`ಮೈಬಿಲ್ಡ್’ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

`ಮೈಬಿಲ್ಡ್’ ವಸ್ತು ಪ್ರದರ್ಶನಕ್ಕೆ ಚಾಲನೆ

December 12, 2019

ಮೈಸೂರು,ಡಿ.11(ವೈಡಿಎಸ್)-ಮಹಾ ರಾಜ ಕಾಲೇಜು ಮೈದಾನದಲ್ಲಿ ಇಂದಿ ನಿಂದ 6 ದಿನಗಳ ಕಾಲ ಆಯೋಜಿಸಿರುವ `ಮೈಬಿಲ್ಡ್ 2019’ ಬೃಹತ್ ವಸ್ತು ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕೇಂದ್ರ ಆಯೋಜಿಸಿರುವ ಬಿಎಐನ 19ನೇ ವಾರ್ಷಿಕ ಬೃಹತ್ ವಸ್ತು ಪ್ರದರ್ಶನಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು.

ಈ ವಸ್ತು ಪ್ರದರ್ಶನದ ಸುಮಾರು 150 ಮಳಿಗೆಗಳಲ್ಲಿ ದೇಶ ಮತ್ತು ವಿದೇಶ ಗಳ ಕಟ್ಟಡ ಸಾಮಗ್ರಿಗಳು, ನವೀನ ಮಾದ ರಿಯ ನೆಲಹಾಸುಗಳು, ಸೌರಶಕ್ತಿ ಯೋಜನೆ, ವಿದ್ಯುತ್ ಉಪಕರಣಗಳು, ಕಟ್ಟಡ ನಿರ್ಮಾಣದ ಯಂತ್ರಗಳು, ಜಲಸಂರ ಕ್ಷಣಾ ವಿಧಾನಗಳು, ಹೊರಾಂಗಣ ನೆಲಹಾಸು ಗಳು, ನವೀನ ರೀತಿಯ ಬಣ್ಣ ಮತ್ತು ಸಾಮಗ್ರಿಗಳು, ಉತ್ಪಾದನೆಗೊಂಡ ಮರಳು ಮುಂತಾದ ಸಾಮಗ್ರಿಗಳ ಪ್ರದರ್ಶ ನದ ಜೊತೆಗೆ ವೀಕ್ಷಕರಿಗೆ ಉಚಿತವಾಗಿ ಮಾಹಿತಿ ಯನ್ನು ಒದಗಿಸಲಾಗುತ್ತಿದೆ. ಜತೆಗೆ ಪ್ರತಿದಿನ ಸಂಜೆ ಮನರಂಜನೆ ಕಾರ್ಯಕ್ರಮ. ಮೈಸೂ ರಿನ ಯುವಗಾಯಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಾಯ್ಸ್ ಆಫ್ ಮೈ ಬಿಲ್ಡ್-19 ಸಂಗೀತಗೋಷ್ಠಿಯನ್ನು ಆಯೋಜಿಸಲಾಗಿದೆ.

ಗಮನ ಸೆಳೆಯುವ ವಾಟರ್‍ಫಾಲ್: ಮೈಬಿಲ್ಡ್ ಎದುರು ಸುಶೀಲ ಗಾರ್ಡನ್ ಸಂಸ್ಥೆಯ ಚಲುವರಾಜು ಅವರು ಮಿನಿ ವಾಟರ್ ಫಾಲ್ ನಿರ್ಮಿಸಿದ್ದು, ಜನರನ್ನು ಆಕರ್ಷಿ ಸುತ್ತಿದೆ. ಮೈಬಿಲ್ಡ್‍ಗೆ ಭೇಟಿ ನೀಡುವ ಜನರು ಇದರ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿ ಕೊಂಡು ಎಂಜಾಯ್ ಮಾಡುತ್ತಿದ್ದಾರೆ.

ಕಾರ್ಯಕ್ರಮ ಉದ್ಘಾಟಿಸಿ ನಂತರ ಮೇಯರ್ ಪುಷ್ಪಲತಾ ಜಗನ್ನಾಥ್ ಮಾತನಾಡಿ, ಮನೆ ಕಟ್ಟುವವವರು ಮತ್ತು ಮನೆಯನ್ನು ಅಂದಗೊಳಿಸುವವರಿಗೆ ಮೈ ಬಿಲ್ಡ್ ಒಂದೇ ಸೂರಿನಡಿಯಲ್ಲಿ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಿಕೊಡುತ್ತಿರುವುದು ಸಂತೋಷದ ವಿಷಯ. ಪ್ರತಿಯೊಬ್ಬರು ಸ್ವಂತ ಮನೆ ನಿರ್ಮಿಸಬೇಕೆಂಬ ಕನಸು ಹೊಂದಿರುತ್ತಾರೆ. ಆದರೆ, ಅದು ಯಾವ ರೀತಿ ಇರಬೇಕು. ಏನೇನು ಇರಬೇಕು ಎಂಬುದು ಗೊತ್ತಿರುವುದಿಲ್ಲ. ಅಂಥಹವರಿಗೆ ಮೈ ಬಿಲ್ಡ್ ಪ್ರದರ್ಶನವು ಮಾಹಿತಿಯ ಜೊತೆಗೆ ಮನೆ ನಿರ್ಮಾಣಕ್ಕೆ ಅಗತ್ಯ ವಸ್ತುಗಳನ್ನು ಒದಗಿಸಿಕೊಡಲಿದೆ ಎಂದು ತಿಳಿಸಿದರು.

ಮೈಬಿಲ್ಡ್-2019 ಅಧ್ಯಕ್ಷ ಎಸ್.ವಾಸು ದೇವನ್ ಮಾತನಾಡಿ, ಬಿಲ್ಡರ್ಸ್ ಅಸೋಸಿ ಯೇಶನ್ ಆಫ್ ಇಂಡಿಯ ಮೈಸೂರು ಕೇಂದ್ರವು ಆರಂಭವಾದಾಗಿನಿಂದ ಮನೆ ನಿರ್ಮಾಣಕ್ಕೆ ಬೇಕಾದ ಅಗತ್ಯ ಮಾಹಿತಿ ಮತ್ತು ವಸ್ತುಗಳನ್ನು ಒದಗಿಸುವುದರ ಜೊತೆಗೆ ಆರೋಗ್ಯ ಶಿಬಿರ, ವಿಶ್ವಪರಿಸರ ದಿನ, ಕಾರ್ಮಿಕರ ದಿನಾಚರಣೆ, ಪ್ರತಿಭಾ ಪುರಸ್ಕಾರದಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಾಂಸ್ಕøತಿಕ ನಗರಿಯಲ್ಲಿ ಮೈ ಬಿಲ್ಡ್ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು. ಎಂಬಿಸಿಟಿ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಆರ್.ಸ್ವಾಮಿ, ಬಿಐಎ ಮೈಸೂರು ಅಧ್ಯಕ್ಷ ಬಿ.ಎಸ್. ದಿನೇಶ್, ಕಾರ್ಯದರ್ಶಿ ಆರ್.ರಘು ನಾಥ್ ಮತ್ತಿತರರು ಉಪಸ್ಥಿತರಿದ್ದರು.

Translate »