ಸಹಕಾರ ಸಂಘಗಳ ಅಭಿವೃದ್ಧಿಯಿಂದ ರೈತರ ಪ್ರಗತಿ
ಮಂಡ್ಯ

ಸಹಕಾರ ಸಂಘಗಳ ಅಭಿವೃದ್ಧಿಯಿಂದ ರೈತರ ಪ್ರಗತಿ

December 14, 2019

ಕೆ.ಆರ್.ಪೇಟೆ,ಡಿ.13-ಸಹಕಾರ ಸಂಘಗಳು ಅಭಿವೃದ್ಧಿಯಾದರೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೇ ಅವುಗಳ ಅಭಿ ವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್ ತಿಳಿಸಿದರು.

ತಾಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸಂಘದ ಕಟ್ಟಡ ಹಾಗೂ ಗೋದಾಮುಗಳನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಸಹಕಾರ ಸಂಘಗಳ ಮೂಲಕ ರೈತರಿಗೆ ಅಗತ್ಯ ವಾದ ಶೂನ್ಯ ಬಡ್ಡಿ ದರದÀಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ರೈತರು ಸಹಕಾರ ಸಂಘಗಳ ಷೇರುದಾರರಾಗುವ ಮೂಲಕ ಇದರ ಸದುಪಯೋಗ ಪಡೆದು ಖಾಸಗಿ ಲೇವಾದೇವಿಗಾರರಿಂದ ದೂರ ವಿರಬೇಕು. ತಾವು ಪಡೆದ ಸಾಲವನ್ನು ಕೃಷಿ ಚಟುವಟಿಕೆಗೆ ಮಾತ್ರ ಬಳಸಬೇಕು. ಅಲ್ಲದೇ ಸರ್ಕಾರದÀ ಸಾಲ ಮನ್ನಾ ಯೋಜನೆ ಕಾಯದೇ ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಸಹಕಾರ ಸಂಘ ಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ಬಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ತಾಲೂಕು ಶಾಖೆ ವ್ಯವಸ್ಥಾಪಕ ರಾಜು, ಅಕ್ಕಿಹೆಬ್ಬಾಳು ಡಿಸಿಸಿ ವ್ಯವ ಸ್ಥಾಪಕ ಮಹೇಶ್, ಸಂಘದ ಉಪಾಧ್ಯಕ್ಷೆ ಲೀಲಾವತಿ, ನಿರ್ದೇಶಕ ರಾದ ಕೃಷ್ಣೇಗೌಡ, ಎ.ಜೆ.ಕುಮಾರ್, ಎಲ್.ಚಂದ್ರಪ್ಪ, ಎಸ್.ಆರ್. ನವೀನ್‍ಕುಮಾರ್, ಉದಯಕುಮಾರ್, ಅಣ್ಣಯ್ಯ, ಹೇಮಾವತಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಆದಿಲ್‍ಪಾಷಾ, ಸಂಘದ ಸಿಇಓ ಸತೀಶ್, ಜೈನ್ನಹಳ್ಳಿ ಸಂಘದ ಸಿಇಓ ನಾಗೇಗೌಡ, ಕಸಬಾ ಸಿಇಓ ಕಾಂತರಾಜು, ಸಂಘದ ಮಾರಾಟ ಗುಮಾಸ್ತ ಮಂಜು ನಾಥ್, ಶ್ರೀಧರ್, ಗ್ರಾಪಂ ಮಾಜಿ ಅಧ್ಯಕ್ಷ ಎ.ಎಸ್.ಕಿಟ್ಟು ಸೇರಿ ದಂತೆ ಅನೇಕ ಸಹಕಾರಿ ಧುರೀಣರು ಕಾರ್ಯಕ್ರಮದಲ್ಲಿದ್ದರು. ಈ ವೇಳೆ ಹಿರಿಯ ಸಹಕಾರಿ ಧುರೀಣರನ್ನು ಸನ್ಮಾನಿಸಲಾಯಿತು. ತಾಲೂಕಿನ ಹಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.

Translate »