ಮದ್ಯಪಾನ ದುಷ್ಪರಿಣಾಮ:ಚಿತ್ರದಲ್ಲಿ ಅನಾವರಣಗೊಳಿಸಿದ ಚಿಣ್ಣರು
ಮೈಸೂರು

ಮದ್ಯಪಾನ ದುಷ್ಪರಿಣಾಮ:ಚಿತ್ರದಲ್ಲಿ ಅನಾವರಣಗೊಳಿಸಿದ ಚಿಣ್ಣರು

December 10, 2019

ಮೈಸೂರು,ಡಿ.9(ಎಂಟಿವೈ)- ಮದ್ಯಪಾ ನದ ಚಟದಿಂದ ಉಂಟಾಗುವ ದುಷ್ಪರಿ ಣಾಮ, ಕಾಮುಕರಿಂದ ರಕ್ಷಿಸಿಕೊಳ್ಳುವ ವಿಧಾನ ವನ್ನು ಚಿತ್ರÀದಲ್ಲಿ ಮೂಡಿಸಿದ ಚಿಣ್ಣರು `ಮದ್ಯಪಾನ ತ್ಯಜಿಸಿ, ಜೀವ ಉಳಿಸಿ’ ಎಂಬ ಸಂದೇಶ ಸಾರಿ ಗಮನ ಸೆಳೆದರು.

ದಸರಾ ವಸ್ತುಪ್ರದರ್ಶನ ಆವರಣದ ಲ್ಲಿರುವ ಕನ್ನಡ ಕಾರಂಜಿ ಕಟ್ಟಡದಲ್ಲಿ ಭಾನುವಾರ ವಸ್ತುಪ್ರದರ್ಶನದ ಲಲಿತಕಲಾ ಸಮಿತಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಯಲ್ಲಿ ಪಾಲ್ಗೊಂಡಿದ್ದ, ಚಿಣ್ಣರು ತಮ್ಮ ಕಲ್ಪನೆಯಲ್ಲಿ ಮೂಡಿ ಬಂದ ಚಿತ್ರಗಳನ್ನು ಬಿಡಿಸುವ ಮೂಲಕ ಕುಡಿತದ ಚಟ ಎಷ್ಟು ಅಪಾಯಕಾರಿ ಎನ್ನುವುದನ್ನು ಕುಡುಕರಿಗೆ ತಿಳಿ ಹೇಳಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್‍ಕೆಜಿಯಿಂದ ಪಿಯುಸಿವರೆಗೆ 120 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಲ್‍ಕೆಜಿಯಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ತಮಗಿಷ್ಟ ಬಂದ ಚಿತ್ರ ಬರೆಯುವಂತೆ ಸೂಚಿಸಲಾಗಿತ್ತು. ಮಕ್ಕಳು ಪರಿಸರ ಸಂರಕ್ಷಣೆ, ವನ್ಯಧಾಮ, ಪರಿಸರ, ಜೀವವೈವಿಧ್ಯ, ಬೆಟ್ಟ-ಗುಡ್ಡ, ಸರೋವರ, ನದಿ, ಪ್ರೇಕ್ಷಣೀಯ ಸ್ಥಳ, ಪ್ರಾಣಿ-ಪಕ್ಷಿ ಸೇರಿದಂತೆ ವಿವಿಧ ಚಿತ್ರಗಳನ್ನು ಸೊಗಸಾಗಿ ಬರೆದು ಮೆಚ್ಚುಗೆ ಗಳಿಸಿದರು.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ `ಮದ್ಯಪಾನ ತ್ಯಜಿಸಿ, ಜೀವ ಉಳಿಸಿ’ ವಿಷಯದಲ್ಲಿ ಚಿತ್ರ ರಚನೆಗೆ ಅವಕಾಶ ನೀಡಲಾಗಿತ್ತು. ಮದ್ಯಪಾನ ಮಾಡಿ ವಾಹನ ಚಲಾಯಿಸಿ, ಅಪಘಾತ ಮಾಡುವ, ಕುಡಿತದ ಚಟದಿಂದ ಅವನತಿಯತ್ತ ಸಾಗಿದ ಕುಟುಂಬ, ಆರ್ಥಿಕ ಜರ್ಝ ರಿತರಾಗುವ ಸನ್ನಿವೇಶ ಸೇರಿದಂತೆ ವಿವಿಧ ಚಿತ್ರಣಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರ ಬರೆಯುವ ಮೂಲಕ ಕುಡುಕರ ಅವಾಂ ತರವನ್ನು ಅನಾವರಣ ಮಾಡಿದರು. ಈ ಮಕ್ಕಳು ತಮ್ಮ ಚಿತ್ರಗಳ ಮೂಲಕವೇ ಕುಡಿತ ಬಿಡಿ, ಜೀವ ಉಳಿಸಿಕೊಳ್ಳಿ ಎಂಬ ಸಂದೇಶವನ್ನು ಸಾರಿದರು.

ಕಾಲೇಜು ವಿದ್ಯಾರ್ಥಿಗಳು ಕಾಮುಕ ರಿಂದ ಹೇಗೆ ರಕ್ಷಣೆ ಪಡೆಯಬಹುದು, ತಮ್ಮನ್ನು ತಾವೇ ಹೇಗೆ ರಕ್ಷಣೆ ಮಾಡಿಕೊಳ್ಳಬಹುದಂತೆ ಚಿತ್ರ ಬರೆದರು. ಕೆಲವು ವಿದ್ಯಾರ್ಥಿನಿಯರು ಹೈದರಾಬಾದ್ ದಿಶಾ ಅತ್ಯಾಚಾರ, ಹತ್ಯೆ ಪ್ರಕರಣ ಹಾಗೂ ಆ ಕೃತ್ಯ ಎಸಗಿದ ಆರೋಪಿಗಳು ಶೂಟೌಟ್ ನಲ್ಲಿ ಬಲಿಯಾದ ಘಟನೆ, ವಿವಿಧೆಡೆ ಪ್ರಭಾವಿ ಗಳೇ ದೌರ್ಜನ್ಯ ನಡೆಸಿರುವ ಘಟನೆ ಕುರಿತಂತೆ ಚಿತ್ರ ಬರೆದು ಗಮನ ಸೆಳೆದರು.

ಸ್ಪರ್ಧೆಯಲ್ಲಿ ಎಲ್‍ಕೆಜಿ, ಯುಕೆಜಿ ಮಕ್ಕಳು ಬರೆದ ಚಿತ್ರವನ್ನು ಒಂದು ಗುಂಪಿ ನಲ್ಲೂ, 1ರಿಂದ 4, 5ರಿಂದ 7, 8ರಿಂದ 10 ಹಾಗೂ ಕಾಲೇಜು ವಿದ್ಯಾರ್ಥಿಗಳು ಬರೆದ ಚಿತ್ರಗಳನ್ನು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ, 5 ಗುಂಪಿನಲ್ಲೂ ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಿಸಲಾಗುತ್ತದೆ.

ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಲು ನಿರ್ಧರಿಸಲಾ ಗಿದೆ. ಸ್ಪರ್ಧೆ ಲಲಿತಕಲಾ ಸಮಿತಿ ಸದಸ್ಯ, ಕಲಾವಿದ ಶಿವಕುಮಾರ್ ನೇತೃತ್ವದಲ್ಲಿ ನಡೆ ಯಿತು. ಪೋಷಕರು ತಮ್ಮ ಮಕ್ಕಳನ್ನು ದಸರಾ ವಸ್ತುಪ್ರದರ್ಶನಕ್ಕೆ ಕರೆತಂದು, ಸ್ಪರ್ಧೆ ಮುಗಿದ ನಂತರ ಕನ್ನಡ ಕಾರಂಜಿಕಟ್ಟಡ ದಲ್ಲಿ ವ್ಯವಸ್ಥೆ ಮಾಡಿರುವ ಚಿತ್ರಕಲಾ ಪ್ರದರ್ಶನ ವನ್ನು ಮಕ್ಕಳೊಂದಿಗೆ ವೀಕ್ಷಿಸಿ ಸಂಭ್ರಮಿಸಿದರು.

Translate »