಶ್ವ ಅಂಗವಿಕಲರ ದಿನ ಹಾಗೂ ಜೆಎಸ್‍ಎಸ್-ಪಿಎಂಆರ್‍ಸಿ 2ನೇ ವಾರ್ಷಿಕೋತ್ಸವ…
ಹದಿಹರೆಯ ಸಮಸ್ಯಾಪೂರ್ಣ ವಯಸ್ಸು: ಪ್ರೊ. ಸೋಮಣ್ಣ
December 14, 2019ಮೈಸೂರು, ಡಿ.13(ಎಂಟಿವೈ)- `ಸಮಸ್ಯಾಪೂರ್ಣ ವಯಸ್ಸು’ ಎಂದು ಕರೆಯುವ ಹದಿಹರೆಯದಲ್ಲಿ ಎಚ್ಚರಿಕೆಯಿಂದ ಇರುವ ಅಗತ್ಯವಿದೆ ಎಂದು ಮನೋ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಸೋಮಣ್ಣ ಕಿವಿಮಾತು ಹೇಳಿದ್ದಾರೆ. ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪಿ.ಜಿ. ಬ್ಲಾಕ್‍ನಲ್ಲಿ ಜಿಲ್ಲಾ ಪಂಚಾ ಯಿತಿ, ಆಯುಷ್ ಇಲಾಖೆ ಹಾಗೂ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹಯೋಗ ದೊಂದಿಗೆ ಶುಕ್ರವಾರ ‘ಹದಿ ಹರೆಯದ ಸಮಸ್ಯೆಗಳ ನಿವಾರಣೆ ಮತ್ತು ಮನೋಲ್ಲಾಸದ ಮಾರ್ಗಗಳು’ ವಿಷಯದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಳೆತನ ಹಾಗೂ ಹಿರಿಯತನದ ನಡುವಿನ…










