ಕಲ್ಯಾಣಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ
ಮೈಸೂರು

ಕಲ್ಯಾಣಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

December 14, 2019

ಮೈಸೂರು,ಡಿ.13(ಎಂಕೆ)-ಮೈಸೂರಿನ ಕಲ್ಯಾಣಗಿರಿನಗರದಲ್ಲಿ ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.

ಶ್ರೀ ಕಲ್ಯಾಣ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದ ಸಮಿತಿ ವತಿಯಿಂದ ವಿಷ್ಣು ದೀಪೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಷ ದೀಪೋತ್ಸವ ಭಕ್ತಿ-ಭಾವದೊಂದಿಗೆ ಜರುಗಿತು.

ದೇವರಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಬಣ್ಣ ಬಣ್ಣ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸುತ್ತಿದ್ದ ಭಕ್ತ ಸಮೂಹ ದೇವಸ್ಥಾನದ ಆವರಣ ಮತ್ತು ರಸ್ತೆಯ ಎರಡು ಬದಿಯಲ್ಲಿ ಜೋಡಿಸ ಲಾಗಿದ್ದ ಸಾವಿರಾರು ದೀಪಗಳನ್ನು ಬೆಳಗಿಸಿ ಸಂಭ್ರಮಿಸಿದರು. ಜತೆಗೆ ವೆಂಕಟೇಶ್ವರನಿಗೆ ಜಯ ಘೋಷಣೆಗಳನ್ನು ಕೂಗುತ್ತಾ ಭಕ್ತಿಯಲ್ಲಿ ಮಿಂದೆದ್ದರು. ಕಲ್ಯಾಣಗಿರಿನಗರದ ಸುತ್ತಮುತ್ತಲಿನ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಲಕ್ಷ್ಮಿವೆಂಕಟ ರಮಣನ ದರ್ಶನ ಪಡೆದು, ಕೃಪೆಗೆ ಪಾತ್ರರಾದರು. ಇದೇ ವೇಳೆ ಹೆಚ್.ಬಿ.ಸುಬ್ಬರಾವ್ ಹಾಗೂ ದಾನೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದಲ್ಲಿ ಜಿಪಂ ಸಿಇಓ ಜ್ಯೋತಿ, ಶ್ರೀ ಕಲ್ಯಾಣ ಲಕ್ಷ್ಮಿವೆಂಕಟರಮಣ ಸ್ವಾಮಿ ದೇವಸ್ಥಾನದ ಸಮಿತಿ ಸ್ಥಾಪಕ ಹೆಚ್.ಜಿ.ಗಿರಿಧರ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಪಿ.ವಿಜಯ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Translate »