58ನೇ ರಾಷ್ಟ್ರೀಯ ಔಷಧ ಸಪ್ತಾಹ-2019ರ ಅಂಗವಾಗಿ ಮೈಸೂರಿನಲ್ಲಿ ಜಾಥಾ ಡ್ರಗ್, ಕಾಸ್ಮೆಟಿಕ್ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ
ಮೈಸೂರು

58ನೇ ರಾಷ್ಟ್ರೀಯ ಔಷಧ ಸಪ್ತಾಹ-2019ರ ಅಂಗವಾಗಿ ಮೈಸೂರಿನಲ್ಲಿ ಜಾಥಾ ಡ್ರಗ್, ಕಾಸ್ಮೆಟಿಕ್ ಕಾಯ್ದೆ ತಿದ್ದುಪಡಿ ಕೈಬಿಡಲು ಆಗ್ರಹ

December 12, 2019

ಮೈಸೂರು, ಡಿ.11(ಪಿಎಂ)- ಇಂಡಿ ಯನ್ ಫಾರ್ಮಾಸ್ಯೂಟಿಕಲ್ ಅಸೋಸಿ ಯೇಷನ್ ಮೈಸೂರು ಘಟಕದ ವತಿ ಯಿಂದ 58ನೇ ರಾಷ್ಟ್ರೀಯ ಔಷಧ ಸಪ್ತಾಹ -2019ರ ಅಂಗವಾಗಿ ಮೈಸೂರಿನಲ್ಲಿ ಬುಧವಾರ ಜಾಥಾ ನಡೆಸಿ, `ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆಯ ಷೆಡ್ಯೂಲ್-ಕೆ’ಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಲಾಯಿತು.

ಇತ್ತೀಚೆಗೆ ಕೇಂದ್ರ ಸರ್ಕಾರ (ಭಾರತದ ಆರೋಗ್ಯ ಸಚಿವಾಲಯ) `ಡ್ರಗ್ ಮತ್ತು ಕಾಸ್ಮೆಟಿಕ್ ಕಾಯ್ದೆಯ ಷೆಡ್ಯೂಲ್ ಕೆ’ಗೆ ಕೆಲವು ತಿದ್ದುಪಡಿಗಳನ್ನು ತಂದಿದೆ. ಇದರ ಪ್ರಕಾರ ಗ್ರಾಮೀಣ ಪ್ರದೇಶದ ಅಂಗನ ವಾಡಿ ಕಾರ್ಯಕರ್ತೆಯರು, ಶುಶ್ರೂಷಕಿ ಯರು ಮತ್ತು ಆರೋಗ್ಯ ಕಾರ್ಯಕರ್ತೆ ಯರು ರೋಗಿಗಳಿಗೆ ಔಷಧ ನೀಡಲು ಅವಕಾಶ ಮಾಡಿಕೊಡಲಾಗಿದೆ. ಇದು ಅವೈಜ್ಞಾನಿಕ ಎಂದು ಖಂಡಿಸಿದರು.

ಔಷಧ ಜ್ಞಾನವಿಲ್ಲದ ವ್ಯಕ್ತಿಗಳು ಔಷಧ ಗಳನ್ನು ವಿತರಿಸುವುದರಿಂದ ದುರ್ಬಳಕೆ ಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ತಿದ್ದುಪಡಿಯನ್ನು ಹಿಂ ಪಡೆಯಬೇಕು ಎಂದು ಒತ್ತಾಯಿಸಿದರು. ಜಾಥಾಗೆ ಮೈಸೂರಿನ ಬನ್ನಿಮಂಟಪದ ಜೆಎಸ್‍ಎಸ್ ಫಾರ್ಮಸಿ ಕಾಲೇಜು ಆವರಣದಲ್ಲಿ ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಲ್.ಜವಹರ್ ನೆಸ್ಸಾನ್ ಚಾಲನೆ ನೀಡಿದರು.

ಬಳಿಕ ಜಾಥಾವು, ಬೆಂಗಳೂರು-ಮೈಸೂರು ರಸ್ತೆ, ಎಲ್‍ಐಸಿ ವೃತ್ತ, ನೆಲ್ಸನ್ ಮಂಡೇಲಾ ರಸ್ತೆ, ಹೈವೇ ವೃತ್ತ, ಸಯ್ಯಾಜಿರಾವ್ ರಸ್ತೆ, ಶೇಷಾದ್ರಿ ಐಯರ್ ರಸ್ತೆ, ಇರ್ವಿನ್ ರಸ್ತೆ, ರೈಲ್ವೆ ನಿಲ್ದಾಣ ವೃತ್ತ, ಜೆಎಲ್‍ಬಿ ರಸ್ತೆ, ದಾಸಪ್ಪ ವೃತ್ತ, ಹುಣ ಸೂರು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಇಂಡಿಯನ್ ಫಾರ್ಮಾಸ್ಯೂಟಿಕಲ್ ಅಸೋಸಿಯೇಷನ್ ಮೈಸೂರು ಘಟಕದ ಅಧ್ಯಕ್ಷ ಡಾ.ಟಿ.ಎಂ.ಪ್ರಮೋದ್ ಕುಮಾರ್, ಉಪಾಧ್ಯಕ್ಷ ಡಾ.ಮೊಹಮ್ಮದ್ ಸಲಾವು ದ್ದಿನ್, ಫಾರ್ಮಾಸಿಸ್ಟ್ ಸಂಘಟನೆಗಳ ಪದಾಧಿಕಾರಿಗಳಾದ ಡಾ.ಎಂ.ಮಂಜು ನಾಥ್, ಡಾ.ಬಿ.ಎಂ.ಗುರುಪಾದಯ್ಯ ಹಾಗೂ ಸರ್ಕಾರಿ ಫಾರ್ಮಾಸಿಸ್ಟ್‍ಗಳ ಸಂಘದ ಪದಾಧಿಕಾರಿಗಳು, ಡ್ರಗಿಸ್ಟ್ ಮತ್ತು ಕೆಮಿಸ್ಟ್ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಫಾರ್ಮಾಸಿ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

Translate »