ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ
ಮೈಸೂರು

ಮೈಸೂರು ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

December 10, 2019

ಮೈಸೂರು,ಡಿ.9(ಪಿಎಂ)-ರಾಜ್ಯದಲ್ಲಿ ನಡೆದ ಉಪಚುನಾ ವಣೆಯಲ್ಲಿ 15 ಕ್ಷೇತ್ರಗಳ ಪೈಕಿ ಬಿಜೆಪಿ 12ರಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮೈಸೂರಿನ ಬಿಜೆಪಿ ಕಚೇರಿ ಆವರಣ ದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಸಲಾಯಿತು.

ಮೈಸೂರಿನ ಚಾಮರಾಜಪುರಂನ ಪಕ್ಷದ ಕಚೇರಿ ಆವರಣದಲ್ಲಿ (ಸಚ್ಚಿನ್ ರಾಜೇಂದ್ರ ಭವನ) ಸಮಾವೇಶ ಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ರಾಜೀವ್, ಹಿಂದಿನ ವಿಧಾನಸಭಾ ಸ್ಪೀಕರ್ ರಮೇಶ್‍ಕುಮಾರ್ ಸಂವಿ ಧಾನಬಾಹಿರವಾಗಿ ಅನರ್ಹರು ಎಂದು ಆದೇಶಿಸಿದ್ದವರನ್ನು ಜನತೆ ಇಂದು ಆಯ್ಕೆ ಮಾಡುವ ಮೂಲಕ ಅರ್ಹರು ಎಂದು ತೀರ್ಪು ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

15ರಲ್ಲಿ 12 ಸ್ಥಾನಗಳನ್ನು ಬಿಜೆಪಿ ಮಡಿಲಿಗೆ ನೀಡಿದ ರಾಜ್ಯದ ಜನತೆಗೆ ಪಕ್ಷದ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ. 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಪಕ್ಷದ ನೂತನ ಶಾಸಕರಿಗೆ ಅಭಿನಂದಿಸುತ್ತೇನೆ. ಒಮ್ಮೆಯೂ ಖಾತೆ ತೆರೆಯದ ಮಂಡ್ಯದಲ್ಲಿ ಈ ಬಾರಿ ಕೆಆರ್ ಪೇಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ನಾರಾಯಣಗೌಡ ಗೆಲುವು ಸಾಧಿಸಿದ್ದು, ಇದು ಈ ಭಾಗದಲ್ಲಿ ಪಕ್ಷಕ್ಕೆ ಬಲ ತಂದುಕೊಡಲಿದೆ ಎಂದು ತಿಳಿಸಿದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿಲ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಚುನಾವಣೆ ಯನ್ನು ಪಕ್ಷ ಯಶಸ್ವಿಯಾಗಿ ಎದುರಿಸಿದೆ. ಮೂರೂವರೆ ವರ್ಷ ರಾಜ್ಯದಲ್ಲಿ ಸುಭದ್ರ ಸರ್ಕಾರ ಇರಲಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ನುಡಿದರು.

ಮಾಜಿ ಮೇಯರ್ ಸಂದೇಶಸ್ವಾಮಿ, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್, ಬಿಜೆಪಿ ಮುಖಂಡರಾದ ಮಲ್ಲಪ್ಪಗೌಡ, ಹೇಮಂತಕುಮಾರ್‍ಗೌಡ, ನಗರ ಉಪಾಧ್ಯಕ್ಷ ಜಗದೀಶ್, ಸುರೇಶ್‍ಬಾಬು, ಮೈ.ಪು.ರಾಜೇಶ್ ಮತ್ತಿತರರು ಹಾಜರಿದ್ದರು.

Translate »