ಹುಣಸೂರಲ್ಲಿ ಬಿಜೆಪಿ ಸೋಲು ನಮಗೆ ಎಚ್ಚರಿಕೆಯ ಗಂಟೆ
ಮೈಸೂರು

ಹುಣಸೂರಲ್ಲಿ ಬಿಜೆಪಿ ಸೋಲು ನಮಗೆ ಎಚ್ಚರಿಕೆಯ ಗಂಟೆ

December 10, 2019

ಮೈಸೂರು, ಡಿ.9(ಆರ್‍ಕೆಬಿ)- ರಾಜ್ಯ ರಾಜಕೀಯದಲ್ಲಿ ಸ್ಥಿರತೆ ಇದ್ದಾಗ ಮಾತ್ರ ರಾಜ್ಯದ ಅಭಿವೃದ್ಧಿ ಮತ್ತು ಉತ್ತಮ ಆಡಳಿತ ನೀಡಲು ಸಾಧ್ಯ ಎಂಬುದನ್ನು ತಿಳಿದ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವದಿಸಿ ಸಿಎಂ ಯಡಿಯೂರಪ ಸರ್ಕಾರಕ್ಕೆ ರಕ್ಷಣೆ ನೀಡಿ ದ್ದಾರೆ ಎಂದು ಮಾಜಿ ಸಚಿವ, ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ತಿಳಿಸಿದ್ದಾರೆ.

ಉಪ ಚುನಾವಣೆ ಫಲಿತಾಂಶದ ಬಳಿಕ ಹೇಳಿಕೆ ನೀಡಿರುವ ಅವರು, ರಾಜ್ಯದ ಬಹುತೇಕ ಪ್ರಾಂತ್ಯಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನರು ಬಿಜೆಪಿಗೆ ಆಶೀರ್ವದಿಸಿ ದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನಾಯಕತ್ವ ಹಾಗೂ ರಾಜ್ಯದಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ನಾಯಕತ್ವದ ಅವಶ್ಯಕತೆಯಿದೆ ಎಂಬುದು  ಚುನಾವಣೆಯ ಮೂಲಕ ಜನತೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮತದಾರ ಪ್ರಭುಗಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ಹುಣಸೂರಲ್ಲಿ ನಿರೀಕ್ಷಿತ ಫಲ ಪಡೆಯಲು ಸಾಧ್ಯವಾಗಲಿಲ್ಲ. ಈಗಾಗಲೇ ಹುಣಸೂರಿನ ಜನತೆ ಎರಡು ಬಾರಿ ಬಿಜೆಪಿಯನ್ನು ಗೆಲ್ಲಿಸಿದ್ದರು. ಆದರೆ ಈ ಭಾರಿ ಗೆಲ್ಲಲು ಸಾಧ್ಯವಾಗಿಲ್ಲ. ಆದ್ದರಿಂದ ಇದೊಂದು ನಮಗೆ ಎಚ್ಚರಿಕೆ ಗಂಟೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ  ಜನತೆಯ ಭಾವನೆ ಗಳನ್ನು ಅರಿತು  ಪಕ್ಷವನ್ನು ಸಂಘಟನೆ ಮಾಡುವುದಲ್ಲದೇ, ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನತೆಯ ಬೆಂಬಲ  ಪಡೆಯಬಹುದು ಎಂಬ ಜನರ ಈ ಸಂದೇಶವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಅದರ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು. ಗೆಲುವಿಗೆ ಕಾರಣೀಭೂತರಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ   ನಳಿನ್‍ಕುಮಾರ್ ಕಟೀಲ್ ಅÀವರನ್ನು ರಾಮದಾಸ್ ಅಭಿನಂದಿಸಿದ್ದಾರೆ.

 

 

 

Translate »