ವಿವಿಧ ಜಾನಪದ ಕಲಾತಂಡಗಳ ಸಹಿತ ಹನುಮನ ಬೃಹತ್ ಶೋಭಾಯಾತ್ರೆ
ಮೈಸೂರು

ವಿವಿಧ ಜಾನಪದ ಕಲಾತಂಡಗಳ ಸಹಿತ ಹನುಮನ ಬೃಹತ್ ಶೋಭಾಯಾತ್ರೆ

December 10, 2019

ಮೈಸೂರು,ಡಿ.9(ಆರ್‍ಕೆಬಿ)- ಹನುಮ ಜಯಂತಿ ಅಂಗವಾಗಿ ಗಂಗೋತ್ರಿ ಬಡಾ ವಣೆಯ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ 29ನೇ ವರ್ಷದ ಹನುಮ ಜಯಂತ್ಯುತ್ಸವದ ಅಂಗವಾಗಿ ಭಾನುವಾರ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹನು ಮನ ಪ್ರತಿಮೆಯ ಬೃಹತ್ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಅಲಂಕೃತ ರಥದಲ್ಲಿ ಹನುಮನ ಪ್ರತಿಮೆ ಯನ್ನು ಭಕ್ತಿ ಭಾವದಿಂದ ಕೊಂಡೊಯ್ಯ ಲಾಯಿತು. ಅರಮನೆ ಕೋಟೆ ಆಂಜ ನೇಯಸ್ವಾಮಿ ದೇವಾಲಯದ ಆವರಣ ದಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ನಂದಿ ಧ್ವಜಕ್ಕೆ ಹಾಗೂ ಹನುಮನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ನಗರ ಪೊಲೀಸ್ ಆಯುಕ್ತ ಬಾಲ ಕೃಷ್ಣ, ಮಾಜಿ ಶಾಸಕ ದಿ.ಹೆಚ್.ಎಸ್. ಶಂಕರಲಿಂಗೇಗೌಡರ ಕುಟುಂಬದ ಸದ ಸ್ಯರು, ಮಾಜಿ ಮೇಯರ್ ರವಿಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ದೇವಾಲಯ ಟ್ರಸ್ಟ್‍ನ ಮುಖ್ಯಸ್ಥ, ನಗರ ಪಾಲಿಕೆ ಮಾಜಿ ಸದಸ್ಯ ನಂದೀಶ್ ಪ್ರೀತಂ ನೇತೃತ್ವದಲ್ಲಿ ಹನುಮ ಜೈಕಾರದೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ ನಂದಿ ಕಂಬ, ವೀರಭದ್ರ ಕುಣಿತ, ಪೂಜಾ ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಕರಗ ನೃತ್ಯ, ಮರಗಾಲು, ಕೋಲಾಟ, ಯಕ್ಷ ಗಾನ, ಕೊಂಬು ಕಹಳೆ, ಹುಲಿವೇಷ, ದೊಣ್ಣೆ ವರಸೆ ಸೇರಿದಂತೆ ವಿವಿಧ ಜಾನ ಪದ ಕಲಾತಂಡಗಳು ಕಳೆ ನೀಡಿದವು. ಗಂಗೆ ಬಾಯಿಂದ ನೀರು ಉಕ್ಕುವ ಶಿವನ ಪುತ್ಥಳಿ ಹಾಗೂ ರಾಮ, ಲಕ್ಷ್ಮಣ, ಸೀತೆ, ಆಂಜನೇಯ, ರಾವಣ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಹೊರಟ ಶೋಭಾಯಾತ್ರೆ ದೊಡ್ಡ ಗಡಿಯಾರ, ಅಶೋಕ ರಸ್ತೆ, ನೆಹರು ವೃತ್ತ, ಇರ್ವಿನ್ ರಸ್ತೆ, ಆಯುರ್ವೇದ ವೃತ್ತ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಕೆ.ಜಿ. ಕೊಪ್ಪಲು ಮೂಲಕ ಗಂಗೋತ್ರಿಯಲ್ಲಿರುವ ಹನುಮ ದೇವಸ್ಥಾನವನ್ನು ತಲುಪಿತು.

ಮೈಸೂರಿನಲ್ಲಿ ಭಕ್ತಿ ಭಾವದ ‘ಹನುಮ’ ನಾಮ ಸ್ಮರಣೆ
ಮೈಸೂರು, ಡಿ.9(ಆರ್‍ಕೆಬಿ)- ಹನುಮ ಜಯಂತಿ ಅಂಗವಾಗಿ ಭಾನುವಾರ ಮೈಸೂರಿನಲ್ಲಿ ಎಲ್ಲೆಡೆ ಹನುಮ ನಾಮ ಸ್ಮರಣೆ. ಹನುಮ ದೇವಾಲಯಗಳಲ್ಲಿ ಹೋಮ, ಹವನ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಅನ್ನ ಸಂತರ್ಪಣೆ ನಡೆದವು. ಭಕ್ತರು ಹನುಮನ ದರ್ಶನ ಪಡೆದು ಜೈಕಾರ ಹಾಕಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ, ಗಂಗೋತ್ರಿ ಬಡಾವಣೆ ಆಂಜನೇಯಸ್ವಾಮಿ ದೇವಸ್ಥಾನ, ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ಧಿ ಆಂಜ ನೇಯಸ್ವಾಮಿ ದೇವಸ್ಥಾನ, ಎಂ.ಜಿ.ರಸ್ತೆ ಪಾತಾಳಾಂಜನೇ ಯಸ್ವಾಮಿ ದೇವಸ್ಥಾನ, ಇರ್ವಿನ್ ರಸ್ತೆ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ, ಬನ್ನಿಮಂಟಪ ಹನು ಮಂತನಗರದ ವೀರಾಂಜನೇಯಸ್ವಾಮಿ ದೇವಸ್ಥಾನ, ಮಂಡಿ ಮೊಹಲ್ಲಾ ದತ್ತಾತ್ರೇಯಸ್ವಾಮಿ ದೇವಸ್ಥಾನ, ತ್ಯಾಗರಾಜ ರಸ್ತೆ ವೀರಾಂಜನೇಯಸ್ವಾಮಿ ದೇವಸ್ಥಾನ, ವಿದ್ಯಾರಣ್ಯಪುರಂ ರಾಮಲಿಂಗೇಶ್ವರಸ್ವಾಮಿ ದೇವಸ್ಥಾನ, ನಾರಾಯಣಶಾಸ್ತ್ರಿ ರಸ್ತೆಯ ಆಂಜನೇಯಸ್ವಾಮಿ ಗುಡಿ, ವಿಜಯನಗರ 2ನೇ ಹಂತದ ಪ್ರಸನ್ನ ಗಣಪತಿ ಮತ್ತು ವೀರಾಂಜನೇಯಸ್ವಾಮಿ ದೇವಸ್ಥಾನ, ಹೆಬ್ಬಾಳದ ಗಣಪತಿ, ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಹೆಬ್ಬಾಳು 1ನೇ ಹಂತ ಬಸವೇಶ್ವರನಗರದ ಮಾತಾ ಅಂಜನಾದೇವಿ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನ, ಗೀತಾಮಂದಿರ, ಕೆಆರ್‍ಎಸ್ ರಸ್ತೆಯ ಗೋಕುಲಂನÀ ಆಂಜನೇಯಸ್ವಾಮಿ ದೇವಸ್ಥಾನ, ಕುವೆಂಪುನಗರದ ವೀರಾಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಎಲ್ಲಾ ಹನುಮ ದೇಗುಲಗಳಲ್ಲಿ ಭಕ್ತರು ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ದೇವಾಲಯದ ಒಳಾವರಣವನ್ನು ನಾನಾ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕಗಳ ನೆರವೇರಿಸಲಾಯಿತು. ಇರ್ವಿನ್ ರಸ್ತೆಯಲ್ಲಿರುವ ಧಾರ್ಮಿಕ ದತ್ತಿ ಇಲಾಖೆಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 19ನೇ ವರ್ಷದ ಹನುಮ ಜಯಂತಿ ಪ್ರಯುಕ್ತ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ಹೋಮಗಳು ನಡೆದವು. ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ದಿ ಆಂಜನೇಯಸ್ವಾಮಿಗೆ ವಿಶೇಷ ಹೋಮ, ಅಭಿಷೇಕ ನಡೆದರೆ, ಬನ್ನಿಮಂಟಪ ಹನು ಮಂತನಗರ ಹನುಮ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ನಡೆಯಿತು. ತ್ಯಾಗರಾಜ ರಸ್ತೆಯ ವೀರಾಂಜನೇ ಯಸ್ವಾಮಿ ದೇವಾಲಯದಲ್ಲಿ ಹನುಮನನ್ನು ವಿಶೇಷವಾಗಿ ಅಲಂಕರಿಸಿ, ಪ್ರಸಾದ ವಿನಿಯೋಗ ನಡೆಯಿತು. ಅಗ್ರಹಾರದ ಎಂ.ಜಿ.ರಸ್ತೆಯ ಪಾತಾಳಾಂಜನೇಯಸ್ವಾಮಿ ದೇವಸ್ಥಾನದಲ್ಲಿಯೂ ವಿಶೇಷ ಪೂಜೆ ನೆರವೇರಿತು. ಮಂಡಿ ಮೊಹಲ್ಲಾದ ಬೆಂಕಿನವಾಬ್ ರಸ್ತೆ ದತ್ತಾತ್ರೇಯ ಸ್ವಾಮಿ ದೇವಸ್ಥಾನದಲ್ಲಿ ದತ್ತ ಮತ್ತು ಹನುಮ ಜಯಂತಿ ನಡೆದು ಅಭಿಷೇಕ, ಮಹಾಪೂಜೆಗಳನ್ನು ನಡೆಸಲಾಯಿತು.

ರಾಮಾನುಜ ರಸ್ತೆ ಶಿವರಾತ್ರಿ ರಾಜೇಂದ್ರ ವೃತ್ತದಲ್ಲಿ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮನಿಗೆ ವಿಶೇಷ ಪೂಜೆ ನಡೆದರೆ, ವಿಜಯನಗರ 2ನೇ ಹಂತದಲ್ಲಿ ಪ್ರಸನ್ನ ಗಣಪತಿ ಮತ್ತು ವೀರಾಂ ಜನೇಯಸ್ವಾಮಿ ದೇವಸ್ಥಾನದಲ್ಲಿ 13ನೇ ವರ್ಷದ ಹನುಮ ಜಯಂತ್ಯುತ್ಸವ ಪ್ರಯುಕ್ತ ಅಭಿಷೇಕ, ಹೋಮ, ಪೂರ್ಣಾಹುತಿ, ವಿಶೇಷ ಪೂಜೆ ನಡೆಯಿತು. ವಿದ್ಯಾ ರಣ್ಯಪುರಂ ರಾಮಲಿಂಗೇಶ್ವರ ದೇವಸ್ಥಾನದಲ್ಲಿಯೂ ಹನುಮನಿಗೆ ವಿಶೇಷ ಅಲಂಕಾರ ಪೂಜೆ ನಡೆಸಲಾ ಯಿತು. ಗೀತಾ ಮಂದಿರ ರಸ್ತೆ ಗೀತಾ ಪ್ರಚಾರಿಣೀ ಸಭಾ ಟ್ರಸ್ಟ್ ವತಿಯಿಂದ ಸಾಮೂಹಿಕ ಭಗವದ್ಗೀತೆ ಪಾರಾಯಣ, ಪ್ರಸಾದ ವಿನಿಯೋಗ ನಡೆಯಿತು. ಹೆಬ್ಬಾಳು 1ನೇ ಹಂತದ ಭೈರವೇಶ್ವನಗರ ಮಾತಾ ಅಂಜನಾದೇವಿ ಮತ್ತು ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 26ನೇ ವರ್ಷದ ಹನುಮ ಜಯಂತಿ ಪ್ರಯುಕ್ತ ಸ್ವಾಮಿಯ ರಥೋತ್ಸವ ಬಳಿಕ ಅನ್ನ ಸಂತರ್ಪಣೆ ನಡೆಸಲಾಯಿತು.

Translate »