ಹುಣಸೂರಲ್ಲಿ ಕಾಂಗ್ರೆಸ್ ವಿಜಯೋತ್ಸವ
ಮೈಸೂರು

ಹುಣಸೂರಲ್ಲಿ ಕಾಂಗ್ರೆಸ್ ವಿಜಯೋತ್ಸವ

December 10, 2019

ಹುಣಸೂರು,ಡಿ.9(ಆರ್‍ಕೆ)- ಉಪ ಚುನಾವಣೆಯಲ್ಲಿ ಹೆಚ್.ಪಿ.ಮಂಜುನಾಥ್ ಜಯಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹುಣಸೂರಿನಲ್ಲಿ ಸೋಮ ವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ತಮಟೆ, ಡೋಲು, ಜಾನಪದ ಕಲಾ ತಂಡ ದೊಂದಿಗೆ ಹುಣಸೂರಿನ ಡಿ. ದೇವರಾಜ ಅರಸು ಪುತ್ಥಳಿ ಸಮೀಪ ಹೆದ್ದಾರಿ ಜಂಕ್ಷ ನ್‍ನಲ್ಲಿ ಜಮಾಯಿಸಿದ್ದ ಬೆಂಬಲಿಗರು, ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿದ್ದಂತೆಯೇ ಮಂಜುನಾಥ್ ಅವರಿಗೆ ಹಾರ ಹಾಕಿ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಬಂದು ಡಿ.ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ವi Áಡಿ ಸಿದ ನಂತರ ಕ್ರೇನ್ ಮೂಲಕ ಭಾರೀ ಗಾತ್ರದ ಸೇಬಿನ ಹಾರವನ್ನು ಮಂಜುನಾಥ್ ಅವರಿಗೆ ಸಮರ್ಪಿಸಿದರು. ಈ ವೇಳೆ ಡೋಲಿನ ಸದ್ದಿಗೆ ಕಾರ್ಯ ಕರ್ತರೊಂದಿಗೆ ಹೆಜ್ಜೆ ಹಾಕಿ ಮಂಜುನಾಥ್ ಸಹ ಕುಣಿದು ಕುಪ್ಪಳಿಸಿ ದರು. ನಂತರ ಮಂಜುನಾಥ್ ಅವರನ್ನು ತೆರೆದ ವಾಹನದಲ್ಲಿ ಕರೆದೊಯ್ದ ಬೆಂಬಲಿಗರು ಹುಣಸೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಾರೀ ಮೆರವಣಿಗೆ ನಡೆಸಿದರು.
ಬಿಳಿಕೆರೆಯ ಗಣಪತಿ ದೇವಸ್ಥಾನ, ಗದ್ದಿ ಗೆಯ ಶ್ರೀ ಕೆಂಡಗಣ್ಣಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ಮಂಜುನಾಥ್, ನಂತರ ರತ್ನಪುರಿ ಕಾಲೋನಿಯ ಶ್ರೀ ಆಂಜ ನೇಯಸ್ವಾಮಿ ಮತ್ತು ಜಮಾಲಮ್ಮರ ಘೋರಿಗೂ ವಿಶೇಷ ಪೂಜೆ ಸಲ್ಲಿಸಿದರು.

Translate »