ಬೈಕ್‍ಗೆ ಸಾರಿಗೆ ಬಸ್ ಡಿಕ್ಕಿ: ಮಹಿಳೆ ಸಾವು
ಮೈಸೂರು

ಬೈಕ್‍ಗೆ ಸಾರಿಗೆ ಬಸ್ ಡಿಕ್ಕಿ: ಮಹಿಳೆ ಸಾವು

December 11, 2019

ಮೈಸೂರು, ಡಿ.10(ಆರ್‍ಕೆ)- ಕೆಎಸ್‍ಆರ್‍ಟಿಸಿ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರಿನ ಹಿನಕಲ್ ಸಮೀಪ ಹುಣಸೂರು ರಸ್ತೆಯಲ್ಲಿ ಸೋಮವಾರ ಸಂಭವಿಸಿದೆ.

ಪಾಂಡವಪುರ ತಾಲೂಕು ಚಿನಕುರಳಿಯ ಡಿ.ಪಿ.ದೇವೇಗೌಡ ಅವರ ಪತ್ನಿ ಶ್ರೀಮತಿ ಪಾರ್ವತಮ್ಮ(48) ಸಾವನ್ನಪ್ಪಿದವರು. ಮೈಸೂರಿನ ಹೂಟಗಳ್ಳಿಯಲ್ಲಿರುವ ಮಗಳ ಮನೆಗೆ ಬಂದಿದ್ದ ದೇವೇಗೌಡ ಮತ್ತು ಪಾರ್ವತಮ್ಮ ದಂಪತಿ, ಸೋಮವಾರ ಬೆಳಿಗ್ಗೆ 10.15 ಗಂಟೆಗೆ ಬೈಕ್ (ಕೆಎ11-ಇಬಿ2920)ನಲ್ಲಿ ವಾಪಸ್ ಹೋಗುತ್ತಿ ದ್ದಾಗ ದಿ ರೂಸ್ಟ್ ಎದುರು ಹುಣಸೂರು ರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದ ಸಾರಿಗೆ ಬಸ್ (ಕೆಎ 31-ಎಫ್ 1556) ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗಳಾಗಿದ್ದ ಬೈಕಿನ ಹಿಂಬದಿ ಕುಳಿತಿದ್ದ ಪಾರ್ವತಮ್ಮ ಅವರನ್ನು ಒಂಟಿಕೊಪ್ಪಲಿನ ಡಿಆರ್‍ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಸುಮಾರು 12.15 ಗಂಟೆಗೆ ಮೃತಪಟ್ಟರು ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಡಿಕ್ಕಿ ಹೊಡೆದ ಕೆಎಸ್‍ಆರ್‍ಟಿಸಿ ಬಸ್ ಮತ್ತು ಚಾಲಕ ನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »