ಎಲ್ಲಾ ಸಮಾಜದವರೂ ಕೈ ಹಿಡಿಯುತ್ತಾರೆಂದು ನಂಬಿದ್ದೆ
ಮೈಸೂರು

ಎಲ್ಲಾ ಸಮಾಜದವರೂ ಕೈ ಹಿಡಿಯುತ್ತಾರೆಂದು ನಂಬಿದ್ದೆ

December 10, 2019

ಹುಣಸೂರು ಕ್ಷೇತ್ರದಲ್ಲಿ 45 ರಿಂದ 50 ಸಾವಿರ ಜೆಡಿಎಸ್ ಸಾಂಪ್ರದಾ ಯಿಕ ಮತಗಳಿದ್ದು, ಇತರ ಎಲ್ಲಾ ಸಮಾಜದವರೂ ಕೈ ಹಿಡಿಯು ತ್ತಾರೆಂದು ನಂಬಿ ನಾನು ಸ್ಪರ್ಧೆ ಗಿಳಿದಿದ್ದೆ. ಆದರೆ ಯಾವುದೂ ಕೈಹಿಡಿಯಲಿಲ್ಲ ಎಂದು ಪರಾ ಜಿತ ಜೆಡಿಎಸ್ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಪಕ್ಷದ ವರಿಷ್ಠರು, ಮುಖಂಡರು ಬಂದು, ಮತದಾರರ ಮನವೊಲಿಸಿದರಾದರೂ, ಹುಣಸೂರಲ್ಲಿ ತಮ್ಮ ರಾಜಕೀಯ ಹಿಡಿತ ಸಾಧಿಸಿರುವ ಹಾಗೂ ನನಗೆ ಅತ್ಯಂತ ಪ್ರೀತಿ ಪಾತ್ರರೂ ಆದ ಜಿ.ಟಿ. ದೇವೇ ಗೌಡರೂ ಕಡೇ ಘಳಿಗೆಯಲ್ಲಿ ಅನ್ಯಾಯ ಮಾಡಿ, ಕಾಂಗ್ರೆಸ್ ಬೆಂಬಲಿಸಿದ್ದು ನನ್ನ ಸೋಲಿಗೆ ಕಾರಣವಾಯಿತು ಎಂದು ಸೋಮಶೇಖರ್ ನುಡಿ ದರು. ನನಗೆ ಇದು ಮೊದಲ ಚುನಾವಣೆ. ಜನರು ನೀಡಿದ ತೀರ್ಪಿಗೆ ತಲೆ ಬಾಗುತ್ತೇನೆ. ನನಗೆ ಮತ ಹಾಕಿದ ಜನರು, ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞನಾಗಿರುತ್ತೇನೆ ಎಂದು ತಿಳಿಸಿದರು.

 

Translate »