ವಿದ್ವಾಂಸರ ಕೊರತೆ ಮುಂದುವರೆದರೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮುಚ್ಚುವ ಸ್ಥಿತಿ
ಮೈಸೂರು

ವಿದ್ವಾಂಸರ ಕೊರತೆ ಮುಂದುವರೆದರೆ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮುಚ್ಚುವ ಸ್ಥಿತಿ

December 10, 2019

ಮೈಸೂರು,ಡಿ.9(ಆರ್‍ಕೆಬಿ)-ಮೈಸೂ ರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿದ್ವಾಂಸರ ಕೊರತೆ ಇದ್ದು, ಇನ್ನೆರಡು ವರ್ಷದಲ್ಲಿ ಸಂಸ್ಥೆಗೆ ವಿದ್ವಾಂ ಸರು ಬರದಿದ್ದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯನ್ನೇ ಮುಚ್ಚಬೇಕಾಗಬಹುದು ಎಂದು ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಇಂದಿಲ್ಲಿ ಬೇಸರದಿಂದ ನುಡಿದರು.

ಮೈಸೂರಿನ ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣ ದಲ್ಲಿ ಮೈಸೂರು ವಿವಿ ಶ್ರೀ ಬಸವ ಸಾಮಾ ಜಿಕ ಪರಿಷ್ಕರಣೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಜಂಟಿ ಆಶ್ರಯ ದಲ್ಲಿ ಬಸವಣ್ಣ ಅವರನ್ನು ಕುರಿತ ಆರು ಕೃತಿಗಳ ಕಾದಂಬರಿಗಳ ಮೇಲೆ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಹಸ್ತ ಪ್ರತಿ ಮಾಲೆಯ ಮೂರು ಕೃತಿಗಳನ್ನು ಬಿಡು ಗಡೆ ಮಾಡಿ ಮಾತನಾಡಿದರು. ಬಸವಣ್ಣ ಅವರ ಮೇಲೆ ಕನ್ನಡದಲ್ಲಿ ಸೃಷ್ಟಿಯಾಗಿರುವ ಅಗಾಧ ಸಾಹಿತ್ಯ ಕೃತಿಗಳ ಕುರಿತು ಅಧ್ಯ ಯನ ನಡೆಯಬೇಕು. ಅವರ ವಚನಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಮುಂದಿನ ವರ್ಷದಿಂದ ಬಸವ ಸಾಹಿತ್ಯವನ್ನು ಎಲ್ಲಾ ಸ್ನಾತಕೋತ್ತರ ವಿಷಯ ಗಳಿಗೆ ಐಚ್ಛಿಕ ಆಯ್ಕೆ ವಿಷಯವಾಗಿ ಮಾಡ ಲಾಗಿದೆ. ಇಂತಹ ಅಧ್ಯಯನ ಪೀಠಗಳನ್ನು ಅಭಿವೃದ್ಧಿಗೊಳಿಸಲು ಉತ್ತಮ ಲೇಖಕರು, ಚಿಂತಕರು, ಅಧ್ಯಾಪಕರನ್ನು ನಿಯೋಜಿಸ ಲಾಗುವುದು ಎಂದರು. ಸುತ್ತೂರು ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್, ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರಯ್ಯ, ಪ್ರೊ.ಹೊಂಗನೂರು ನಂಜಯ್ಯ, ಪಿ.ಕೆ.ರಾಜಶೇಖರ್, ಎಂ.ಚಂದ್ರ ಶೇಖರ್ ಇನ್ನಿತರರು ಉಪಸ್ಥಿತರಿದ್ದರು.

Translate »