ಮೈಸೂರಿನ ಫಿಲೋಮಿನಾ ಚರ್ಚ್‍ನಲ್ಲಿ ಡಿ.21, 22ರಂದು ಕ್ರಿಸ್ಮಸ್ ಕಾರ್ನಿವಲ್ ಸಂಭ್ರಮ
ಮೈಸೂರು

ಮೈಸೂರಿನ ಫಿಲೋಮಿನಾ ಚರ್ಚ್‍ನಲ್ಲಿ ಡಿ.21, 22ರಂದು ಕ್ರಿಸ್ಮಸ್ ಕಾರ್ನಿವಲ್ ಸಂಭ್ರಮ

December 14, 2019

ಮೈಸೂರು, ಡಿ.13(ಪಿಎಂ)- ಕ್ರಿಸ್ಮಸ್ ಹಬ್ಬದ ಅಂಗವಾಗಿ ಹ್ಯೂಮನ್ ವಿಂಗ್ಸ್ ಫೌಂಡೇಷನ್ ವತಿಯಿಂದ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್‍ನಲ್ಲಿ ಇದೇ ಪ್ರಥಮ ಬಾರಿಗೆ ಡಿ.21 ಮತ್ತು 22ರಂದು ಕ್ರಿಸ್ಮಸ್ ಕಾರ್ನಿವಲ್ ಹಾಗೂ ವೆಸ್ಟರ್ನ್ ಕಾರ್ಲೋಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ವ್ಯವಸ್ಥಾಪಕ ರೆ.ಫಾ.ಸ್ಟ್ಯಾನೆ ಡಿ.ಅಲ್ಮೇಡಾ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ದಿನಗಳು ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಚರ್ಚ್ ನಲ್ಲಿ ಈ ರೀತಿಯ ವರ್ಣರಂಜಿತ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಪ್ರಥಮ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‍ಗೆ ಭೇಟಿ ನೀಡುವವರಿಗೆ ಈ ಕಾರ್ಯಕ್ರಮ ಮತ್ತಷ್ಟು ಸಂಭ್ರಮ ನೀಡಲಿವೆ ಎಂದರು.

ಹಾಡು, ಕುಣಿತ, ಹಾಸ್ಯ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಪಾಶ್ಚಿಮಾತ್ಯ ಸಂಗೀತ ಮತ್ತು ಶಾಸ್ತ್ರೀಯ ಸಂಗೀತದ ಸುನಾದವೂ ಮೂಡಿಬರಲಿದೆ. ಅಲ್ಲದೆ, ಹೂವಿನ ಬೊಕ್ಕೆಯಿಂದ ಹಿಡಿದು ಬಾಯಲ್ಲಿ ನೀರೂರಿಸುವ ಖಾದ್ಯಗಳ ಮಾರಾಟ ಮಳಿಗೆ ತೆರೆಯಲಾಗುವುದು. ಜೊತೆಗೆ ಕೇಕ್ ಶಾಪ್, ಡ್ಯಾನ್ಸ್, ಗೇಮ್ಸ್, ಸ್ಕಿಟ್, ಸಂತರ ವೇಷಧಾ ರಣೆ ಸೇರಿದಂತೆ ಹತ್ತು ಹಲವು ಆಕರ್ಷಣೆಗಳು ಅಂದು ಚರ್ಚ್‍ನಲ್ಲಿ ಕಾಣಸಿಗಲಿವೆ. ಹಲವು ಕಲಾವಿದರ ತಂಡಗಳು ಸೇರಿದಂತೆ ವಿವಿಧ ಶಾಲಾ-ಕಾಲೇಜಿನ 20 ತಂಡಗಳು ಕ್ರಿಸ್ಮಸ್ ಗೀತೆಗಳನ್ನು ಪ್ರಸ್ತುತಪಡಿಸಲಿವೆ ಎಂದು ವಿವರಿಸಿದರು. ಹ್ಯೂಮನ್ ವಿಂಗ್ಸ್ ಫೌಂಡೇ ಷನ್ ಅಧ್ಯಕ್ಷೆ ಶಾಹೀನ ಮಾತನಾಡಿ, ಇದೇ ವೇಳೆ ಗ್ರೀನ್ ಇನಿಷಿಯೇಟಿವ್ ಸ್ಟಾಲ್ ಶೀರ್ಷಿಕೆಯಡಿ ಮಳಿಗೆ ತೆರೆಯಲಾಗುವುದು. ಚರ್ಚ್‍ಗೆ ಭೇಟಿ ನೀಡುವವರಿಗೆ ಅಡಿಗೆ ಮನೆಯಲ್ಲಿ ಉತ್ಪತ್ತಿಯಾಗುವ ನಿರುಪಯುಕ್ತ ಪದಾರ್ಥಗಳನ್ನು ಮರುಬಳಕೆ ಮಾಡುವ ವಿಧಾನ ಗಳನ್ನು ಇಲ್ಲಿ ತಿಳಿಸಿಕೊಡಲಾಗುವುದು ಎಂದರು. ಕಾರ್ಯಕ್ರಮದ ಸಂಯೋಜಕ ಆಂತೋಣಿ ಹೆಚ್.ವಿಲ್ಲಿ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »