ಸ್ವಾತಂತ್ರ್ಯ ಬಂದು 7 ದಶಕವಾದರೂ ಬಗೆಹರಿಯದ ವಸತಿ ಸಮಸ್ಯೆ
ಮೈಸೂರು

ಸ್ವಾತಂತ್ರ್ಯ ಬಂದು 7 ದಶಕವಾದರೂ ಬಗೆಹರಿಯದ ವಸತಿ ಸಮಸ್ಯೆ

December 14, 2019

ಮೈಸೂರು,ಡಿ.13(ಎಂಟಿವೈ)- ಕಟ್ಟಡ ಸಾಮಗ್ರಿಗಳ ಮೇಲಿನ ತೆರಿಗೆ ಹೆಚ್ಚಳದಿಂ ದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಮನೆ ನಿರ್ಮಿಸಿಕೊಳ್ಳಲು ಸಾಧ್ಯ ವಾಗದೇ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷ ಕೆ. ಶ್ರೀರಾಮ್ ವಿಷಾದಿಸಿದ್ದಾರೆ.

ಮೈಸೂರು ವಿಶ್ವೇಶ್ವರ ನಗರದ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕ `ಎಲ್ಲರಿಗೂ ಸೂರು’ ಶೀರ್ಷಿಕೆಯಡಿ ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣ `ಬಿಲ್ಡ್‍ಟೆಕ್-2019’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸ್ವಾತಂತ್ರ್ಯ ನಂತರದಿಂದ ಇಂದಿನವರೆಗೂ ವಸತಿ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿದೆ. ಅಧಿಕಾರ ನಡೆಸಿದ ಸರ್ಕಾರಗಳು ವಸತಿ ಸಮಸ್ಯೆ ಹೋಗಲಾಡಿ ಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಪಂಚ ವಾರ್ಷಿಕ ಯೋಜನೆಯಲ್ಲೂ ವಸತಿ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳದೇ ಇರುವು ದರಿಂದ ವರ್ಷದಿಂದ ವರ್ಷಕ್ಕೆ ದೇಶದಲ್ಲಿ ವಸತಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣ ವಾಗಿದೆ ಎಂದು ಆರೋಪಿಸಿದರು

ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣದ ಪ್ರಭಾವವೂ ವಸತಿ ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ. ಇದು ಹೀಗೇ ಮುಂದುವರಿ ದರೆ ವಸತಿ ಬಹುದೊಡ್ಡ ಸಮಸ್ಯೆಯಾಗಿ ದೇಶವನ್ನು ಕಾಡಲಿದೆ. ವಸತಿರಹಿತರಿಗೆ ಸೂರು ಕಲ್ಪಿಸುವ ಹೊಣೆ ಕೇಂದ್ರ ಸರ್ಕಾರದ್ದೋ ಅಥವಾ ರಾಜ್ಯದ್ದೋ ಎಂಬ ಜಿಜ್ಞಾಸೆ ಇದೆ. ಇದರಿಂದ ಸ್ವಂತಕ್ಕೊಂದು ಸೂರು ಇಲ್ಲದ ವರ ಸಮಸ್ಯೆಯನ್ನು ಕೇಳುವವರೇ ಇಲ್ಲದಂ ತಾಗಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ದತ್ತ ಬೊಟ್ಟು ಮಾಡುತ್ತಿದೆ. ಗೃಹ ನಿರ್ಮಾಣ ಮಂಡಳಿ ಒಂದು ರೀತಿ ತಂದೆಯಿಲ್ಲದ ಕೂಸಿನಂತಾಗಿದೆ ಎಂದು ವಿಷಾದಿಸಿದರು.

ವಿಚಾರ ಸಂಕಿರಣ ಉದ್ಘಾಟಿಸಿದ ಜಿಲ್ಲಾ ಧಿಕಾರಿ ಅಭಿರಾಂ ಜಿ.ಶಂಕರ್ ಮಾತನಾಡಿ, ಮನೆ ನಿರ್ಮಿಸಿಕೊಳ್ಳುವುದು ಪ್ರತಿಯೊಬ್ಬರ ಸ್ವಾಭಿಮಾನದ ಸಂಕೇತವಾಗಿದೆ. ಜೀವನ ವಿಡೀ ಸಂಪಾದಿಸಿದ ಹಣವನ್ನು ಮನೆ ಕಟ್ಟಲು ವಿನಿಯೋಗಿಸುತ್ತಾರೆ. ಜನರು ಯಾರು ಎಷ್ಟು ದೊಡ್ಡ ಮನೆ ನಿರ್ಮಾಣ ಮಾಡಿದ್ದಾರೆ ಎನ್ನು ವುದನ್ನು ಗಮನಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮನೆ ನಿರ್ಮಿಸಿಕೊಳ್ಳುವುದು ವ್ಯಕ್ತಿಯ ಜೀವನ ಮಟ್ಟ ಮತ್ತು ಸ್ವಾಭಿಮಾನದ ಬದುಕನ್ನು ನಿಧರ್Àರಿಸುತ್ತದೆ ಎಂದು ನುಡಿದರು.

ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಬಹುಪಾಲು ವಸತಿ ಯೋಜನೆಗಳು ನಗರ ಪ್ರದೇಶಕ್ಕೇ ಸೀಮಿತವಾಗಿದ್ದವು. ಆದರೆ ಕ್ರಮೇಣ ಗ್ರಾಮೀಣ ಪ್ರದೇಶಗಳ ವಸತಿ ರಹಿತ ಜನರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇದರಿಂದ ಸೂರು ಕಲ್ಪಿಸುವುದು ಎಷ್ಟು ಮಹತ್ವ ಎನ್ನುವುದು ತಿಳಿಯಲಿದೆ. ಮನೆ ನಿರ್ಮಿಸಿ ಕೊಡುವವರು ಮತ್ತು ನಿರ್ಮಿಸಿಕೊಳ್ಳುವ ವರೂ ಪರಿಸರಕ್ಕೆ ಪೂರಕವಾಗಿ ಕೆಲಸ ಮಾಡ ಬೇಕು. ಹಸಿರು ಮನೆ ನಿರ್ಮಾಣ, ಮಳೆ ನೀರು ಕೊಯ್ಲು, ಸೌರಶಕ್ತಿ ಬಳಕೆ ಸೇರಿ ದಂತೆ ವಸತಿ ಸಂಕೀರ್ಣದಂತಹ ಪ್ರದೇಶ ಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ತೆರೆದು ಪರಿಸರ ಮಾಲಿನ್ಯಕ್ಕೆ ತಡೆ ಹಾಕ ಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಲ್ಡರ್ಸ್ ಅಸೋಸಿ ಯೇಷನ್ ರಾಜ್ಯಾಧ್ಯಕ್ಷ ಅಂಬಿಕಾಪತಿ, ಇಂಡಿಯಾ ಹೌಸಿಂಗ್ ಫೆÉಡರೇಷನ್‍ನ ಸಿಇಒ ಮಣಿಕಂದನ್, ಬಿಎಐ ಮೈಸೂರು ಘಟಕದ ಅಧ್ಯಕ್ಷ ಬಿ.ಎಸ್.ದಿನೇಶ್, ಕಾರ್ಯದರ್ಶಿ ಆರ್.ರಘುನಾಥ್, `ಬಿಲ್ಡ್ ಟೆಕ್-2019’ರ ಅಧ್ಯಕ್ಷ ಎಸ್.ಹೆಚ್. ಶ್ರೀನಿವಾಸ್, ಕಾರ್ಯದರ್ಶಿ ವೆಂಕಟೇಶ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು

Translate »