ನಂಜನಗೂಡು, ಡಿ.10- ಕಪಿಲಾ ನದಿ ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡಿದ್ದ ಸಂತ್ರಸ್ತ ದಂಪತಿಗೆ ಯುವ ಬ್ರಿಗೇಡ್ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ. ನಗರದ ಹಳ್ಳದಕೇರಿ ಬಡಾವಣೆ ನಿವಾಸಿ ಗಳಾದ ರಾಜಮ್ಮ-ನಾಗರಾಜು ದಂಪತಿ ಕೆಲ ತಿಂಗಳ ಹಿಂದೆ ಸಂಭವಿಸಿದ ಕಪಿಲಾ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದರು. ತಮ್ಮ ಹೆಸರಲ್ಲಿ ನಿವೇಶನ ದಾಖಲೆ ಇಲ್ಲದ್ದರಿಂದ ಸರ್ಕಾರದ ನೆರವು ಪಡೆಯಲು ಸಾಧ್ಯವಾಗದೆ ಕಂಗಾಲಾ ಗಿದ್ದರು. ಇವರ ಸಂಕಷ್ಟಕ್ಕೆ ಸ್ಪಂದಿಸದ ಯುವ ಬ್ರಿಗೇಡ್ ಕಾರ್ಯಕರ್ತರು ತಿಂಗಳ ಅವಧಿ ಯಲ್ಲಿ ಮನೆ…
ಬೈಕ್‍ಗೆ ಸಾರಿಗೆ ಬಸ್ ಡಿಕ್ಕಿ: ಮಹಿಳೆ ಸಾವು
December 11, 2019ಮೈಸೂರು, ಡಿ.10(ಆರ್‍ಕೆ)- ಕೆಎಸ್‍ಆರ್‍ಟಿಸಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರಿನ ಹಿನಕಲ್ ಸಮೀಪ ಹುಣಸೂರು ರಸ್ತೆಯಲ್ಲಿ ಸೋಮವಾರ ಸಂಭವಿಸಿದೆ. ಪಾಂಡವಪುರ ತಾಲೂಕು ಚಿನಕುರಳಿಯ ಡಿ.ಪಿ.ದೇವೇಗೌಡ ಅವರ ಪತ್ನಿ ಶ್ರೀಮತಿ ಪಾರ್ವತಮ್ಮ(48) ಸಾವನ್ನಪ್ಪಿದವರು. ಮೈಸೂರಿನ ಹೂಟಗಳ್ಳಿಯಲ್ಲಿರುವ ಮಗಳ ಮನೆಗೆ ಬಂದಿದ್ದ ದೇವೇಗೌಡ ಮತ್ತು ಪಾರ್ವತಮ್ಮ ದಂಪತಿ, ಸೋಮವಾರ ಬೆಳಿಗ್ಗೆ 10.15 ಗಂಟೆಗೆ ಬೈಕ್ (ಕೆಎ11-ಇಬಿ2920)ನಲ್ಲಿ ವಾಪಸ್ ಹೋಗುತ್ತಿ ದ್ದಾಗ ದಿ ರೂಸ್ಟ್ ಎದುರು ಹುಣಸೂರು ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಸಾರಿಗೆ ಬಸ್…
ಗೂಡು ಸೇರಿದ ಹಳ್ಳಿ ಹಕ್ಕಿ
December 10, 2019ಹುಣಸೂರು,ಡಿ.9(ಆರ್‍ಕೆ)-ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ನಾಂದಿ ಹಾಡಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೆ ಅದೇ ಕ್ಷೇತ್ರದಲ್ಲಿ ಕಮಲ ಹಿಡಿದು ಸ್ಪರ್ಧೆಗಿಳಿದಿದ್ದ ಹಳ್ಳಿ ಹಕ್ಕಿ ಹೀನಾಯ ಸೋಲುಂಡು, ಗೂಡು ಸೇರಿದೆ. ಎ.ಹೆಚ್.ವಿಶ್ವನಾಥ್ ಅವರು ಉಪಚುನಾವಣೆಯಲ್ಲಿ ಕಮಲ ಪಕ್ಷದಿಂದ ತೊಡೆತಟ್ಟಿ ಈಗ ಕ್ಷೇತ್ರದ ಮತದಾರರ ಕೆಂಗಣ್ಣಿಗೆ ಗುರಿಯಾದಂತಾ ಗಿದೆ. ಸರ್ಕಾರದ ಬೆಂಬಲ, ಕುರುಬ ಸಮಾಜದ ಸಹಕಾರ, ಘಟಾನುಘಟಿ ನಾಯಕರ ಪ್ರಚಾರದಿಂದ ತಾನು ಉಪ ಚುನಾವಣೆಯಲ್ಲಿ ಜಯಗಳಿಸು ತ್ತೇನೆಂಬ ಅತೀವ ವಿಶ್ವಾಸ ಫಲ ನೀಡಲಿಲ್ಲ. ಮುಖ್ಯಮಂತ್ರಿ ಯಾದಿಯಾಗಿ ಇಡೀ ಸಚಿವ ಸಂಪುಟವೇ…
4 ಕ್ಷೇತ್ರಗಳಲ್ಲಿ ಜೆಡಿಎಸ್‍ಗಿಂತ ನೋಟಾಕ್ಕೆ ಅಧಿಕ ಮತ
December 10, 2019ಬೆಂಗಳೂರು: ಉಪ ಚುನಾವಣೆಯ ಫಲಿ ತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಬಿಜೆಪಿಯ 12 ಅಭ್ಯರ್ಥಿಗಳು ಗೆದ್ದಿದ್ದಾರೆ. ಮತಗಳ ಲೆಕ್ಕಾ ಚಾರ ಗಮನಿಸಿದರೆ 4 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳಿಗಿಂತ ನೋಟಾಕ್ಕೆ ಬಿದ್ದ ಮತಗಳೇ ಅಧಿಕವಾಗಿವೆ. 15 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅತಿಯಾದ ಆತ್ಮವಿಶ್ವಾಸವೇ ಜೆಡಿಎಸ್‍ಗೆ ಮುಳುವಾಯ್ತು ಅನ್ನೋ ಚರ್ಚೆ ಶುರುವಾಗಿದೆ. ಯಲ್ಲಾಪುರ, ರಾಣೆಬೆನ್ನೂರು, ಕೆ.ಆರ್.ಪುರ, ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಸ್ಥಾನಕ್ಕೆ ನೋಟಾ ಮತಗಳು ಬಿದ್ದಿವೆ. ಯಲ್ಲಾಪುರ-1,444, ರಾಣೆಬೆನ್ನೂರು-1608, ಕೆ.ಆರ್.ಪುರ-…
ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ
December 10, 2019ಮೈಸೂರು,ಡಿ.9(ಪಿಎಂ)-ರಾಜ್ಯದಲ್ಲಿ ನಡೆದ ಉಪಚುನಾ ವಣೆಯಲ್ಲಿ 15 ಕ್ಷೇತ್ರಗಳ ಪೈಕಿ ಬಿಜೆಪಿ 12ರಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೈಸೂರಿನ ಬಿಜೆಪಿ ಕಚೇರಿ ಆವರಣ ದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಸಲಾಯಿತು. ಮೈಸೂರಿನ ಚಾಮರಾಜಪುರಂನ ಪಕ್ಷದ ಕಚೇರಿ ಆವರಣದಲ್ಲಿ (ಸಚ್ಚಿನ್ ರಾಜೇಂದ್ರ ಭವನ) ಸಮಾವೇಶ ಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ರಾಜೀವ್, ಹಿಂದಿನ ವಿಧಾನಸಭಾ ಸ್ಪೀಕರ್ ರಮೇಶ್‍ಕುಮಾರ್ ಸಂವಿ ಧಾನಬಾಹಿರವಾಗಿ…
ನನ್ನ ಸೋಲಿಗೆ ಬಚ್ಚೇಗೌಡ್ರೇ ನೇರ ಕಾರಣ
December 10, 2019ಬೆಂಗಳೂರು: ನನ್ನ ಸೋಲಿಗೆ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ನೇರ ಕಾರಣ ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಆರೋ ಪಿಸಿದ್ದಾರೆ. ನಗದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡುತ್ತಾ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರನ ತೀರ್ಪು ಅಂತಿಮ. ಹೀಗಾಗಿ ಹೊಸಕೋಟೆ ಉಪ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ನಾನು ಗೌರವಿಸುತ್ತೇನೆ ಎಂದರು. ಪ್ರಜಾತಂತ್ರ ವ್ಯವಸ್ಥೆಯ ಮೇಲೆ ವಿಶ್ವಾಸ ಮತ್ತು ನಂಬಿಕೆಯನ್ನಿಟ್ಟು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಶರತ್ ಬಚ್ಚೇಗೌಡರಿಗೆ ಬಿಜೆಪಿಯಿಂದ ಟಿಕೆಟ್ ನೀಡಿಲ್ಲವೆಂಬ ಕಾರಣಕ್ಕೆ…
ಎಲ್ಲಾ ಸಮಾಜದವರೂ ಕೈ ಹಿಡಿಯುತ್ತಾರೆಂದು ನಂಬಿದ್ದೆ
December 10, 2019ಹುಣಸೂರು ಕ್ಷೇತ್ರದಲ್ಲಿ 45 ರಿಂದ 50 ಸಾವಿರ ಜೆಡಿಎಸ್ ಸಾಂಪ್ರದಾ ಯಿಕ ಮತಗಳಿದ್ದು, ಇತರ ಎಲ್ಲಾ ಸಮಾಜದವರೂ ಕೈ ಹಿಡಿಯು ತ್ತಾರೆಂದು ನಂಬಿ ನಾನು ಸ್ಪರ್ಧೆ ಗಿಳಿದಿದ್ದೆ. ಆದರೆ ಯಾವುದೂ ಕೈಹಿಡಿಯಲಿಲ್ಲ ಎಂದು ಪರಾ ಜಿತ ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಪಕ್ಷದ ವರಿಷ್ಠರು, ಮುಖಂಡರು ಬಂದು, ಮತದಾರರ ಮನವೊಲಿಸಿದರಾದರೂ, ಹುಣಸೂರಲ್ಲಿ ತಮ್ಮ ರಾಜಕೀಯ ಹಿಡಿತ ಸಾಧಿಸಿರುವ ಹಾಗೂ ನನಗೆ ಅತ್ಯಂತ ಪ್ರೀತಿ ಪಾತ್ರರೂ ಆದ ಜಿ.ಟಿ. ದೇವೇ ಗೌಡರೂ ಕಡೇ…
ಹುಣಸೂರಲ್ಲಿ ಬಿಜೆಪಿ ಸೋಲು ನಮಗೆ ಎಚ್ಚರಿಕೆಯ ಗಂಟೆ
December 10, 2019ಮೈಸೂರು, ಡಿ.9(ಆರ್‍ಕೆಬಿ)- ರಾಜ್ಯ ರಾಜಕೀಯದಲ್ಲಿ ಸ್ಥಿರತೆ ಇದ್ದಾಗ ಮಾತ್ರ ರಾಜ್ಯದ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ನೀಡಲು ಸಾಧ್ಯ ಎಂಬುದನ್ನು ತಿಳಿದ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಸಿಎಂ ಯಡಿಯೂರಪ ಸರ್ಕಾರಕ್ಕೆ ರಕ್ಷಣೆ ನೀಡಿ ದ್ದಾರೆ ಎಂದು ಮಾಜಿ ಸಚಿವ, ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ. ಉಪ ಚುನಾವಣೆ ಫಲಿತಾಂಶದ ಬಳಿಕ ಹೇಳಿಕೆ ನೀಡಿರುವ ಅವರು, ರಾಜ್ಯದ ಬಹುತೇಕ ಪ್ರಾಂತ್ಯಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನರು ಬಿಜೆಪಿಗೆ ಆಶೀರ್ವದಿಸಿ ದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ…
ಹುಣಸೂರಲ್ಲಿ ಕಾಂಗ್ರೆಸ್ ವಿಜಯೋತ್ಸವ
December 10, 2019ಹುಣಸೂರು,ಡಿ.9(ಆರ್‍ಕೆ)- ಉಪ ಚುನಾವಣೆಯಲ್ಲಿ ಹೆಚ್.ಪಿ.ಮಂಜುನಾಥ್ ಜಯಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹುಣಸೂರಿನಲ್ಲಿ ಸೋಮ ವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ತಮಟೆ, ಡೋಲು, ಜಾನಪದ ಕಲಾ ತಂಡ ದೊಂದಿಗೆ ಹುಣಸೂರಿನ ಡಿ. ದೇವರಾಜ ಅರಸು ಪುತ್ಥಳಿ ಸಮೀಪ ಹೆದ್ದಾರಿ ಜಂಕ್ಷ ನ್‍ನಲ್ಲಿ ಜಮಾಯಿಸಿದ್ದ ಬೆಂಬಲಿಗರು, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು. ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆಯೇ ಮಂಜುನಾಥ್ ಅವರಿಗೆ ಹಾರ ಹಾಕಿ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದು ಡಿ.ದೇವರಾಜ…
ಮದ್ಯಪಾನ ದುಷ್ಪರಿಣಾಮ:ಚಿತ್ರದಲ್ಲಿ ಅನಾವರಣಗೊಳಿಸಿದ ಚಿಣ್ಣರು
December 10, 2019ಮೈಸೂರು,ಡಿ.9(ಎಂಟಿವೈ)- ಮದ್ಯಪಾ ನದ ಚಟದಿಂದ ಉಂಟಾಗುವ ದುಷ್ಪರಿ ಣಾಮ, ಕಾಮುಕರಿಂದ ರಕ್ಷಿಸಿಕೊಳ್ಳುವ ವಿಧಾನ ವನ್ನು ಚಿತ್ರÀದಲ್ಲಿ ಮೂಡಿಸಿದ ಚಿಣ್ಣರು `ಮದ್ಯಪಾನ ತ್ಯಜಿಸಿ, ಜೀವ ಉಳಿಸಿ’ ಎಂಬ ಸಂದೇಶ ಸಾರಿ ಗಮನ ಸೆಳೆದರು. ದಸರಾ ವಸ್ತುಪ್ರದರ್ಶನ ಆವರಣದ ಲ್ಲಿರುವ ಕನ್ನಡ ಕಾರಂಜಿ ಕಟ್ಟಡದಲ್ಲಿ ಭಾನುವಾರ ವಸ್ತುಪ್ರದರ್ಶನದ ಲಲಿತಕಲಾ ಸಮಿತಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಯಲ್ಲಿ ಪಾಲ್ಗೊಂಡಿದ್ದ, ಚಿಣ್ಣರು ತಮ್ಮ ಕಲ್ಪನೆಯಲ್ಲಿ ಮೂಡಿ ಬಂದ ಚಿತ್ರಗಳನ್ನು ಬಿಡಿಸುವ ಮೂಲಕ ಕುಡಿತದ ಚಟ ಎಷ್ಟು ಅಪಾಯಕಾರಿ ಎನ್ನುವುದನ್ನು ಕುಡುಕರಿಗೆ ತಿಳಿ ಹೇಳಿದರು….










