ಮೈಸೂರಲ್ಲಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ
ಮೈಸೂರು

ಮೈಸೂರಲ್ಲಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ

December 12, 2019

ಮೈಸೂರು, ಡಿ. 11(ಆರ್‍ಕೆ)- ಮೈಸೂರಿನ ಕುಂಬಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3 ದಿನಗಳ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಇಂದಿನಿಂದ ಆರಂಭವಾಯಿತು.

ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಡಿ. ಮಾದೇಗೌಡ ಅವರು ನಗಾರಿ ಬಾರಿ ಸುವ ಮೂಲಕ ವರ್ಣರಂಜಿತ ಚಾಲನೆ ನೀಡಿದರು. ಕುಂಬಾರಕೊಪ್ಪಲಿನ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಿಂದ ಸಾಂಪ್ರ ದಾಯಿಕ ಉಡುಗೊರೆ ತೊಟ್ಟು ಶಾಲಾ ಮಕ್ಕಳು ಪೂರ್ಣಕುಂಭದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು.

ಮಂಗಳವಾದ್ಯ, ಶಾಲಾ ಬ್ಯಾಂಡ್, ತಂಡ, ಜಾನಪದ ಕಲಾವಿದರು, ಸೈಕಲ್ ಜಾಥಾ, ಡೊಳ್ಳು ಕುಣಿತ, ನಗಾರಿ, ಕರಗ, ಕಂಸಾಳೆ, ಎತ್ತಿನಗಾಡಿ, ವೀರಗಾಸೆ, ಕೋಲಾಟ, ಪೂಜಾ ಕುಣಿತದೊಂದಿಗೆ ಕುಂಬಾರ ಕೊಪ್ಪಲಿನ ಪ್ರಮುಖ ಬೀದಿಗಳಲ್ಲಿ ಮೆರ ವಣಿಗೆ ಅದ್ದೂರಿಯಾಗಿ ನಡೆಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡುರಂಗ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಂ.ಬಸವೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಆರ್. ಶಿವಕುಮಾರ್, ಉದಯಕುಮಾರ್, ಕೃಷ್ಣ, ಎಸ್.ಸ್ವಾಮಿ ಸೇರಿದಂತೆ ಜಿಲ್ಲೆಯಾದ್ಯಂತ 150ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡು 1500 ಶಾಲಾ ಮಕ್ಕಳೊಂದಿಗೆ ಮೆರ ವಣಿಗೆಯಲ್ಲಿ ಸಾಗಿದರು.

ಮೂರು ದಿನಗಳ ಹಬ್ಬದಲ್ಲಿ `ಹಗಲು ಬಗೋಳ’ ಹಾಡು ಪಾಡು’ ‘ಊರು ಸುತ್ತೋಣ’ ‘ಜೀವ-ಭಾವ’ ‘ಕಲೆ-ಭಾಷೆ’ಗಳ ಬಗ್ಗೆ ಶಾಲಾ ಮಕ್ಕಳಿಗೆ ಸಮುದಾಯದೊಂದಿಗೆ ಶಾಲೆ, ಸರ್ಕಾರಿ ಶಾಲೆ ಉಳಿಸಲು ಕ್ರಮ, ವೈಜ್ಞಾನಿಕ ಆಸಕ್ತಿ ಬೆಳೆಸುವುದು ಸೇರಿದಂತೆ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಲು ಅವಕಾಶ ನೀಡುವುದು ವೈಜ್ಞಾನಿಕ ಹಬ್ಬದ ಪ್ರಮುಖ ಉದ್ದೇಶವಾಗಿದೆ.

ಹೊರಗಿನ ತಾಲೂಕಿನಿಂದ ಬಂದಿರುವ ಶಾಲಾ ಮಕ್ಕಳು, ಎರಡು ರಾತ್ರಿ ಸ್ಥಳೀಯ ಶಾಲಾ ಮಕ್ಕಳ ಮನೆಯಲ್ಲಿ ವಾಸ್ತವ್ಯ ಹೂಡು ವಂತೆ ಮಾಡಿ `ಅತಿಥಿ ಮತ್ತು ಆತಿಥ್ಯ ವಿಧಾನ’ ಸಮುದಾಯದೊಂದಿಗೆ ಬೆರೆತು, ಇಲ್ಲಿನ ಕಲೆ, ಸಂಸ್ಕøತಿ, ಆಚಾರ-ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು.

ಕೆ.ಎಂ.ಮಹೇಶ, ಬಸವರಾಜು, ಹರ್ಷ ವರ್ಧನ, ಕೃಷ್ಣಶರ್ಮಾ, ಮಧುರಾಣಿ, ಶಶಿಕಲಾ, ವಜ್ರಮುನಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮೂರು ದಿನಗಳ ಕಾಲ ಮಕ್ಕಳಿಗೆ ವೈಜ್ಞಾನಿಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವರು.

ಕುಂಬಾರಕೊಪ್ಪಲು ಸರ್ಕಾರಿ ಶಾಲೆ ಮುಖ್ಯೋಪಾಧ್ಯಾಯರಾದ ನಾಗಮ್ಮ ಅವರ ಮೇಲ್ವಿಚಾರಣೆಯಲ್ಲಿ ನಡೆಯುತ್ತಿ ರುವ ಮಕ್ಕಳ ಹಬ್ಬಕ್ಕೆ ಹೆಚ್‍ಡಿಎಫ್‍ಸಿ ಬ್ಯಾಂಕ್ ಪ್ರಾಯೋಜನೆ ನೀಡಿದ್ದು, ಸೀನಿಯರ್ ಮ್ಯಾನೇಜರ್ ವಿ.ಮಂಜುನಾಥ ಸಹ ಪಾಲ್ಗೊಂಡು ಮಕ್ಕಳಿಗೆ ವಿವಿಧ ಸೌಲಭ್ಯ ಒದಗಿಸಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಇಡೀ ಕುಂಬಾರಕೊಪ್ಪಲು ಗ್ರಾಮ ತಳಿರು-ತೋರಣಗಳಿಂದ ಶೃಂಗಾರ ಗೊಂಡಿದ್ದು, ಗ್ರಾಮಸ್ಥರು ಭಾಗಿಗಳಾಗಿ ಸಂಪೂರ್ಣ ಸಹಕಾರ ನೀಡಿದ್ದಾರೆ.

Translate »