4 ಕ್ಷೇತ್ರಗಳಲ್ಲಿ ಜೆಡಿಎಸ್‍ಗಿಂತ ನೋಟಾಕ್ಕೆ ಅಧಿಕ ಮತ
ಮೈಸೂರು

4 ಕ್ಷೇತ್ರಗಳಲ್ಲಿ ಜೆಡಿಎಸ್‍ಗಿಂತ ನೋಟಾಕ್ಕೆ ಅಧಿಕ ಮತ

December 10, 2019

ಬೆಂಗಳೂರು: ಉಪ ಚುನಾವಣೆಯ ಫಲಿ ತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಬಿಜೆಪಿಯ 12 ಅಭ್ಯರ್ಥಿಗಳು ಗೆದ್ದಿದ್ದಾರೆ. ಮತಗಳ ಲೆಕ್ಕಾ ಚಾರ ಗಮನಿಸಿದರೆ 4 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳಿಗಿಂತ ನೋಟಾಕ್ಕೆ ಬಿದ್ದ ಮತಗಳೇ ಅಧಿಕವಾಗಿವೆ.

15 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಅತಿಯಾದ ಆತ್ಮವಿಶ್ವಾಸವೇ ಜೆಡಿಎಸ್‍ಗೆ ಮುಳುವಾಯ್ತು ಅನ್ನೋ ಚರ್ಚೆ ಶುರುವಾಗಿದೆ.

ಯಲ್ಲಾಪುರ, ರಾಣೆಬೆನ್ನೂರು, ಕೆ.ಆರ್.ಪುರ, ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಸ್ಥಾನಕ್ಕೆ ನೋಟಾ ಮತಗಳು ಬಿದ್ದಿವೆ. ಯಲ್ಲಾಪುರ-1,444, ರಾಣೆಬೆನ್ನೂರು-1608, ಕೆ.ಆರ್.ಪುರ- 5184, ಕಾಗವಾಡ-1238, ಅಥಣಿ-1532, ಗೋಕಾಕ್-1153, ಹಿರೇ ಕೆರೂರು-789, ವಿಜಯನಗರ-1821, ಚಿಕ್ಕ ಬಳ್ಳಾಪುರ-973, ಯಶವಂತಪುರ-2812, ಮಹಾಲಕ್ಷ್ಮೀ ಲೇಔಟ್-2034, ಶಿವಾಜಿ ನಗರ- 986, ಹೊಸಕೋಟೆ-757, ಕೆಆರ್. ಪೇಟೆ-748, ಹುಣಸೂರು-994

ಜೆಡಿಎಸ್ ಅಭ್ಯರ್ಥಿಗಳು ಪಡೆದ ಮತಗಳು: ಕಾಗವಾಡ-2448, ಗೋಕಾಕ್-27948, ಯಲ್ಲಾಪುರ- 1235, ಹಿರೇಕೆರೂರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ-275, ರಾಣೇ ಬೆನ್ನೂರು-979, ವಿಜಯನಗರ- 3885, ಚಿಕ್ಕಬಳ್ಳಾಪುರ-5869, ಕೆ.ಆರ್.ಪುರ-2048, ಯಶವಂತಪುರ-117023, ಮಹಾಲಕ್ಷ್ಮೀ ಲೇಔಟ್-23516, ಶಿವಾಜಿನಗರ-1098, ಕೆ.ಆರ್.ಪೇಟೆ-56363, ಹುಣಸೂರು-32895 ಮತಗಳನ್ನು ಪಡೆದಿದ್ದಾರೆ. 15 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳನ್ನು ಜೆಡಿಎಸ್ ಪಕ್ಷ ಉಳಿಸಿಕೊಳ್ಳಬೇಕಾಗಿತ್ತು. ಆದರೆ ತಮ್ಮದೇ ಭದ್ರಕೋಟೆಯಾಗಿದ್ದ ಮಹಾಲಕ್ಷ್ಮೀ ಲೇಔಟ್, ಹುಣಸೂರು ಹಾಗೂ ಕೆ.ಆರ್.ಪೇಟೆÀ ಕ್ಷೇತ್ರ ಗಳಲ್ಲಿ ಸೋಲಿಗೆ ಶರಣಾಗಿದ್ದಾರೆ. ಈ ಕ್ಷೇತ್ರ ಗಳನ್ನು ಮತ್ತೊಮ್ಮೆ ತಮ್ಮ ವಶಕ್ಕೆ ಪಡೆದು ಕೊಳ್ಳುವ ತಂತ್ರಗಳನ್ನು ರೂಪಿಸಿದರೂ ಅದು ಫಲಿಸಲಿಲ್ಲ. ಮೈತ್ರಿ ಸರ್ಕಾರ ಉರುಳಿಸಿದ್ದ ಅನರ್ಹರ ವಿರುದ್ದ ಸೇಡು ತೀರಿಸಿಕೊಳ್ಳಲು ಜೆಡಿಎಸ್ ನಾಯಕರು ತಂತ್ರವನ್ನು ಹೆಣೆದಿದ್ದರು.

Translate »