ಡಿ.16, 17ಕ್ಕೆ `ಕಾರಂಜಿಕೆರೆ ಉತ್ಸವ’
ಮೈಸೂರು

ಡಿ.16, 17ಕ್ಕೆ `ಕಾರಂಜಿಕೆರೆ ಉತ್ಸವ’

December 12, 2019

ಮೈಸೂರು,ಡಿ.11(ಎಂಟಿವೈ)- ಮೈಸೂ ರಿನ ಕಾರಂಜಿಕೆರೆ ಆವರಣದಲ್ಲಿ ಡಿ.16 ಮತ್ತು 17ರಂದು ನಡೆಯುವ ಕಾರಂಜಿಕೆರೆ ಉತ್ಸವಕ್ಕೆ ಮೈಸೂರು ಮೃಗಾಲಯ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಉತ್ಸವದಲ್ಲಿ ಪಾಲ್ಗೊ ಳ್ಳುವ ಆಸಕ್ತರಿಗೆ ವಿವಿಧ ವಿಷಯಗಳಲ್ಲಿ ಮಾಹಿತಿ ನೀಡಲು ಸಂಪನ್ಮೂಲ ವ್ಯಕ್ತಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.

ಕೆರೆ ಪರಿಸರ, ಜೀವವೈವಿಧ್ಯ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲೆಂದೇ ಇದೇ ಮೊದಲ ಬಾರಿಗೆ ಕಾರಂಜಿಕೆರೆ ಉತ್ಸವ ಆಯೋಜಿಸಲಾಗಿದೆ. ಹಲವು ವರ್ಷಗಳ ಬಳಿಕ ಕೆರೆಯಲ್ಲಿ ಹೂಳೆತ್ತ ಲಾಗಿದ್ದು, ಮಳೆ ನೀರಿನಿಂದ ಕೆರೆ ತುಂಬಿ ತುಳುಕಿದೆ. ಈ ಹಿನ್ನೆಲೆಯಲ್ಲಿ ಎರಡು ದಿನ ಕೆರೆ ಉತ್ಸವ ನಡೆಸಲಾಗುತ್ತಿದೆ. ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. `ಇದು ನಿಮ್ಮ ಹಬ್ಬ.. ನೀವು ಬನ್ನಿ, ನಿಮ್ಮೊಂದಿಗೆ ಆಸಕ್ತರನ್ನು ಕರೆತನ್ನಿ’ ಎಂದು ಘೋಷಣೆ ಹೊರಡಿಸಲಾಗಿದೆ.

ಡಿ.16ರಂದು ಬೆಳಿಗ್ಗೆ 10.30ರಿಂದ 10.40ವರೆಗೆ ಕಾರಂಜಿಕೆರೆ ಆವರಣದಲ್ಲಿ ಛಾಯಾಚಿತ್ರ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. 10.40ರಿಂದ 11.40ವರೆಗೆ ಕೆರೆ ಉತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ನಂತರ ಬೆಳಿಗ್ಗೆ 11.50ರಿಂದ 1.00 ಗಂಟೆವರೆಗೆ ವನ್ಯಜೀವಿ ವಿಷಯ ಕುರಿತು ಪ್ರೌಢಶಾಲಾ ವಿದ್ಯಾರ್ಥಿ ಗಳಿಗಾಗಿ ಪ್ರಾದೇಶಿಕ ಪ್ರಾಕೃತಿಕ ಸಂಗ್ರಹಾ ಲಯದ (ಆರ್‍ಎಂಎನ್‍ಹೆಚ್) ಆವರಣ ದಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದ್ದು, ಎಂ.ವಿಜಯ್, ಜಾನ್ ಥಾಮಸ್ ಹಾಗೂ ಗುರುಪ್ರಸಾದ್ ಸ್ಪರ್ಧೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಧ್ಯಾಹ್ನ 2.30ರಿಂದ 4.30ರವರೆಗೆ (ಆರ್‍ಎಂ ಎನ್‍ಹೆಚ್) ಹಾಗೂ ಮೈಸೂರು ಮೃಗಾ ಲಯದ ಆ್ಯಂಪಿ ಥಿಯೇಟರ್‍ನಲ್ಲಿ ಚಿತ್ರಕಲೆ ಸ್ಪರ್ಧೆ ನಡೆಯಲಿದೆ.

ಡಿ.17ರಂದು ಕೆರೆ ಉತ್ಸವದ 2ನೇ ದಿನ ಕಾರಂಜಿ ಕೆರೆಯಲ್ಲಿ ಬೆಳಿಗ್ಗೆ 7ರಿಂದ 8ರವರೆಗೆ ಪಕ್ಷಿ ವೀಕ್ಷಣೆ ಹಾಗೂ ಬಟಾನಿ ಕಲ್ ವಾಕ್ ನಡೆಯಲಿದೆ. ವಿಜ್ಞಾನಿಗಳಾದ ಡಾ.ಎ.ಪಿ.ತಿವಾರಿ, ಡಾ.ಎಂ.ವಿ.ವಿಜಯ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಶ್ರೀನಿವಾಸ್, ತನುಜಾ, ಶೈಲೇಶ್, ಸಹನಾ, ಪ್ರಣವ್ ಇನ್ನಿತರರು ವಿವರಣೆ ನೀಡಲಿದ್ದಾರೆ.

ಬೆಳಿಗ್ಗೆ 10.30ರಿಂದ 11.20ರವರೆಗೆ ಕಾರಂಜಿ ಕೆರೆಯ ಹಳೆಯ ಫುಡ್ ಕೋರ್ಟ್ ನಲ್ಲಿ ಮೈಸೂರು ಕೆರೆಗಳ ಇತಿಹಾಸ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. 11.20ರಿಂದ 12.20ರವರೆಗೆ ನಗರದ ಕೆರೆಗಳ ಸಂರಕ್ಷಣೆ ಹಾಗೂ ಕೆರೆ ಯಲ್ಲಿರುವ ಜೀವ ವೈವಿಧ್ಯಗಳ ಸಂರ ಕ್ಷಣೆಯ ಮಹತ್ವ ಕುರಿತು ಜಲತಜ್ಞ ಪ್ರೊ. ರವಿಕುಮಾರ್ ಮಾತನಾಡಲಿದ್ದಾರೆ.

ಮಧ್ಯಾಹ್ನ 12.20ರಿಂದ 12.35ರವರೆಗೆ ಪ್ರಕೃತಿಗೆ ಸಂಬಂಧಿಸಿದಂತೆ ಸ್ಕಿಟ್ ಬರೆ ಯುವ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12.35ರಿಂದ 1.15ರವರೆಗೆ ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಹಾಗೂ ಇಲಾಖೆಯ ನಿಯಮ ಕುರಿತು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಲಿ ದ್ದಾರೆ. ಮಧ್ಯಾಹ್ನ 2.30ರಿಂದ 3.15ರವರೆಗೆ ಮುಂದಿನ ದಿನಗಳಲ್ಲಿ ಕಾರಂಜಿ ಕೆರೆ ಮತ್ತು ಲಲಿತಾದ್ರಿಪುರ ಕೆರೆ ಸಂರಕ್ಷಣೆ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.15ರಿಂದ 4 ಗಂಟೆವರೆಗೆ ಕೆರೆ ಉತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.ಕೆರೆ ಉತ್ಸವದಲ್ಲಿ ಮಕ್ಕಳಿಗೆ ಪ್ರಾಣಿ, ಪ್ರಕೃತಿ ವಿಚಾರವಾಗಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯೂ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ 96866 68099, ದೂ.ಸಂ. 0821-4267333 ಸಂಪರ್ಕಿಸುವಂತೆ ಕೋರಲಾಗಿದೆ.

Translate »