ಮೈಸೂರು, ಡಿ.2(ಎಂಕೆ)- ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣಾ ಇಪ್ಪತ್ತಾರನೆಯ ಸಂಗೀತ ಸಮ್ಮೇಳನಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜೆಎಸ್‍ಎಸ್ ಸಂಗೀತ ಸಭಾ ಟ್ರಸ್ಟ್ ಆಯೋಜಿಸಿರುವ 5 ದಿನಗಳ ಸಂಗೀತ ಸಮ್ಮೇ ಳನವನ್ನು ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಸ್ಥಾಪಕ ಭಾಷ್ಯಂ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂಗೀತ-ಸಾಹಿತ್ಯ ಸರ ಸ್ವತಿಯ ಹೃದಯವಾಗಿದೆ. ಸಂಗೀತ ಸಾಧಾರಣವಾದುದ್ದಲ್ಲ. ಬ್ರಹ್ಮಧ್ಯಾನ, ಯೋಗಧ್ಯಾನದ ಶಿಕ್ಷಣ ಪಡೆಯುವಂತೆಯೇ ಆಚಾರ್ಯ…
ಯುವಕನನ್ನು ಅಪಹರಿಸಿ 50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರ ಸೆರೆ
December 3, 2019ಮೈಸೂರು, ಡಿ.2(ಆರ್‍ಕೆ)- ಯುವಕನನ್ನು ಅಪಹರಿಸಿ 50 ಸಾವಿರ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರನ್ನು ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಮೈಸೂರಿನ ನಾಡನಹಳ್ಳಿಯ ಮಂಜುನಾಥ ಅಲಿಯಾಸ್ ಮಂಜು(29), ನಾಗರಾಜು ಅಲಿಯಾಸ್ ಕೋತಿ ನಾಗ(25) ಹಾಗೂ ಹೆಬ್ಬಾಳು 3ನೇ ಹಂತದ ಸುಬ್ರಹ್ಮಣ್ಯೇಶ್ವರ ನಗರ ನಿವಾಸಿ ನವೀನ್(32) ಬಂಧಿತರು. ಡಿಸೆಂಬರ್ 1ರಂದು ಬೆಳಿಗ್ಗೆ 11 ಗಂಟೆ ವೇಳೆಗೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವೇಗೌಡ ಸರ್ಕಲ್ ಬಳಿಯಿಂದ ಯಶವಂತ ಎಂಬ 21 ವರ್ಷದ ಯುವಕನನ್ನು ಅಪಹರಿಸಿದ್ದರು. ಆತನ…
ಅಯೋಧ್ಯೆ ತೀರ್ಪು: ಸುಪ್ರೀಂಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ ಜಮಿಯತ್- ಉಲಮಾ-ಇ- ಹಿಂದ್
December 3, 2019ನವದೆಹಲಿ, ಡಿ.2- ಅಯೋಧ್ಯೆಯ ರಾಮ ಜನ್ಮಭೂಮಿ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‍ನ ಸಾಂವಿ ಧಾನಿಕ ಪೀಠ ನೀಡಿದ ತೀರ್ಪು ಮರು ಪರಿ ಶೀಲಿಸುವಂತೆ ಕೋರಿ ಜಮಿಯತ್- ಉಲಮಾ -ಇ-ಹಿಂದ್ ಸೋಮವಾರ ಅರ್ಜಿ ಸಲ್ಲಿ ಸಿದೆ. ಡಿಸೆಂಬರ್ 9ರಂದು ವಿವಾದಿತ ಭೂಮಿ ರಾಮಮಂದಿರಕ್ಕೆ, ಮಸೀದಿಗೆ ಪರ್ಯಾಯ ಜಮೀನು ನೀಡಿ ಸಂವಿಧಾನಿಕ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಇಂದು 217 ಪುಟಗಳ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಅಯೋಧ್ಯೆ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ಯೋಚನೆ ಮಾಡಿದ್ದೇವೆ ಹಾಗೂ…
ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕೈದಿಗಳಿಗೆ ಏಳು ವರ್ಷ ಜೈಲು ಶಿಕ್ಷೆ
December 3, 2019ಮೈಸೂರು, ಡಿ.2(ಎಸ್‍ಬಿಡಿ)-ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕೆ.ಆರ್.ಆಸ್ಪತ್ರೆಯಲ್ಲಿ ರುವ ಜೈಲ್ ವಾರ್ಡಿನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಕೈದಿಗಳಿಗೆ ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮೈಸೂರು ಕಾರಾಗೃಹ ವಾಸಿಗಳಾದ ಸುನೀಲ್ ಹಾಗೂ ಸತೀಶ್‍ಗೆ ಶಿಕ್ಷೆ ವಿಧಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ್ದ ಸತೀಶ್, ಸುನೀಲ್ ಹಾಗೂ ತಿಮ್ಮರಾಜು ಅನಾರೋಗ್ಯದಿಂದ ಬಳಲು ತ್ತಿದ್ದರೆಂದು ಕೆ.ಆರ್. ಆಸ್ಪತ್ರೆಯ ಜೈಲ್ ವಾರ್ಡ್‍ಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. 2011ರ ಜ.18ರಂದು ಈ…
ಸಿದ್ದು ಕಾಂಗ್ರೆಸ್ `ವೈಟ್‍ವಾಶ್’ ಮಾಡಿ ಮನೆಗೆ ಹೋಗುತ್ತಾರೆ
December 2, 2019ಹುಣಸೂರು,ಡಿ.1(ಎಸಿಪಿ/ಹೆಚ್‍ಎಸ್‍ಎಂ)- ಡಿಸೆಂಬರ್ 9ರ ನಂತರ ಕಾಂಗ್ರೆಸ್‍ನಲ್ಲಿ ಬದಲಾವಣೆ ಬರಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‍ನ್ನು ವೈಟ್‍ವಾಶ್ ಮಾಡಿ ಮನೆಗೆ ತೆರಳುತ್ತಾರೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು. ಹುಣಸೂರಿನ ವಾಲ್ಮೀಕಿ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಪರವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಂತರ ಸುದ್ದಿಗೋಷ್ಠಿ ನಡೆಸಿ, ಕ್ರಿಕೆಟ್‍ನಲ್ಲಿ ಸರಣಿ ಸೋಲುಕಂಡರೆ `ವೈಟ್‍ವಾಶ್’ ಅಂತಾರೆ ಅದೇ ರೀತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸರಣಿ ಸೋಲು ತಂದುಕೊಡುವ ಮೂಲಕ ಸಿದ್ದ ರಾಮಯ್ಯ ಆ ಪಕ್ಷವನ್ನು ವೈಟ್‍ವಾಶ್ ಮಾಡಿ ಮನೆಗೆ…
ಕಾಂಗ್ರೆಸ್, ಜೆಡಿಎಸ್ ಪುನರ್ ಮೈತ್ರಿ ಸರ್ಕಾರ
December 2, 2019ಮೈಸೂರು,ಡಿ.1(ಎಸ್‍ಬಿಡಿ)- ಕಾಂಗ್ರೆಸ್-ಜೆಡಿಎಸ್ ಪುನರ್ ಮೈತ್ರಿ ಯೊಂದಿಗೆ ರಾಜ್ಯದಲ್ಲಿ ಸರ್ಕಾರ ರಚನೆ ಯಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸದ್ಯ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಉಪ ಚುನಾವಣೆಯನ್ನು ಎದು ರಿಸುತ್ತಿಲ್ಲ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ ಫಲಿತಾಂಶದ ಬಳಿಕ ಕಾಂಗ್ರೆಸ್-ಜೆಡಿಎಸ್ ಪುನರ್ ಮೈತ್ರಿಯಲ್ಲಿ ಸರ್ಕಾರ ರಚನೆ ಯಾಗಲಿದೆ ಎಂದು ಭವಿಷ್ಯ ನುಡಿದರು. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ…
ಬೇಲ್ ಮೇಲೆ ಬಂದನಂತರವೂ ಅದೇ ಚಾಳಿ ಮುಂದುವರಿಸಿದ್ದರು
December 2, 2019ಮೈಸೂರು, ಡಿ.1(ಆರ್‍ಕೆ)- ಅಪಘಾತ ಮಾಡಿ ಪರಾರಿ ಯಾಗುತ್ತಿದ್ದೀರೆಂದು ಧಮಕಿ ಹಾಕಿ ಬೆದರಿಸಿ ಸಂದಾನದ ನೆಪದಲ್ಲಿ ವಾಹನ ಸವಾರರಿಂದ ಹಣ ದೋಚುತ್ತಿದ್ದ ಜಮೀರ್ ಮತ್ತು ಜಮೀಲ್ ಅಹಮದ್ ಜೈಲಿನಿಂದ ಚಾಮೀನಿನ ಮೇಲೆ ಹೊರಬಂದ ನಂತರವೂ ಅದೇ ಚಾಳಿ ಮುಂದುವರಿಸಿದ್ದರು. ಈ ಹಿಂದೆ 2017ರ ನವೆಂಬರ್ 8ರಂದು ಮೈಸೂರಿನ ಕುವೆಂಪು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ಕೆಫೆ ಬಿರಿಯಾನಿ ಹೋಟೆಲ್ ಮಾಲೀಕ ಶ್ರೀನಿವಾಸ್ ಅವರ ಕಾರನ್ನು ಅಡ್ಡಗಟ್ಟಿ ಅಪಘಾತ ಮಾಡಿ ನಿಲ್ಲಿಸದೇ ಬಂದಿದ್ದೀರೆಂದು ಬಾಯಿಗೆ ಬಂದಂತೆ ಮಾತನಾಡಿ ಚಿಕಿತ್ಸೆಗೆ ಹಣಕೊಡುವಂತೆ…
ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ: ಸಿಎಂ ಕೆಸಿಆರ್
December 2, 2019ಹೈದರಾಬಾದ್, ಡಿ.1- ತೆಲಂಗಾಣದ ರಾಜಧಾನಿ ಹೈದರಾ ಬಾದ್‍ನ ಶಾನ್‍ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 26 ವರ್ಷದ ಪಶು ವೈದ್ಯೆಯ ಸಾಮೂಹಿಕ ಅತ್ಯಾಚಾರ-ಹತ್ಯೆ ಪ್ರಕರಣದ ವಿಚಾರಣೆಗೆ `ತ್ವರಿತಗತಿ ನ್ಯಾಯಾ ಲಯ’ ಸ್ಥಾಪಿಸಲಾಗುವುದು ಎಂದು ತೆಲಂ ಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಭಾನುವಾರ ಪ್ರಕಟಿಸಿದ್ದಾರೆ. ಪಶುವೈದ್ಯೆಯ ಅತ್ಯಾಚಾರ-ಹತ್ಯೆ ಕೃತ್ಯ ಬಲು ಅಮಾನವೀಯ, ಅಷ್ಟೇ ಭಯಾನಕ ಎಂದು ಮುಖ್ಯಮಂತ್ರಿ ಕೆಸಿಆರ್ ಪ್ರತಿಕ್ರಿಯಿಸಿದ್ದಾರೆ. ನ.27ರ ಬುಧವಾರ ರಾತ್ರಿ ಘಟನೆ ನಡೆದ (ನಾಲ್ಕು ದಿನಗಳ) ಬಳಿಕ ಇದೇ ಮೊದಲ ಬಾರಿಗೆ ಅವರು ಪ್ರತಿಕ್ರಿಯೆ…
ಇಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ
December 2, 2019ಮೈಸೂರು, ಡಿ.1(ಆರ್‍ಕೆ)- ನಾಳೆ (ಡಿ.2) ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ನಡೆ ಯಲಿದೆ. ಷಷ್ಠಿ ಅಂಗ ವಾಗಿ ಸಿದ್ದಲಿಂಗಪುರ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ಯಲ್ಲಿರುವ ಶ್ರೀ ಸುಬ್ರ ಹ್ಮಣ್ಯೇಶ್ವರ ದೇವ ಸ್ಥಾನ ದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಲಿದೆ. ಸೋಮವಾರ ಮುಂಜಾನೆ 4 ಗಂಟೆಯಿಂದ ದೇವರಿಗೆ ಅಭಿಷೇಕ, ಅರ್ಚನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ಸಾವಿ ರಾರು ಭಕ್ತರು ದೇವರ ದರ್ಶನಕ್ಕೆ ತೆರಳುವುದರಿಂದ ಅಲ್ಲಿ ಬ್ಯಾರಿಕೇಡ್ ಅಳವಡಿಸಿ ಸೂಕ್ತ ವ್ಯವಸ್ಥೆ ಮಾಡಿರುವ ಮೈಸೂರು ತಹಶೀಲ್ದಾರ್ ಟಿ.ರಮೇಶ…
ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್‍ನ ನಾನಾ ಪಟೋಲೆ ಅವಿರೋಧ ಆಯ್ಕೆ
December 2, 2019ಮುಂಬೈ: ಮಹಾರಾಷ್ಟ್ರ ವಿಧಾನ ಸಭೆಯ ನೂತನ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ನಾನಾ ಪಟೋಲೆ ಜೊತೆಗೆ ಬಿಜೆಪಿ ಶಾಸಕ ಕಿಷನ್ ಎಸ್ ಕಥೋರೆ ಕೂಡ ಸ್ಪೀಕರ್ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟೋಲೆ ವಿದರ್ಭ ಜಿಲ್ಲೆಯ ಸಕೋಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಪಕ್ಷದ ಹಿರಿಯ ಧುರೀಣ ರಾಗಿದ್ದಾರೆ. ಸ್ಪೀಕರ್‍ನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಸರ್ವಪಕ್ಷ…










