ಶ್ರವಣದೋಷ ಮಕ್ಕಳ ನೆರವಿಗಾಗಿ ಮೈಸೂರಿಗೆ ಬಂದ `ರಿಕ್ಷಾರನ್-2019’ ಯಾತ್ರೆ
ಮೈಸೂರು

ಶ್ರವಣದೋಷ ಮಕ್ಕಳ ನೆರವಿಗಾಗಿ ಮೈಸೂರಿಗೆ ಬಂದ `ರಿಕ್ಷಾರನ್-2019’ ಯಾತ್ರೆ

December 14, 2019

ಮೈಸೂರು,ಡಿ.13(ವೈಡಿಎಸ್)- ಶ್ರವಣ ದೋಷ ಸಮಸ್ಯೆಯುಳ್ಳ ಮಕ್ಕಳ ನೆರವಿ ಗಾಗಿ ಸೇವಾ ಯುಕೆ ಸಂಸ್ಥೆ ಹಮ್ಮಿ ಕೊಂಡಿರುವ `ರಿಕ್ಷಾ ರನ್-2019’ ಯಾತ್ರೆ ಗುರುವಾರ ಮೈಸೂರು ಆಗಮಿಸಿತು.

ಗುರುವಾರ ಸಂಜೆ ಮೈಸೂರಿಗೆ ಆಗ ಮಿಸಿದ ದಿವ್ಯಾಂಗ ಜನಸಮುದಾಯಕ್ಕೆ ನೆರವಾಗುವಂತೆ ಅರಿವು ಮೂಡಿಸುವ `ರಿಕ್ಷಾ ರನ್’ ಯಾತ್ರೆ ಅನ್ನು ಮೈಸೂರು-ನಂಜನಗೂಡು ರಸ್ತೆಯ ಉತ್ತನಹಳ್ಳಿ ವೃತ್ತದ ಬಳಿ ವಾದ್ಯಮೇಳದೊಂದಿಗೆ ಶಾಸಕ ಎಸ್.ಎ.ರಾಮದಾಸ್ ಮತ್ತು ಮೇಯರ್ ಪುಷ್ಪಲತಾ ಜಗನ್ನಾಥ್ ಸ್ವಾಗತಿಸಿದರು.

ನಂತರ 30 ಆಟೋರಿಕ್ಷಾಗಳಲ್ಲಿ ಆಗ ಮಿಸಿದ 22 ಮಂದಿ ಮಹಿಳೆಯರು ಸೇರಿ ದಂತೆ 90 ಮಂದಿಗೆ ತಿಲಕವನ್ನಿಟ್ಟು, ಹೂವಿನ ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ನಂತರ ನಗರದ ವಿವಿಧ ಆಟೋ ಚಾಲ ಕರ ಸಂಘಟನೆಗಳ 66 ಆಟೋ ಹಾಗೂ `ರಿಕ್ಷಾ ರನ್’ ಯಾತ್ರೆಯ 30 ಆಟೋರಿಕ್ಷಾಗಳು ಅಲ್ಲಿಂದ ಮೆರವಣಿಗೆ ಹೊರಟು ಮೈಸೂರು ಅರಮನೆ ತಲುಪಿದವು. ನಂತರ `ರಿಕ್ಷಾರನ್’ ಯಾತ್ರೆಯ ಎಲ್ಲರೂ ಆರಮನೆಯ ಅಂದÀ ಸವಿದರು.

ಶ್ರವಣದೋಷದ 90 ಮಂದಿ 30 ಆಟೋರಿಕ್ಷಾಗಳಲ್ಲಿ ದೇಶದ 5 ರಾಜ್ಯಗಳಲ್ಲಿ 2,500 ಕಿ.ಮೀ. ಸಂಚರಿಸಿ ದಿವ್ಯಾಂಗ ಜನಸಮುದಾಯಕ್ಕೆ ನೆರವಾಗುವಂತೆ ಅರಿವು ಮೂಡಿಸುವ ಜೊತೆಗೆ ದೇಣಿಗೆ ಸಂಗ್ರಹಿಸಲಿದ್ದಾರೆ. 73 ಮಂದಿ ಯುಕೆ, 12 ಮಂದಿ ಆಸ್ಟ್ರೇಲಿಯಾ, ಮೂವರು ಯುಎಸ್‍ಎ ಹಾಗೂ ಇಬ್ಬರು ಕೀನ್ಯಾದವರಾಗಿದ್ದು, ಇವರಲ್ಲಿ ಅನಿವಾಸಿ ಭಾರತೀಯರೂ ಇದ್ದಾರೆ.

ಡಿ.10ರಂದು ಕನ್ಯಾಕುಮಾರಿಯಿಂದ ಹೊರಟ ರಿಕ್ಷಾರನ್ ಯಾತ್ರೆಯೂ ಕೊಯ ಮತ್ತೂರು ಮಾರ್ಗವಾಗಿ ಸಂಚರಿಸಿ ಗುರು ವಾರ ಮೈಸೂರು ತಲುಪಿತು. ನಾಳೆ(ಡಿ.13) ಬೆಳಿಗ್ಗೆ ಮೈಸೂರಿನಿಂದ ಹೊರಟು ಶಿವ ಮೊಗ್ಗ ತಲುಪಲಿದೆ. 14ರಂದು ಹುಬ್ಬಳ್ಳಿಗೆ ತೆರಳಲಿದ್ದು, ಡಿ.21ರಂದು ಗುಜರಾತಿನ ಅಹಮದಾಬಾದ್ ನಗರದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.

ಇದೇ ವೇಳೆ ಶಾಸಕ ಎಸ್.ಎ.ರಾಮ ದಾಸ್ ಮಾತನಾಡಿ, ಶ್ರವಣದೋಷವುಳ್ಳ ಮಕ್ಕಳ ಕ್ಷೇಮಾಭಿವೃದ್ಧಿ ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂಬ ಉದ್ಧೇಶ ದಿಂದ ಸೇವಾ ಯುಕೆ ಸಂಸ್ಥೆಯಡಿ `ರಿಕಾ ್ಷರನ್’ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ನಗರಪೊಲೀಸ್ ಆಯುಕ್ತ ಕೆ.ಟಿಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Translate »