ಮೈಸೂರಿನ ವರ್ತಕರು, ವಿದ್ಯಾರ್ಥಿಗಳಿಗೆ ಡಿ.ಬನುಮಯ್ಯ ಆದರ್ಶವಾಗಲಿ
ಮೈಸೂರು

ಮೈಸೂರಿನ ವರ್ತಕರು, ವಿದ್ಯಾರ್ಥಿಗಳಿಗೆ ಡಿ.ಬನುಮಯ್ಯ ಆದರ್ಶವಾಗಲಿ

December 12, 2019

ಮೈಸೂರು,ಡಿ.11(ಎಂಟಿವೈ)- ಮೈಸೂ ರಿನ ವರ್ತಕರು ಪಾರದರ್ಶಕವಾಗಿದ್ದು, ಇಲ್ಲಿರುವಂತಹ ವರ್ತಕರನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಧರ್ಮಪ್ರಕಾಶ ಡಿ.ಬನುಮಯ್ಯ ಅವರ ಆದರ್ಶವನ್ನೇ ಪಾಲಿಸುತ್ತಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಪ್ರಶಂಸಿಸಿದ್ದಾರೆ.

ಮೈಸೂರಿನ ಡಿ.ಬನುಮಯ್ಯ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಮಾರಂಭ ದಲ್ಲಿ ಮಾತನಾಡಿದ ಅವರು, ಎಪಿಎಂಸಿ ಯಲ್ಲಿ ಒಡನಾಟ ಇಟ್ಟುಕೊಂಡು ಬಂದಿ ರುವ ನನಗೆ ಮೈಸೂರಿನ ವರ್ತಕರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ವ್ಯಾಪಾರಿ ಯಾಗಿದ್ದ ಡಿ.ಬನುಮಯ್ಯ ಅವರ ಆದರ್ಶ ವನ್ನೇ ಈಗಿನ ವರ್ತಕರು ಅನುಸರಿಸುತ್ತಾ ಪಾರದರ್ಶಕವಾಗಿ ವ್ಯವಹರಿಸುತ್ತಿದ್ದಾರೆ ಎಂದು ಬಣ್ಣಿಸಿದರು.

100 ವರ್ಷಗಳ ಕಾಲ ಈ ಶಿಕ್ಷಣ ಸಂಸ್ಥೆ ಯನ್ನು ಮುನ್ನಡೆಸಿಕೊಂಡು ಬಂದು ಆದರ್ಶ ಸಂಸ್ಥೆಯಾಗಿ ರೂಪುಗೊಳಿಸಲಾ ಗಿದೆ. ಉಚ್ಛ ನ್ಯಾಯಾಲಯ ನ್ಯಾಯ ಮೂರ್ತಿಗಳಾಗಿದ್ದ ವೆಂಕಟರಾಮಯ್ಯ ಅವರು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದಿ ದ್ದಾರೆ. ಅಲ್ಲದೆ ಹೆಸರಾಂತ ವ್ಯಕ್ತಿ ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ. ಜಯಚಾಮರಾಜೇಂದ್ರ ಒಡೆಯರ್ ಅವರು ಡಿ.ಬನುಮಯ್ಯ ಅವರ ಸೇವೆ ಯನ್ನು ಶ್ಲಾಘಿಸಿದ್ದಾರೆ. ಮಹಾತ್ಮ ಗಾಂಧೀಜಿ ಮೈಸೂರಿಗೆ ಬಂದಿದ್ದಾಗ ಈ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆ ಯಲ್ಲಿ ಶಿಕ್ಷಣ ಪಡೆಯುತ್ತಿರುವ ನೀವು ಧನ್ಯರು. ಡಿ.ಬನುಮಯ್ಯ ಅವರ ಆದರ್ಶ ವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳ ಬೇಕು, ಅವರ ಬಗ್ಗೆ ತಿಳಿದುಕೊಳ್ಳಬೇಕು. ಆ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಮುಂದೆ ಗುರಿ, ಹಿಂದೆ ಗುರು ಇಟ್ಟುಕೊಂಡು ಏಳಿಗೆ ಕಾಣಬೇಕು. ದೊಡ್ಡ ಸಾಧನೆ ಮಾಡಿ ಸೈ ಎನಿಸಿಕೊಳ್ಳಬೇಕು ಎಂದು ಉತ್ತೇಜಿಸಿದರು. ಸರಳವಾದ ಜೀವನದೊಂದಿಗೆ ಉತ್ತಮ ನಾಯಕರಾಗಿ ಹೊರ ಹೊಮ್ಮು ವಂತೆ ತಿಳಿ ಹೇಳಿದ ಜಿಟಿಡಿ, ಪ್ರಸ್ತುತ ಸಂದರ್ಭದಲ್ಲಿ ಸಂಪಾದಿಸಿದ ಆಸ್ತಿಯನ್ನೆಲ್ಲಾ ಕುಟುಂಬದ ಸದಸ್ಯರ ಹೆಸರಿಗೆ ವರ್ಗ ಮಾಡು ವುದನ್ನು ಕಾಣುತ್ತೇವೆ. ಆದರೆ ಡಿ.ಬನುಮಯ್ಯ ಅವರು, ಹಿಂದುಳಿದ ವರ್ಗ ಹಾಗೂ ಬಡ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದು ಎಂಬ ಕಾರಣಕ್ಕಾಗಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿದರು. ಅಲ್ಲದೆ ತಾವು ಸಂಪಾ ದಿಸಿದ ಆಸ್ತಿಯನ್ನೆಲ್ಲಾ ಟ್ರಸ್ಟ್ ಹೆಸರಿಗೆ ದಾನ ಮಾಡಿದ ಮಹಾಪುರುಷ ಎಂದು ಬಣ್ಣಿಸಿದರು.

ಸಂಸ್ಥೆಯ ಕೀರ್ತಿ ಪತಾಕೆ ಹಾರಿಸಿ: ವಿದ್ಯಾರ್ಥಿಗಳಿಗೆ ಕಿವಿಮಾತು
ಮೈಸೂರು,ಡಿ.11(ಎಂಟಿವೈ)-ಶತಮಾನೋತ್ಸವ ಸಂಭ್ರಮದಲ್ಲಿರುವ ಡಿ.ಬನುಮಯ್ಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಇನ್ನು ಮುಂದೆ ಶೇ.100ರಷ್ಟು ಫಲಿತಾಂಶ ಗಳಿಸುವುದರೊಂದಿಗೆ ಸಂಸ್ಥೆಗೆ ತನ್ನದೇ ಆದ ಕೊಡುಗೆ ನೀಡಲು ಪಣ ತೊಡುವಂತೆ ಶಾಸಕ ಎಸ್.ಎ.ರಾಮ ದಾಸ್ ಕಿವಿಮಾತು ಹೇಳಿದ್ದಾರೆ.

ಮೈಸೂರು ಧರ್ಮಪ್ರಕಾಶ ಡಿ.ಬನುಮಯ್ಯ ವಿದ್ಯಾ ಸಂಸ್ಥೆ ಆವರಣದಲ್ಲಿ ಬುಧವಾರ ನಡೆದ ಸಂಸ್ಥೆಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತ ನಾಡಿದ ಅವರು, ಶಿಕ್ಷಣದಿಂದ ವಂಚಿತರಾದ ಧರ್ಮ ಪ್ರಕಾಶ ಡಿ.ಬನುಮಯ್ಯ ಅವರು, ನನ್ನಂತೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಗಟ್ಟಲು ತಾವು ದುಡಿದ ಹಣದಲ್ಲಿ ಬನುಮಯ್ಯ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಸದುದ್ದೇಶ, ಸಾಮಾಜಿಕ ಕಳಕಳಿಯಿಂದ ಸ್ಥಾಪಿಸಲಾಗಿರುವ ಈ ಶಿಕ್ಷಣ ಸಂಸ್ಥೆಗೆ 100 ವರ್ಷ ಸಂದಿರುವುದು ಶ್ಲಾಘನೀಯ. ಈ ಮಹಾನ್ ಸಂಸ್ಥೆ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಸಂಸ್ಥೆಯ ಶತಮಾನೋತ್ಸವದ ಸಂಭ್ರಮಕ್ಕೆ ಕೊಡುಗೆ ನೀಡಬೇಕು. ಸಂಸ್ಥೆಯ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿ ಗಳು ಶೇ.100ರಷ್ಟು ಫಲಿತಾಂಶ ತಂದು ಕೊಡಲು ಇಂದಿನಿಂದಲೇ ಪಣ ತೊಟ್ಟು ಸಿದ್ದತೆ ಮಾಡಿಕೊಳ್ಳ ಬೇಕು. ಬನುಮಯ್ಯ ಕಾಲೇಜು ಈ ಹಿಂದೆ ಕಾಮರ್ಸ್ (ವಾಣಿಜ್ಯಶಾಸ್ತ್ರ)ಗೆ ಪ್ರಸಿದ್ಧಿ ಪಡೆದಿತ್ತು. ಡಿ.ಬನುಮಯ್ಯ ಅವರು ವ್ಯಾಪಾರಿಯಾಗಿದ್ದರೂ ಅರ್ಥಶಾಸ್ತ್ರಜ್ಞರ ಸೇವೆ ಅಗತ್ಯತೆ ಮನಗಂಡು ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಾಮರ್ಸ್ ಶಿಕ್ಷಣ ನೀಡಲು ಕ್ರಮ ಕೈಗೊಂಡಿದ್ದರು. ಜಗತ್ತಿನ ಉದ್ದಗಲಕ್ಕೂ ಅರ್ಥಶಾಸ್ತ್ರಜ್ಞರ ಅಗತ್ಯವಿದೆ. ಭಾರತದ ಮಹಿಳೆಯರು ಉಳಿತಾಯ ಮಾಡುವ ಯೋಜನೆಯೇ ಜಗತ್ತಿನ ಅರ್ಥ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಸಾಸಿವೆ ಡಬ್ಬದಲ್ಲಿ ಕೂಡಿಟ್ಟ ಹಣ ಮನೆ ಹಾಗೂ ದೇಶದ ರಕ್ಷಣೆಗೆ ನೆರವಾಗುತ್ತದೆ. ಸಮಾಜದ ಒಳಿತಿಗಾಗಿ ವೆಚ್ಚ ಮಾಡು ವವರ ಸಂಖ್ಯೆ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊಸದುರ್ಗ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾ ಧ್ಯಕ್ಷ ಶ್ರೀ ಶಾಂತವೀರ ಸ್ವಾಮೀಜಿ ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವದ ಅಂಗ ವಾಗಿ ಹೊರತಂದಿರುವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಸಂಸ್ಥೆ ಆವರಣದಲ್ಲಿರುವ ಧರ್ಮಪ್ರಕಾಶ ಡಿ.ಬನುಮಯ್ಯ ಅವರ ಪುತ್ಥಳಿಗೆ ಮಾಲಾ ರ್ಪಣೆ ಮಾಡಿ, ಗೌರವ ಸಲ್ಲಿಸಿದರು.

Translate »