ಮೈಸೂರು,ಡಿ.11(ವೈಡಿಎಸ್)-ಮಹಾ ರಾಜ ಕಾಲೇಜು ಮೈದಾನದಲ್ಲಿ ಇಂದಿ ನಿಂದ 6 ದಿನಗಳ ಕಾಲ ಆಯೋಜಿಸಿರುವ `ಮೈಬಿಲ್ಡ್ 2019’ ಬೃಹತ್ ವಸ್ತು ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಲಾಯಿತು. ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕೇಂದ್ರ ಆಯೋಜಿಸಿರುವ ಬಿಎಐನ 19ನೇ ವಾರ್ಷಿಕ ಬೃಹತ್ ವಸ್ತು ಪ್ರದರ್ಶನಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಿದರು. ಈ ವಸ್ತು ಪ್ರದರ್ಶನದ ಸುಮಾರು 150 ಮಳಿಗೆಗಳಲ್ಲಿ ದೇಶ ಮತ್ತು ವಿದೇಶ ಗಳ ಕಟ್ಟಡ ಸಾಮಗ್ರಿಗಳು, ನವೀನ ಮಾದ ರಿಯ ನೆಲಹಾಸುಗಳು, ಸೌರಶಕ್ತಿ ಯೋಜನೆ, ವಿದ್ಯುತ್…
ಶಿಕ್ಷಣ ಸಂಸ್ಥೆ ನಡೆಸುವುದು ತುಂಬಾ ಕಷ್ಟ
December 12, 2019ಶಿಕ್ಷಣ ಸಂಸ್ಥೆ ಕಟ್ಟಿದ ಧರ್ಮಪ್ರಕಾಶರ ಶ್ರಮ ಸ್ಮರಣಾರ್ಹ: ವಾಸು ಮೈಸೂರು,ನ.11(ಎಸ್‍ಪಿಎನ್)-ಇತ್ತೀಚಿನ ದಿನಗಳಲ್ಲಿ ಸಂಪನ್ಮೂಲವನ್ನು ಕ್ರೋಢೀಕರಿಸಿ, ಖಾಸಗಿ ಶಿಕ್ಷಣ ಸಂಸ್ಥೆ ಗಳನ್ನು ನಡೆಸುವ ಮಾರ್ಗ ದಿನೇದಿನೆ ಕಠಿಣವಾಗುತ್ತಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಋಣಾತ್ಮಕ ಭಾವನೆ ಬಿಟ್ಟು, ಧನಾತ್ಮಕ ಭಾವನೆ ರೂಢಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ವಾಸು ಆಗ್ರಹಿಸಿದರು. ಮೈಸೂರಿನ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ.ಬನು ಮಯ್ಯ ವಿದ್ಯಾಸಂಸ್ಥೆಯ ಶತಮಾನೋ ತ್ಸವ ಕಾರ್ಯಕ್ರಮದ ಮುಕ್ತಾಯ ಸಮಾ ರಂಭದಲ್ಲಿ ಭಾಗವಹಿಸಿ ಮಾತನಾಡಿ…
ಜಿಟಿಡಿ ನುಡಿದಿದ್ದೆಲ್ಲಾ ನಿಜವಾಗಿದೆ: ಹೆಚ್.ಪಿ.ಮಂಜುನಾಥ್ ಹರ್ಷ
December 12, 2019ಮೈಸೂರು,ಡಿ.11(ವೈಡಿಎಸ್)-ಹುಣಸೂರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಶಾಸಕ ಹೆಚ್.ಪಿ.ಮಂಜುನಾಥ್ ಅವರು ಪತ್ನಿಯೊಂದಿಗೆ ಬುಧವಾರ ವಿಜಯನಗರದಲ್ಲಿರುವ ಶಾಸಕ ಜಿ.ಟಿ.ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ಜಿಟಿಡಿ ಅವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಸನ್ಮಾನಿಸಿ, ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಂಜುನಾಥ್, ರಾಜಕೀಯದಲ್ಲಿ ಶತ್ರುಗಳೂ ಇಲ್ಲ. ಮಿತ್ರರೂ ಇಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಾನು ತಾಲೂಕಿನಲ್ಲಿ ಸಣ್ಣ ಪುಟ್ಟ ಸಮಾಜ ಸೇವೆ ಮಾಡಿಕೊಂಡಿದ್ದೆ. 2007ರಲ್ಲಿ ನಡೆದ ಶಾಲಾ ಕಾರ್ಯಕ್ರಮವೊಂದರಲ್ಲಿ ನಾನು ಕೊನೆಯಲ್ಲಿ ನಿಂತಿದ್ದೆ. ಈ…
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಎಸ್‍ಯುಸಿಐ-ಕಮ್ಯೂನಿಸ್ಟ್ ಪ್ರತಿಭಟನೆ
December 12, 2019ಮೈಸೂರು,ಡಿ.11(ಪಿಎಂ)-ಕೇಂದ್ರ ಸರ್ಕಾ ರದ `ಪೌರತ್ವ ತಿದ್ದುಪಡಿ ಮಸೂದೆ’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’ ವಿರೋ ಧಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ-ಕಮ್ಯೂನಿಸ್ಟ್) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ತಿದ್ದುಪಡಿ ಇದಾಗಿದ್ದು, ನಮ್ಮ ಸಂವಿಧಾನದ ಆಶಯ ಗಳಿಗೆ ಈ ತಿದ್ದುಪಡಿ ಸಂಪೂರ್ಣ ವಿರುದ್ಧ ವಾಗಿದೆ ಎಂದು ಕಿಡಿಕಾರಿದರು. 1955ರ ಭಾರತೀಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ನೆರೆಯ…
ಬಯಲು ಮೂತ್ರ ವಿಸರ್ಜಿಸಿದವನಿಗೆ ಪಾಲಿಕೆಯಿಂದ ಸಾವಿರ ರೂ. ದಂಡ
December 12, 2019ಮೈಸೂರು, ಡಿ.11-ಬಯಲು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೋರ್ವನಿಗೆ ಮೈಸೂರು ನಗರಪಾಲಿಕೆ ಒಂದು ಸಾವಿರ ರೂ. ದಂಡ ವಿಧಿಸಿರುವ ಬಗ್ಗೆ ವರದಿ ಯಾಗಿದೆ. ತಿಲಕ್‍ನಗರದ 16ನೇ ಕ್ರಾಸ್‍ನಲ್ಲಿರುವ ನಗರ ಪಾಲಿಕೆ ವಲಯ ಕಚೇರಿ-6ರ ಹಿಂಭಾಗ ಮಂಗಳವಾರ ಚೇತನ್ ಎಂಬಾತ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಅದಕ್ಕೆ ಪಾಲಿಕೆಯ ಮಹಿಳಾ ಆರೋಗ್ಯಾಧಿಕಾರಿ ಆಕ್ಷೇಪ ವ್ಯಕ್ತಪಡಿ ಸಿದಾಗ ಅವರೊಂದಿಗೂ ಆತ ಅಸಭ್ಯವಾಗಿ ವರ್ತಿಸಿದ್ದಾನೆ. ಬಯಲು ಮೂತ್ರ ವಿಸರ್ಜನೆ ಮಾಡಿದ ಅಪರಾಧಕ್ಕಾಗಿ ಚೇತನ್‍ಗೆ ಒಂದು ಸಾವಿರ ರೂ. ದಂಡ ವಿಧಿಸಲಾಗಿದ್ದು, ಈತನ ವಿರುದ್ಧ…
`ಮಾತು ಆಡಿದರೆ ಕೆಡ್ತು- ಮುತ್ತು ಒಡೆದರೆ ಹೋಯ್ತು’ ಇತ್ತೀಚೆಗೆ ಕುಮಾರಣ್ಣನ ಮಾತಿನಿಂದ ಅವರ ಅಭಿಮಾನಿಗಳಿಗೆ ನೋವಾಗಿದೆ: ಜಿಟಿಡಿ
December 12, 2019ಮೈಸೂರು, ಡಿ.11(ಆರ್‍ಕೆಬಿ)- ಎರಡು ಬಾರಿ ಮುಖ್ಯಮಂತ್ರಿ ಮತ್ತು ಒಮ್ಮೆ ಸಂಸದರಾಗಿದ್ದ ಹೆಚ್.ಡಿ.ಕುಮಾರಸ್ವಾಮಿ, ಮಾತನಾಡುವಾಗ ಹಾಗೂ ಟ್ವೀಟ್ ಮಾಡುವಾಗ ಗಮನ ಇಡಬೇಕು. `ಮಾತು ಆಡಿದರೆ ಕೆಡ್ತು- ಮುತ್ತು ಒಡೆದರೆ ಹೋಯ್ತು’ ಎಂಬಂತೆ, ಮಾತನಾಡುವಾಗ ಹೆಚ್ಚು ನಿಗಾ ಇಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದ್ದಾರೆ. ಮೈಸೂರು ತಾಲೂಕಿನ ಜಯಪುರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಮ್ಮ ಬಗ್ಗೆ ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದರು. ಎಸ್.ಎಂ.ಕೃಷ್ಣ ಅವರು ಮಾತನ್ನೇ ಆಡುತ್ತಿರಲಿಲ್ಲ. ನೀವು ಮಾತನಾಡುವಾಗ ಹಿಂದೆ ಏನು…
ಮೈಸೂರಲ್ಲಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ
December 12, 2019ಮೈಸೂರು, ಡಿ. 11(ಆರ್‍ಕೆ)- ಮೈಸೂರಿನ ಕುಂಬಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ದಿನಗಳ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಇಂದಿನಿಂದ ಆರಂಭವಾಯಿತು. ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಡಿ. ಮಾದೇಗೌಡ ಅವರು ನಗಾರಿ ಬಾರಿ ಸುವ ಮೂಲಕ ವರ್ಣರಂಜಿತ ಚಾಲನೆ ನೀಡಿದರು. ಕುಂಬಾರಕೊಪ್ಪಲಿನ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಿಂದ ಸಾಂಪ್ರ ದಾಯಿಕ ಉಡುಗೊರೆ ತೊಟ್ಟು ಶಾಲಾ ಮಕ್ಕಳು ಪೂರ್ಣಕುಂಭದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಮಂಗಳವಾದ್ಯ, ಶಾಲಾ ಬ್ಯಾಂಡ್, ತಂಡ, ಜಾನಪದ…
58ನೇ ರಾಷ್ಟ್ರೀಯ ಔಷಧ ಸಪ್ತಾಹ-2019ರ ಅಂಗವಾಗಿ ಮೈಸೂರಿನಲ್ಲಿ ಜಾಥಾ ಡ್ರಗ್, ಕಾಸ್ಮೆಟಿಕ್ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ
December 12, 2019ಮೈಸೂರು, ಡಿ.11(ಪಿಎಂ)- ಇಂಡಿ ಯನ್ ಫಾರ್ಮಾಸ್ಯೂಟಿಕಲ್ ಅಸೋಸಿ ಯೇಷನ್ ಮೈಸೂರು ಘಟಕದ ವತಿ ಯಿಂದ 58ನೇ ರಾಷ್ಟ್ರೀಯ ಔಷಧ ಸಪ್ತಾಹ -2019ರ ಅಂಗವಾಗಿ ಮೈಸೂರಿನಲ್ಲಿ ಬುಧವಾರ ಜಾಥಾ ನಡೆಸಿ, `ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆಯ ಷೆಡ್ಯೂಲ್-ಕೆ’ಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಲಾಯಿತು. ಇತ್ತೀಚೆಗೆ ಕೇಂದ್ರ ಸರ್ಕಾರ (ಭಾರತದ ಆರೋಗ್ಯ ಸಚಿವಾಲಯ) `ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆಯ ಷೆಡ್ಯೂಲ್ ಕೆ’ಗೆ ಕೆಲವು ತಿದ್ದುಪಡಿಗಳನ್ನು ತಂದಿದೆ. ಇದರ ಪ್ರಕಾರ ಗ್ರಾಮೀಣ ಪ್ರದೇಶದ ಅಂಗನ ವಾಡಿ ಕಾರ್ಯಕರ್ತೆಯರು, ಶುಶ್ರೂಷಕಿ…
ಹಿರಿಯ ವಿದ್ವಾಂಸ, ವಿಜ್ಞಾನಿ ಮೈಸೂರಿನ ಎನ್.ಎಸ್.ರಾಜಾರಾಂ ಇನ್ನಿಲ್ಲ
December 12, 2019ಬೆಂಗಳೂರು, ಡಿ.11- ಅಮೆರಿಕದ ಹೆಸರಾಂತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ’ದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ ಹಿರಿಯ ವಿದ್ವಾಂಸರೂ ಆಗಿದ್ದ ಮೈಸೂರು ಮೂಲದ ಡಾ.ನವರತ್ನ ಶ್ರೀನಿವಾಸ ರಾಜಾರಾಮ್(76) ಬೆಂಗ ಳೂರಿನಲ್ಲಿ ಬುಧವಾರ ನಿಧನರಾದರು. ಮೈಸೂರಿನಲ್ಲಿ 1943ರಲ್ಲಿ ಜನಿಸಿದ್ದ ರಾಜಾರಾಮ್ ಖ್ಯಾತ ಸಾಹಿತಿ ದಿ.ನವರತ್ನ ರಾಮರಾಯರ ಮೊಮ್ಮಗ. ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದ ರಾಜಾರಾಮ್, 2 ದಶಕಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಭಾರತದ ಮೂಲನಿವಾಸಿಗಳು ಆರ್ಯರಲ್ಲ ಎಂಬ ವಾದವನ್ನು ಒಪ್ಪಿಕೊಂಡಿದ್ದ ಅವರು, ಅದಕ್ಕೆ ತಮ್ಮ…
ಇಂತಹುದೇ ಖಾತೆ ಬೇಕೆಂದು ಬೇಡಿಕೆ ಇಟ್ಟಿಲ್ಲ
December 11, 2019ಯಶವಂತಪುರ ನೂತನ ಶಾಸಕ ಎಸ್.ಟಿ.ಸೋಮಶೇಖರ್ ಸ್ಪಷ್ಟನೆ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಂತರ ಅಡಗೂರು ಹೆಚ್.ವಿಶ್ವನಾಥ್ ಭೇಟಿಯಾಗಿ ಚರ್ಚೆ ಮೈಸೂರು,ಡಿ.10(ಎಸ್‍ಬಿಡಿ)-ನಾವು ಯಾವುದೇ ಖಾತೆಗೆ ಬೇಡಿಕೆ ಇಟ್ಟಿಲ್ಲ ಎಂದು ಯಶವಂತಪುರ ಕ್ಷೇತ್ರದ ನೂತನ ಶಾಸಕ ಎಸ್.ಟಿ. ಸೋಮಶೇಖರ್ ಇಂದಿಲ್ಲಿ ಸ್ಪಷ್ಟಪಡಿಸಿದರು. ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಗಳ ವಾರ ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀ ರ್ವಾದ ಪಡೆದ ಎಸ್.ಟಿ.ಸೋಮಶೇಖರ್, ಹುಣಸೂರು ಕ್ಷೇತ್ರದ ಪರಾಜಿತ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಅವರನ್ನು ಭೇಟಿ ಮಾಡಿ ಮಾತುಕತೆ…










