ಅಂಕ ಗಳಿಕೆ ಹಿಂದೆ ಬಿದ್ದು ಮಾಕ್ರ್ಸ್   ವಾದಿಗಳಾಗಬೇಡಿ, ಕಲೆಯಲ್ಲೂ ಪರಿಣತಿ ಸಾಧಿಸಿ
ಮೈಸೂರು

ಅಂಕ ಗಳಿಕೆ ಹಿಂದೆ ಬಿದ್ದು ಮಾಕ್ರ್ಸ್  ವಾದಿಗಳಾಗಬೇಡಿ, ಕಲೆಯಲ್ಲೂ ಪರಿಣತಿ ಸಾಧಿಸಿ

December 10, 2019

ಮೈಸೂರು,ಡಿ.9(ಪಿಎಂ)-ಅಂಕ ಗಳಿಕೆ ಹಿಂದೆ ಬಿದ್ದು ಕೇವಲ ಮಾಕ್ರ್ಸ್ ವಾದಿ ಗಳಾಗಬೇಡಿ (ಅಂಕ ಗಳಿಕೆ). ಓದಿನೊಂದಿಗೆ ಯಾವುದಾದರೂ ಒಂದು ಕಲೆಯಲ್ಲೂ ಪರಿಣತಿ ಸಾಧಿಸಿ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರ ಸ್ಕøತ ಹಿರಿಯ ರಂಗಕರ್ಮಿ ಡಾ.ಹೆಚ್.ಕೆ. ರಾಮನಾಥ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮೈಸೂರಿನ ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂ ಗಣದಲ್ಲಿ ಜೆಎಸ್‍ಎಸ್ ಕಲಾಮಂಟಪದ ವತಿಯಿಂದ ಹಮ್ಮಿಕೊಂಡಿರುವ ಜೆಎಸ್‍ಎಸ್ ರಂಗೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಸ್ತು, ಶ್ರದ್ಧೆ ಹಾಗೂ ಅರ್ಪಣಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಎ.ವಿ.ವರದಾಚಾರ್ ಕನ್ನಡ ರಂಗಭೂಮಿಯ ದೊಡ್ಡ ಕಲಾವಿದರು. ಅವರ ಕಾಲದಲ್ಲಿ ಮೈಕ್ ವ್ಯವಸ್ಥೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಅವರ ಸಂಭಾಷಣೆ ಬಹುದೂರದವರೆಗೆ ಕೇಳಿಸುತ್ತಿತ್ತು. ನಟಭಯಂಕರ ಎಂದೇ ಖ್ಯಾತನಾಮರಾಗಿದ್ದ ಗಂಗಾಧರರಾಯರು ಕಾಲಿಗೆ ಚುಚ್ಚಿದ ಮೊಳೆಯ ಪರಿವೇ ಇಲ್ಲದೇ ಸತತ ಮೂರು ಗಂಟೆ ಕಾಲ ಅಭಿ ನಯ ಮಾಡಿದ್ದರು. ಈ ಮಹನೀಯರ ಇಂತಹ ಕಾರ್ಯಸಾಧನೆಗೆ ಅವರಲ್ಲಿದ್ದ ಶಿಸ್ತು, ಶ್ರದ್ಧೆ ಹಾಗೂ ಅರ್ಪಣಾ ಮನೋ ಭಾವ ಸಹಕಾರಿಯಾಯಿತು. ಇಂತಹವರು ನಮಗೆ ಆದರ್ಶವಾಗಬೇಕು ಎಂದು ತಿಳಿಸಿದರು.

ಡೋಲಕ್ ಬಾರಿಸುವ ಮೂಲಕ ರಂಗೋತ್ಸವಕ್ಕೆ ಚಾಲನೆ ನೀಡಿದ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕøತ ಅಂತಾರಾಷ್ಟ್ರೀಯ ಯೋಗ ಪಟು ಹೆಚ್.ಖುಷಿ ಮಾತನಾಡಿ, ದಿನ ಕಳೆದಂತೆ ನಮ್ಮ ನಾಡಿನ ಕಲೆ ಹಾಗೂ ಸಂಸ್ಕøತಿ ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾಡಿನ ಕಲೆ ಮತ್ತು ಸಂಸ್ಕøತಿ ಉಳಿಸುವ ನಿಟ್ಟಿನಲ್ಲಿ ಜೆಎಸ್‍ಎಸ್ ಸಂಸ್ಥೆ ರಂಗೋತ್ಸವದಂತಹ ಕಾರ್ಯಕ್ರಮ ರೂಪಿಸಿರುವುದು ಸ್ವಾಗತಾರ್ಹ ಎಂದರು.

ಧಾರವಾಡ ರಂಗಾಯಣದ ಮಾಜಿ ನಿರ್ದೇಶಕ ಡಾ.ಪ್ರಕಾಶ್ ಗರುಡ ಮಾತ ನಾಡಿ, ರಂಗಭೂಮಿ ಸಮಾಜದ ಕಲೆ. ಅದು ಎಲ್ಲವನ್ನೂ ಒಳಗೊಂಡ ಕಲೆ. ಬೇಂದ್ರೆ ಸೇರಿದಂತೆ ಅನೇಕ ಮಹನಿಯರು ರಂಗ ಭೂಮಿಯನ್ನು ಆಧ್ಯಾತ್ಮದ ಹಂತದಲ್ಲಿ ಗುರು ತಿಸಿದ್ದಾರೆ. ತಂತ್ರಜ್ಞಾನ ಯುಗದ ಪೂರ್ವ ದಲ್ಲಿ ರಂಗಕಲೆ ಪರಿಣಾಮಕಾರಿ ಮಾಧ್ಯಮ ವಾಗಿತ್ತು. ಹೀಗಾಗಿ ಶಿಕ್ಷಣದಲ್ಲಿ ರಂಗಕಲೆ ಅಳವಡಿಸಿ ಅದರ ಪ್ರಯೋಜನ ಮಕ್ಕಳಿಗೆ ದೊರೆಯುವಂತೆ ಮಾಡಬೇಕಿದೆ ಎಂದರು.

ಚಾ.ನಗರದಲ್ಲಿ ಪ್ರದರ್ಶನ: ಪ್ರಾಸ್ತಾವಿಕ ವಾಗಿ ಮಾತನಾಡಿದ ಜೆಎಸ್‍ಎಸ್ ಕಲಾ ಮಂಟಪದ ಸಂಚಾಲಕ ಚಂದ್ರಶೇಖರಾ ಚಾರ್ ಹೆಗ್ಗೊಠಾರ, ಇದು 9ನೇ ವರ್ಷದ ರಂಗೋತ್ಸವ. ಶಾಲಾ ಮಕ್ಕಳಿಗೆ ರಂಗ ಭೂಮಿ ಮೂಲಕ ನಮ್ಮ ಸಂಸ್ಕøತಿ ಪರಿಚ ಯಿಸುವ ಉದ್ದೇಶವನ್ನು ಇದು ಹೊಂದಿದೆ. ಈಗಾಗಲೇ ಡಿ.2ರಿಂದ 4ರವರೆಗೆ ಬೆಂಗ ಳೂರಿನಲ್ಲಿ ರಂಗೋತ್ಸವ ಯಶಸ್ವಿಯಾಗಿ ನಡೆದಿದ್ದು, ಮೈಸೂರಿನ ನಂತರ ಚಾಮ ರಾಜನಗರದ ಜೆಎಸ್‍ಎಸ್ ಬಾಲಿಕಾ ಪ್ರೌಢಶಾಲೆಯ ಆವರಣದಲ್ಲಿ ಡಿ.19ರಿಂದ 21ರವರೆಗೆ ರಂಗೋತ್ಸವದ ನಾಟಕ ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು.

ಡಿ.11ರವರೆಗೆ ನಿತ್ಯ 2 ಪ್ರದರ್ಶನ… ಪ್ರವೇಶ ಉಚಿತ…

ಮೈಸೂರಿನ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣ ದಲ್ಲಿ ಇಂದಿನಿಂದ (ಡಿ.9) ಡಿ.11ರವ ರೆಗೆ ಬೆಳಿಗ್ಗೆ 11 ಹಾಗೂ ಸಂಜೆ 6ಕ್ಕೆ ನಾಟಕ ಪ್ರದರ್ಶನಗಳು ನಡೆಯಲಿದ್ದು, ಬೆಳಗಿನ ಪ್ರದರ್ಶನ ಶಾಲಾ-ಕಾಲೇ ಜಿನ ವಿದ್ಯಾರ್ಥಿಗಳಿಗೆ ಮೀಸಲಿರಿಸ ಲಾಗಿದೆ. ಅದೇ ರೀತಿ ಸಂಜೆ ಪ್ರದರ್ಶ ನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸ ಲಾಗಿದ್ದು, ಪ್ರವೇಶ ಉಚಿತವಿರುತ್ತದೆ. ಬೆಳಿಗ್ಗೆ ನಡೆದ ನಾಟಕ ಪ್ರದರ್ಶನವೇ ಸಂಜೆಯೂ ನಡೆಯಲಿದ್ದು, ಇಂದು ಡಾ.ಎಸ್.ವಿ.ಕಶ್ಯಪ್ ರಚನೆ, ಶಕುಂ ತಲಾ ಹೆಗಡೆ ಮತ್ತು ಪಿ.ಜಿ.ಸಮತಾ ನಿರ್ದೇಶನದ `ಚಂದ್ರಮುಖಿ’ ನಾಟಕ ವನ್ನು ಬೆಂಗಳೂರಿನ ಬನಶಂಕರಿಯ ಜೆಎಸ್‍ಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿ ಗಳು ಪ್ರದರ್ಶಿಸಿದರು.

 

ಡಿ.10ರಂದು ಡಾ.ಹೆಚ್.ಎಸ್.ಶಿವ ಪ್ರಕಾಶ್ ರಚನೆ, ಮಂಜುನಾಥ್ ಕಾಚಕ್ಕಿ ನಿರ್ದೇಶನದ `ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕ ಚಾಮರಾಜನಗರದ ಜೆಎಸ್‍ಎಸ್ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರಿಂದ ಪ್ರದರ್ಶನಗೊಳ್ಳಲಿದೆ. ಡಿ.11ರಂದು ಪ್ರಶಾಂತ್ ಬಿ.ಮಾದರಸನ ಕೊಪ್ಪ ಮತ್ತು ಜೀವನ್‍ಕುಮಾರ್ ಬಿ.ಹೆಗ್ಗೋಡು ನಿರ್ದೇಶನದ `ತಿರುಕನ ಕನಸು ಮತ್ತು ಮಂಗಗಳ ಉಪವಾಸ’ ನಾಟಕ ಬೆಂಗಳೂರಿನ ಹೆಚ್‍ಎಸ್‍ಆರ್ ಬಡಾವಣೆಯ ಜೆಎಸ್‍ಎಸ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿದೆ.

 

 

Translate »