ವಿಶೇಷಚೇತನರಿಗೆ ಅವರ ಅಗತ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿದರೆ ಪ್ರಜಾಪ್ರಭುತ್ವಕ್ಕೆ ಅರ್ಥ
ಮೈಸೂರು

ವಿಶೇಷಚೇತನರಿಗೆ ಅವರ ಅಗತ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿದರೆ ಪ್ರಜಾಪ್ರಭುತ್ವಕ್ಕೆ ಅರ್ಥ

December 14, 2019

ಮೈಸೂರು, ಡಿ.13(ಪಿಎಂ)- ವಿಶೇಷಚೇತನರಿಗೆ ಅವರ ಅಗತ್ಯತೆಗಳನ್ನು ಸಮರ್ಪಕವಾಗಿ ಕಲ್ಪಿಸಿದರೆ ಮಾತ್ರ ಪ್ರಜಾಪ್ರಭುತ್ವ ನಿಜವಾಗಿಯೂ ಅರ್ಥಪೂರ್ಣ ವಾಗುತ್ತದೆ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಡಿ.ಜೆ.ಮಮತಾ ಅಭಿಪ್ರಾಯಪಟ್ಟರು.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಜೆಎಸ್‍ಎಸ್ ಕಾಲೇಜ್ ಆಫ್ ಫಿಜಿ ಯೋಥೆರಪಿ ಮತ್ತು ಜೆಎಸ್‍ಎಸ್ ಫಿಜಿಕಲ್ ಮೆಡಿಷನ್ ಅಂಡ್ ರಿಯಾಬಿಲೇಟೆಷನ್ ಸೆಂಟರ್ (ಜೆಎಸ್‍ಎಸ್- ಪಿಎಂಆರ್‍ಸಿ) ವತಿಯಿಂದ ಶುಕ್ರವಾರ ಹಮ್ಮಿ ಕೊಂಡಿದ್ದ ವಿಶ್ವ ಅಂಗವಿಕಲರ ದಿನ ಹಾಗೂ ಜೆಎಸ್‍ಎಸ್-ಪಿಎಂಆರ್‍ಸಿ 2ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷಚೇತನರ ಮೊಗದಲ್ಲಿ ನಗುವನ್ನು ಕಾಣು ವುದು ಸಮಾಜದ ಉದ್ದೇಶವಾಗಬೇಕು. ವಿಶೇಷ ಚೇತನರು ಈ ದಿನವನ್ನು ಸಂಭ್ರಮಿಸುವುದು ಒಂದೆಡೆ ಯಾದರೆ ಅವರ ಅಗತ್ಯತೆ, ಬೇಕು-ಬೇಡಗಳನ್ನು ಮುಕ್ತ ವಾಗಿ ಚರ್ಚಿಸುವ ದಿನ ಎಂದೇ ಹೇಳಬಹುದು. ಸರ್ಕಾರವು ವಿಶೇಷ ಚೇತನರ ಕಲ್ಯಾಣಕ್ಕೆ ಸಾಕಷ್ಟು ಸೌಲಭ್ಯ ಕಲ್ಪಿಸುತ್ತಿದ್ದು, ಅದನ್ನು ಸದುಪಯೋಗಪಡಿಸಿ ಕೊಳ್ಳಬೇಕು. ವಿಶೇಷಚೇತನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದೆ ಎಂದು ತಿಳಿಸಿದರು. ಜೆಎಸ್‍ಎಸ್ ಸಂಸ್ಥೆ ಸಾಮಾಜಿಕ ಕಾರ್ಯಗಳನ್ನು ವಿಶೇಷವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರುತ್ತಿದೆ. ವಿಶೇಷಚೇತನರನ್ನು ಮುಖ್ಯವಾಹಿನಿಗೆ ತರುವಲ್ಲಿಯೂ ಮುಖ್ಯ ಪಾತ್ರವಹಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್‍ಮಠ್ ಮಾತನಾಡಿ, ವಿಶೇಷಚೇತನರು ಸ್ವತಂತ್ರವಾಗಿ ಬದುಕಲು ಜೆಎಸ್‍ಎಸ್-ಪಿಎಂಆರ್‍ಸಿ ಸಾಕಷ್ಟು ಅವಕಾಶ ಗಳನ್ನು ನೀಡುತ್ತಿದೆ. ಕೇಂದ್ರ ಎರಡು ವರ್ಷದ ಅವಧಿಯಲ್ಲಿ 274ಕ್ಕೂ ಹೆಚ್ಚು ಮಂದಿಗೆ ಯಶಸ್ವಿ ಚಿಕಿತ್ಸೆ ನೀಡಿದೆ. ವಿಶೇಷಚೇತನರು ಸ್ವತಂತ್ರವಾಗಿ ಬದುಕಲು ಸಮಾಜ ಅವರಿಗೆ ಆತ್ಮವಿಶ್ವಾಸ ತುಂಬಬೇಕು. ಅವರಿಗೆ ಎದುರಾಗುವ ಅಡೆತಡೆಗಳನ್ನು ನಿವಾರಿಸಿ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದರು.

ಜೆಎಸ್‍ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಜೆಎಸ್‍ಎಸ್ ಕಾಲೇಜ್ ಆಫ್ ಫಿಜಿಯೋಥೆರಪಿ ಪ್ರಾಂಶುಪಾಲರು ಹಾಗೂ ಜೆಎಸ್‍ಎಸ್-ಪಿಎಂಆರ್‍ಸಿ ಉಪನಿರ್ದೇಶಕಿ ಡಾ.ಕವಿತಾರಾಜಾ ಸೇರಿದಂತೆ ವಿಶೇಷಚೇತನರು ಹಾಗೂ ಅವರ ಪೋಷಕರು ಮತ್ತಿತರರು ಹಾಜರಿದ್ದರು.

Translate »