ಸಾಧಕ ಬಾಲ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ
ಮೈಸೂರು

ಸಾಧಕ ಬಾಲ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ

December 10, 2019

ಮೈಸೂರು,ಡಿ.9(ಆರ್‍ಕೆಬಿ)-ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಾಲ ಪ್ರತಿಭೆ ಗಳಿಗೆ ಭಾನುವಾರ ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ವತಿ ಯಿಂದ ಮೈಸೂರಿನ ರೋಟರಿ ಶಾಲಾ ಸಭಾಂ ಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋ ತ್ಸವ, ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರಾದ ಧ್ಯುತಿ (ಅದ್ಭುತ ಸ್ಮರಣ ಶಕ್ತಿ), ನಾದಶ್ರೀ ಆರ್. ಭಟ್ (ಗಾಯನ), ಮನಿಷ್ ಪಟೇಲ್ (ಕಿಕ್ ಬಾಕ್ಸಿಂಗ್), ಎಂ.ಶಿವಾನಿ (ಪಾಶ್ಚಿ ಮಾತ್ಯ ನೃತ್ಯ), ಸಿ.ಸ್ಕಂದ, ಆರ್.ಟಿ.ಆದಿತ್ಯ (ಚಿತ್ರಕಲೆ ಮತ್ತು ಕ್ರೀಡೆ) ಧಾತ್ರಿ ಉಮೇಶ್ (ಚೆಸ್), ಕೆ.ಪಿ.ಪ್ರಿಯದರ್ಶನ್ (ಯೋಗ), ಶ್ರೇಷ್ಠ ಎಸ್.ಜುಪ್ತಿಮಠ (ರಂಗಭೂಮಿ ಮತ್ತು ಸಾಹಿತ್ಯ) ಅವರಿಗೆ ಬಾಲಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಸ್.ಜಿಲಿಯನ್ (ಕ್ರೀಡೆ) ಅವರಿಗೆ ಯುವಶ್ರೀ ಪ್ರಶಸ್ತಿ, ಎಸ್.ಕಾರ್ತಿಕ್ (ಕ್ರೀಡೆ) ಮತ್ತು ಅಸ್ರಾರ್ ಉಲ್ಲಾಖಾನ್ (ಚೆಸ್) ಅವರಿಗೆ ಸಾಧನ ಶ್ರೀ ಪ್ರಶಸ್ತಿ, ಕೆ.ಎನ್. ತನುಜಾ ಮತ್ತು ಕೆ.ವಿ.ವಾಸು (ಸಾಹಿತ್ಯ) ಅವರಿಗೆ ಸಾಹಿತ್ಯ ಸಿಂಧು ಪ್ರಶಸ್ತಿ ಹಾಗೂ ಹವ್ಯಾಸಿ ಖಗೋಳ ವಿಜ್ಞಾನಿ ಡಾ.ಎಸ್.ಎ. ಮೋಹನಕೃಷ್ಣ ಅವರಿಗೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಾಧನ ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ಇದಕ್ಕೂ ಮುನ್ನ ಅಂತಾ ರಾಷ್ಟ್ರೀಯ ಯೋಗಪಟು ಹೆಚ್.ಖುಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿ, ಮಕ್ಕಳ ಸಾಮಥ್ರ್ಯಕ್ಕೆ ತಕ್ಕಂತೆ ಓದುವ ಮಕ್ಕಳಲ್ಲಿ ಕೆಲವರು ಕ್ರೀಡೆ ಯಂತಹ ಪಠ್ಯೇತರ ಚಟುವಟಿಕೆಯಲ್ಲಿ ತೊಡಗುತ್ತಾರೆ. ಪೋಷಕರು ಅಂಕ ಮತ್ತು ರ್ಯಾಂಕ್‍ಗಾಗಿ ಒತ್ತಡ ಹೇರಬೇಡಿ. ಯೋಗ ಮತ್ತು ಕ್ರೀಡೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳಲು ಪ್ರೇರೇಪಿಸಿದರೆ ಮಕ್ಕಳು ವಿಶೇಷ ಸಾಧನೆ ಗಳನ್ನು ಮಾಡಲು ಅವಕಾಶವಾಗುತ್ತದೆ ಎಂದರು.

ಕೆಲ ವರ್ಷದ ಹಿಂದೆ ನನಗೂ ಇದೇ ರೀತಿ ಪ್ರಶಸ್ತಿ ಬಂದಿತ್ತು. ಅಂಥದೇ ಕಾರ್ಯ ಕ್ರಮಕ್ಕೆ ನಾನು ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ. ಯೋಗದಲ್ಲಿ ನಾನು ಸಾಧನೆ ಮಾಡಲು ನನಗೆ ಸಿಕ್ಕಿದ ಈ ಪ್ರಶಸ್ತಿಯೇ ಕಾರಣ. ರಾಜ್ಯ ಸರ್ಕಾರ ನನ್ನನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ನನ್ನ ಜವಾಬ್ದಾರಿ ಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ಮಕ್ಕಳ ಸಾಹಿತಿ ಜೀನಹಳ್ಳಿ ಸಿದ್ದಲಿಂಗಪ್ಪ ಸಾಧಕ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿ ದರು. ಉಪನ್ಯಾಸಕಿ ಡಾ.ಸಿ.ತೇಜೋವತಿ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ.ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಎನ್. ಜಯಂತಿ ಇನ್ನಿತರರು ಉಪಸ್ತಿತರಿದ್ದರು.

Translate »