ಬಯಲು ಮೂತ್ರ ವಿಸರ್ಜಿಸಿದವನಿಗೆ ಪಾಲಿಕೆಯಿಂದ ಸಾವಿರ ರೂ. ದಂಡ
ಮೈಸೂರು

ಬಯಲು ಮೂತ್ರ ವಿಸರ್ಜಿಸಿದವನಿಗೆ ಪಾಲಿಕೆಯಿಂದ ಸಾವಿರ ರೂ. ದಂಡ

December 12, 2019

ಮೈಸೂರು, ಡಿ.11-ಬಯಲು ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯೋರ್ವನಿಗೆ ಮೈಸೂರು ನಗರಪಾಲಿಕೆ ಒಂದು ಸಾವಿರ ರೂ. ದಂಡ ವಿಧಿಸಿರುವ ಬಗ್ಗೆ ವರದಿ ಯಾಗಿದೆ. ತಿಲಕ್‍ನಗರದ 16ನೇ ಕ್ರಾಸ್‍ನಲ್ಲಿರುವ ನಗರ ಪಾಲಿಕೆ ವಲಯ ಕಚೇರಿ-6ರ ಹಿಂಭಾಗ ಮಂಗಳವಾರ ಚೇತನ್ ಎಂಬಾತ ಬಯಲು ಮೂತ್ರ ವಿಸರ್ಜನೆ ಮಾಡುತ್ತಿದ್ದ. ಅದಕ್ಕೆ ಪಾಲಿಕೆಯ ಮಹಿಳಾ ಆರೋಗ್ಯಾಧಿಕಾರಿ ಆಕ್ಷೇಪ ವ್ಯಕ್ತಪಡಿ ಸಿದಾಗ ಅವರೊಂದಿಗೂ ಆತ ಅಸಭ್ಯವಾಗಿ ವರ್ತಿಸಿದ್ದಾನೆ. ಬಯಲು ಮೂತ್ರ ವಿಸರ್ಜನೆ ಮಾಡಿದ ಅಪರಾಧಕ್ಕಾಗಿ ಚೇತನ್‍ಗೆ ಒಂದು ಸಾವಿರ ರೂ. ದಂಡ ವಿಧಿಸಲಾಗಿದ್ದು, ಈತನ ವಿರುದ್ಧ ಕ್ರಮಕ್ಕೆ ಮಂಡಿ ಪೊಲೀಸ್ ಠಾಣೆಗೆ ಪತ್ರ ಬರೆಯ ಲಾಗಿದೆ ಎಂದು ಮೈಸೂರು ನಗರಪಾಲಿಕೆ ಟ್ವಿಟರ್ ಖಾತೆಯಲ್ಲಿ ಹೇಳಿದೆ.

Translate »